ಜೂನ್‌ನಲ್ಲಿ ರೈಲು ವೇಳಾಪಟ್ಟಿಯಲ್ಲಿ ವ್ಯತ್ಯಯ

Picture of Savistara

Savistara

Bureau Report

ಮಂಗಳೂರು: ವಿವಿಧ ಕಾರಣಗಳಿಂದಾಗಿ ಜೂನ್‌ ನಲ್ಲಿ ಸಂಚರಿಸುವ ಹಲವು ಪ್ರಮುಖ ರೈಲುಗಳ ವೇಳಾಪಟ್ಟಿಯಲ್ಲಿ ರೈಲ್ವೆ ಇಲಾಖೆ ಬದಲಾವಣೆ ಮಾಡಿದೆ. ಚೆನ್ನೈ, ಸೆಂಟ್ರಲ್, ಮಂಗಳೂರು ಮತ್ತು ತಿರುವನಂತಪುರಂ ಮಾರ್ಗದ ರೈಲುಗಳ ಹೊರಡುವ ಸಮಯ ಮರು ನಿಗದಿಪಡಿಸಲಾಗಿದೆ. ಕೆಲವು ರೈಲುಗಳ ಸೇವೆ ಕಡಿತಗೊಳಿಸಲಾಗಿದೆ. ಇನ್ನು ಕೆಲವು ರೈಲುಗಳುಗಳು ವಿಳಂಬವಾಗಿ ಸಂಚರಿಸಲಿದೆ.

ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ಮಂಗಳೂರು ಸೆಂಟ್ರಲ್ ವೆಸ್ಟ್ ಕೋಸ್ಟ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್(22637) ಜೂನ್ 6ರಿಂದ ಜೂನ್ 20ರವರೆಗೆ ಚೆನ್ನೈನಿಂದ ಮಧ್ಯಾಹ್ನ 13.25ಕ್ಕೆ ಹೊರಡುವ ಬದಲು 1 ಗಂಟೆ 15 ನಿಮಿಷ ತಡವಾಗಿ ಮಧ್ಯಾಹ್ನ 14.40ಕ್ಕೆ ಹೊರಡಲಿದೆ. ಜೂನ್ 21 ರಂದು 2 ಗಂಟೆ 45 ನಿಮಿಷ ತಡವಾಗಿ ಸಂಜೆ 16.10ಕ್ಕೆ ಚೆನ್ನೈನಿಂದ ಹೊರಡಲಿದೆ.

ಚೆನ್ನೈ ಸೆಂಟ್ರಲ್-ತಿರುವನಂತಪುರಂ ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12697) ಜೂನ್ 21ರಂದು ಮಧ್ಯಾಹ್ನ 15.10ರ ಬದಲಿಗೆ 1 ಗಂಟೆ 30 ನಿಮಿಷ ತಡವಾಗಿ ಸಂಜೆ 16.40ಕ್ಕೆ ಹೊರಡಲಿದೆ.

ಚೆನ್ನೈ ಸೆಂಟ್ರಲ್ – ತಿರುವನಂತಪುರಂ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌(12695) ಜೂನ್ 21ರಂದು ಮಧ್ಯಾಹ್ನ 15.20ರ ಬದಲಿಗೆ 1 ಗಂಟೆ 30 ನಿಮಿಷ ತಡವಾಗಿ ಸಂಜೆ 16.50 ಕ್ಕೆ ಹೊರಡಲಿದೆ.

ಮಂಗಳೂರು-ಚೆನ್ನೈ ವೆಸ್ಟ್ ಕೋಸ್ಟ್ ಎಕ್ಸ್‌ಪ್ರೆಸ್(22638) ಜೂನ್ 5ರಿಂದ 10 ಮತ್ತು ಜೂನ್ 12ರಿಂದ 17ರವರೆಗೆ 1 ಗಂಟೆ 15 ನಿಮಿಷ ತಡವಾಗಲಿದೆ. ಜೂನ್ 11 ಮತ್ತು ಜೂನ್ 19ರಂದು 1 ಗಂಟೆ 40 ನಿಮಿಷ ತಡವಾಗಲಿದೆ.

ಸಂಚಾರ ರದ್ದು: ಮಂಗಳೂರು ಸೆಂಟ್ರಲ್- ಚೆನ್ನೈ ಸೆಂಟ್ರಲ್ ವೆಸ್ಟ್ ಕೋಸ್ಟ್ ಎಕ್ ಪ್ರೆಸ್(22638) ಜೂನ್ 20ರಂದು ಮಂಗಳೂರಿನಿಂದ ಹೊರಡುವ ಈ ರೈಲನ್ನು ಕಟಪಾಡಿ ಜಂಕ್ಷನ್‌ನಲ್ಲಿ ಮುಕ್ತಾಯಗೊಳಿಸಲಾಗುತ್ತದೆ. ಕಟಪಾಡಿ ಮತ್ತು ಚೆನ್ನೈ ಸೆಂಟ್ರಲ್ ನಡುವಿನ ಈ ರೈಲಿನ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ.

News Updates

ಮಂಗಳೂರು : ಬೈಕಂಪಾಡಿ, ಕೂಳೂರು ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ₹11.63 ಕೋ ರೂ. ಅಧಿಕ ಅನುದಾನ ಮಂಜೂರು | ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ : ಸಂಸದ ಕ್ಯಾ.ಬ್ರಿಜೇಶ್ ಚೌಟ

[t4b-ticker]
error: Content is protected !!