ಇಟಲಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.ಈ ವೇಳೆ ಉಭಯ ರಾಷ್ಟ್ರಗಳ ಸಂಬಂಧವು ವಿಶೇಷ ಕಾರ್ಯತಂತ್ರಾತ್ಮಕ ಪಾಲುದಾರಿಕೆಯ ಮಟ್ಟಕ್ಕೆ ಏರಿದೆ ಎಂದು ಘೋಷಿಸಿದ್ದಾರೆ.ರೋಮ್‌ನ ವಿಲ್ಲಾ ಪಾಂಫಿಲ್‌ನಲ್ಲಿ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಎರಡು ದೇಶಗಳ ಸಂಬಂಧವು ಇಂದು ವಿಶೇಷ ಕಾರ್ಯತಂತ್ರಾತ್ಮಕ ಪಾಲುದಾರಿಕೆ ಮೇಲ್ದರ್ಜೆಗೆ ಏರುತ್ತಿದ್ದು ನನಗೆ ಸಂತೋಷವಾಗಿದೆ ಎಂದು ತಿಳಿಸಿದರು.
ಮೆಲೋನಿಗೆ ಧನ್ಯವಾದ ಹೇಳಿದ ಮೋದಿ
ಇದೇ ವೇಳೆ ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಬೆಂಬಲ ನೀಡಿದಕ್ಕೆ ಮೆಲೋನಿ ಅವರಿಗೆ ಮೋದಿ ಧನ್ಯವಾದ ಹೇಳಿದರು.
ಇದು ಐತಿಹಾಸಿಕ ದಿನ ಎಂದ ಮೆಲೋನಿ
ಬಳಿಕ ಮಾತನಾಡಿದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಈ ಭೇಟಿಯನ್ನು ಉಭಯ ದೇಶಗಳ ಸಂಬಂಧ ಒಂದು ಐತಿಹಾಸಿಕ ದಿನ ಎಂದು ಬಣ್ಣಿಸಿದರು. ಮೋದಿ ಭೇಟಿಯಿಂದ ಭಾರತ ಹಾಗು ಇಟಲಿ ನಡುವಿನ ಸಂಬಂಧಕ್ಕೆ ಹೊಸ ಚೈತನ್ಯ ನೀಡಲಾಗುತ್ತಿದೆ ಎಂದು ಮೆಲೋನಿ ತಿಳಿಸಿದರು.
ದ್ವಿಪಕ್ಷೀಯ ವ್ಯಾಪಾರಕ್ಕೆ ಒತ್ತು
ಎರಡೂ ದೇಶಗಳು ದ್ವಿಪಕ್ಷೀಯ ವ್ಯಾಪಾರವನ್ನು 2029ರ ವೇಳೆಗೆ 20 ಬಿಲಿಯನ್ ಯೂರೋಗಳಿಗಿಂತ ಹೆಚ್ಚು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಅದೇ ರೀತಿ ಕೃತಕ ಬುದ್ಧಿಮತ್ತೆ (AI), ಕ್ವಾಂಟಮ್ ಕಂಪ್ಯೂಟಿಂಗ್, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಡಿಜಿಟಲ್ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಹಕಾರ. ಭಾರತದ ‘ಮಾನವ್’ ಪರಿಕಲ್ಪನೆಗೆ ಇಟಲಿಯ ನೈತಿಕ ಚೌಕಟ್ಟನ್ನು ಒಟ್ಟಿಗೆ ತರಲು ಎಂದು ಉಭಯ ನಾಯಕರು ಸಮ್ಮತಿ ಸೂಚಿಸಿದರು.













































