ಸಂಚಾರ ನಿಯಮಗಳ ಬಗ್ಗೆ ಕಠಿಣ ನಿಲುವು ಕೈಗೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಸುಳ್ಯ ನಗರದ ಅನೇಕ ಕಡೆಗಳಲ್ಲಿ ಎಐ ಕ್ಯಾಮೆರಾ ಅಳವಡಿಸುವ ಮೂಲಕ ಸಂಚಾರ ನಿಯಮದ ಬಗ್ಗೆಹದ್ದಿನ ಕಣ್ಣನ್ನು ಇರಿಸಿದ್ದಾರೆ.
ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಗರದ ವಿವಿಧ ಕಡೆಗಳಲ್ಲಿ ಎಐ ಕ್ಯಾಮರಾ ಅಳವಡಿಸುವ ಮೂಲಕ ಸಂಚಾರ ನಿಯಮವನ್ನು ಮೀರಿ ವಾಹನ ಚಲಾಯಿಸುವವರ ಮೇಲೆ ಆಸ್ಟೈನ್ ಮೂಲಕ ಕಂಪ್ಲೇಂಟ್ ದರ್ಜ್ ಆಗಲಿದೆ. ಈ ನಿಯಮವು ಬಹಳ ಕಠಿಣವಾಗಿದ್ದು ಯಾವುದೇ ವಿನಾಯಿತಿ ಇಲ್ಲದೆ ಚಾಲಕರು ದಂಡವನ್ನು ಕಟ್ಟಬೇಕಾಗುತ್ತದೆ.
ಹೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುವುದು, ತ್ರಿಬಲ್ ಸವಾರಿ ಮಾಡುವುದು, ಸೀಟ್ ಬೆಲ್ಟ್ ಧರಿಸದೆ ಕಾರು ಇನ್ನಿತರ ವಾಹನಗಳನ್ನು ಚಲಾಯಿಸುವುದು ಇವೆಲ್ಲವೂ ಈ ಕ್ಯಾಮರ ಮೂಲಕ ಸ್ಪಷ್ಟವಾಗಿ ಕಂಡುಬರುತ್ತದೆ ಮತ್ತು ಅಂಥವರಿಗೆ ಆನ್ನೈನ್ ಮೂಲಕ ದಂಡ ವಿಧಿಸಲಾಗುತ್ತದೆ.
ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ರಾದ ಸಂತೋಷ್ ಬಿಪಿ ರವರು ಮಾಹಿತಿ ನೀಡಿದ್ದು ಈ ಒಂದು ಕ್ರಮದಿಂದ ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಕಠಿಣ ಕ್ರಮವಾಗಲಿದೆ. ಮತ್ತು ಹಿಟ್ ಅಂಡ್ ರನ್ ಪ್ರಕರಣಗಳನ್ನು ಮತ್ತು ಇನ್ನಿತರ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಈ ಕ್ಯಾಮೆರಾ ಸಹಾಯದಿಂದ ಪೊಲೀಸರಿಗೆ ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ. ಆದ್ದರಿಂದ ವಾಹನ ಸವಾರರು ಸಂಚಾರ ನಿಯಮವನ್ನು ಪರಿಪೂರ್ಣವಾಗಿ ಪಾಲಿಸಿಕೊಂಡು ತಮ್ಮ ತಮ್ಮ ವಾಹನಗಳನ್ನು ಚಲಾಯಿಸಬೇಕೆಂದು ಅವರು ಸೂಚನೆ ನೀಡಿದ್ದಾರೆ. ಅಲ್ಲದೆ ಸಾಧಾರಣವಾಗಿ ಪೊಲೀಸರು ನಗರದ ಬೇರೆ ಬೇರೆ ಕಡೆಗಳಲ್ಲಿ ನಿಂತು ಮಾಡುವ ತಪಾಸಣೆಗಳು ಅದು ಎಂದಿನಂತೆ ನಡೆಯುತ್ತದೆ ಎಂದು ಕೂಡ ಅವರು ತಿಳಿಸಿದ್ದಾರೆ.













































