32ನೇ ಬಾರಿ ಎವರೆಸ್ಟ್ ಏರಿದ ರಿಟಾ: ವಿಶ್ವದಾಖಲೆ! ತನ್ನದೇ ದಾಖಲೆ ಮುರಿದ ನೇಪಾಳದ ಪರ್ವತಾರೋಹಿ

Picture of Savistara

Savistara

Bureau Report

ಕಟ್ಮಂಡು : ಜಗತ್ತಿನ ಅತಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು 32ನೇ ಬಾರಿಗೆ ನೇಪಾಳದ ಪರ್ವತಾರೋಹಿ ಕಾಮಿ ರಿಟಾ ಶೆರ್ಪಾ ಭಾನುವಾರ ಏರಿದ್ದಾರೆ. ಈ ಮೂಲಕ ಅತಿ ಹೆಚ್ಚು ಬಾರಿ ಎವರೆಸ್ಟ್ ಏರಿದ ತಮ್ಮದೇ ವಿಶ್ವ ದಾಖಲೆಯನ್ನು ಮುರಿದು ಮತ್ತೊಂದು ಇತಿಹಾಸ ಸೃಷ್ಟಿಸಿದ್ದಾರೆ.’ಎವರೆಸ್ಟ್ ಮ್ಯಾನ್’ ಎಂದೇ ಜನಪ್ರಿಯರಾಗಿರುವ 56 ವರ್ಷದ ಈ ಹಿರಿಯ ಪರ್ವತಾರೋಹಿ, 1992 ರಲ್ಲಿ ವೃತ್ತಿಪರ ಪರ್ವತಾರೋಹಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು 1994ರಲ್ಲಿ ಮೊದಲ ಬಾರಿಗೆ ಎವರೆಸ್ಟ್ ಏರಿದ್ದರು. ನೇಪಾಳದ ಮತ್ತೋರ್ವ ಪರ್ವತಾರೋಹಿ ಪಸಾಂಗ್ ದಾವಾ 29 ಬಾರಿ ಎವರೆಸ್ಟ್ ಏರಿದ್ದು, 2ನೇ ಸ್ಥಾನದಲ್ಲಿದ್ದಾರೆ.

ಅತಿಹೆಚ್ಚು ಬಾರಿ ಎವರೆಸ್ಟ್ ಏರಿದ ಮಹಿಳೆ ನೇಪಾಳದ ಲಕ್ಪಾ ಒಂದೆಡೆ ನೇಪಾಳದ ರಿಟಾ ಅತಿಹೆಚ್ಚು ಬಾರಿ ಎವರೆಸ್ಟ್ ಏರಿದ ದಾಖಲೆ ಬಲಪಡಿಸಿಕೊಂಡಿದ್ದರೆ, ಇನ್ನೊಂದೆಡೆ ನೇಪಾಳದವರೇ ಆದ ಲಕ್ಷಾ ಶೇರ್ಪಾ ಅವರು 11ನೇ ಬಾರಿಗೆ ಯಶಸ್ವಿಯಾಗಿ ಈ ಶಿಖರವನ್ನು ಭಾನುವಾರ ಏರಿದ್ದಾರೆ ಮೌಂಟೇನ್‌ ಕ್ಲೀನ್‌ ಖ್ಯಾತಿಯ ಇವರೂ ಕೂಡ ತಮ್ಮದೇ ಆದ ವಿಶ್ವ ದಾಖಲೆಯನ್ನು ಮುರಿದಿರುವುದು ವಿಶೇಷ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!