ಇರಾನ್ ಯುದ್ಧದ ವಿಚಾರವಾಗಿ ಟ್ರಂಪ್, ನೆತನ್ಯಾಹು ನಡುವೆ ಭಿನ್ನಾಭಿಪ್ರಾಯ!

Picture of Savistara

Savistara

Bureau Report

ಒಂದು ಸಾಲಿನಲ್ಲಿಇರಾನ್ ವಿರುದ್ಧದ ಯುದ್ಧ ಮತ್ತು ರಾಜತಾಂತ್ರಿಕ ಒಪ್ಪಂದದ ವಿಷಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ.

ಪ್ರಮುಖ ಮುಖ್ಯಾಂಶಗಳು

• ಟ್ರಂಪ್ ಮತ್ತು ನೆತನ್ಯಾಹು ಭಿನ್ನಾಭಿಪ್ರಾಯಇರಾನ್ ವಿರುದ್ಧದ ಯುದ್ಧದ ಕಾರ್ಯತಂತ್ರದ ಬಗ್ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ನಡುವೆ ಗಂಭೀರ ಭಿನ್ನಾಭಿಪ್ರಾಯಗಳು ಉಂಟಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

• ನೆತನ್ಯಾಹುವಿನ ಮಿಲಿಟರಿ ಗುರಿಗಳುಇರಾನ್‌ನ ಮಿಲಿಟರಿ ಮೂಲಸೌಕರ್ಯಗಳನ್ನು ನಾಶಪಡಿಸಿ, ಅಲ್ಲಿನ ಆಡಳಿತವನ್ನು ದುರ್ಬಲಗೊಳಿಸುವುದು ನೆತನ್ಯಾಹು ಅವರ ಉದ್ದೇಶವಾಗಿದೆ.

• ಒಪ್ಪಂದದತ್ತ ಟ್ರಂಪ್ ಒಲವುಯುದ್ಧವನ್ನು ಮುಂದುವರಿಸುವ ಬದಲು ಇರಾನ್‌ನೊಂದಿಗೆ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಳ್ಳಲು ಟ್ರಂಪ್ ಆಸಕ್ತಿ ವಹಿಸಿದ್ದಾರೆ.

• ದಾಳಿ ಮುಂದೂಡಿದ ಅಮೆರಿಕಕತಾರ್ ಮತ್ತು ಯುಎಇ ಸೇರಿದಂತೆ ಹಲವು ಅರಬ್ ರಾಷ್ಟ್ರಗಳ ಮನವಿಯ ಮೇರೆಗೆ, ಇರಾನ್ ಮೇಲೆ ನಡೆಸಬೇಕಿದ್ದ ದಾಳಿಯನ್ನು ಟ್ರಂಪ್ ಮುಂದೂಡಿದ್ದಾರೆ.

• ಯುದ್ಧ ಮತ್ತು ಒಪ್ಪಂದದ ಎಚ್ಚರಿಕೆಒಪ್ಪಂದಕ್ಕೆ ಆತುರವಿಲ್ಲ ಎಂದು ಹೇಳಿರುವ ಟ್ರಂಪ್, ಇರಾನ್ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಮಿಲಿಟರಿ ದಾಳಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಪ್ರಮುಖ ಅಂಕಿಅಂಶಗಳುಫೆಬ್ರುವರಿ 28ಅಮೆರಿಕ & ಇಸ್ರೇಲ್‌ ಪಡೆಗಳು ಇರಾನ್‌ ಮೇಲೆ ಜಂಟಿ ದಾಳಿ ನಡೆಸಿದ್ದುಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ವಾಷಿಂಗ್ಟನ್‌: ಇರಾನ್‌ ವಿರುದ್ಧದ ಯುದ್ಧಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ದೂರವಾಣಿ ಮೂಲಕ ಮಂಗಳವಾರ ಮಾತುಕತೆ ನಡೆಸಿದ್ದು, ಭಿನ್ನಾಭಿಪ್ರಾಯ ಏರ್ಪಟ್ಟಿದೆ ಎಂದು ಅಮೆರಿಕದ ಮಾಧ್ಯಮಗಳಲ್ಲಿ ವರದಿಯಾಗಿದೆ.

ಟ್ರಂಪ್‌ ಜೊತೆಗಿನ ಮಾತುಕತೆ ಬಳಿಕ, ನೆತನ್ಯಾಹು ಅವರಿಗೆ ತಲೆಬಿಸಿಯಾಗಿದೆ ಎಂದು ‘Axios’ ಸುದ್ದಿಸಂಸ್ಥೆ ವರದಿ ಮಾಡಿದೆ.

ಇರಾನ್‌ನ ಮಿಲಿಟರಿ ಮೂಲಸೌಕರ್ಯಗಳನ್ನು ಗುರಿಯಾಗಿಸಿ ನಿರ್ಣಾಯಕ ದಾಳಿ ನಡೆಸುವ ಮೂಲಕ, ಸೇನಾ ಸಾಮರ್ಥ್ಯವನ್ನು ಕುಗ್ಗಿಸಿ, ಅಲ್ಲಿನ ಆಡಳಿತವನ್ನು ದುರ್ಬಲಗೊಳಿಸಬೇಕು ಎಂಬುದು ನೆತನ್ಯಾಹು ಉದ್ದೇಶ. ಆದರೆ, ದಾಳಿಯನ್ನು ಪುನರಾರಂಭಿಸುವ ಬದಲು, ಒಪ್ಪಂದ ಮಾಡಿಕೊಳ್ಳಲು ಟ್ರಂಪ್‌ ಮುಂದಾಗಿದ್ದಾರೆ. ಇದು, ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಕತಾರ್ ಮತ್ತು ಯುಎಇ ಸೇರಿದಂತೆ ಇತರ ಅರಬ್ ರಾಷ್ಟ್ರಗಳ ಮನವಿಯ ಮೇರೆಗೆ ಇರಾನ್ ಮೇಲೆ ಮಂಗಳವಾರ ನಡೆಸಲು ಉದ್ದೇಶಿಸಿದ್ದ ದಾಳಿಯನ್ನು ಮುಂದೂಡಲು ಯೋಜಿಸಿರುವುದಾಗಿ ಟ್ರಂಪ್‌ ಭಾನುವಾರ ತಿಳಿಸಿದ್ದರು.

ಇರಾನ್‌ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಸಿದ್ಧವಿರುವುದಾಗಿ ಪದೇ ಪದೇ ಹೇಳುತ್ತಿರುವ ಟ್ರಂಪ್‌, ಒಪ್ಪಂದ ಸಾಧ್ಯವಾಗದಿದ್ದರೆ ದಾಳಿ ನಡೆಸುವುದಾಗಿ ತಿಳಿಸಿದ್ದಾರೆ.

ಯುದ್ಧ ಕೊನೆಗೊಳಿಸಲು ಆತುರವಿಲ್ಲ

”ಇರಾನ್ ವಿರುದ್ಧದ ಯುದ್ಧವನ್ನು ಕೊನೆಗೊಳಿಸಲು ಯಾವುದೇ ಆತುರವಿಲ್ಲ. ಸಂಘರ್ಷವನ್ನು ಅಂತ್ಯಗೊಳಿಸಲು ಗಡುವು ನಿಗದಿಪಡಿಸುವುದಕ್ಕಿಂತ ಕಾರ್ಯಾಚರಣೆಯ ಉದ್ದೇಶಗಳನ್ನು ಸಾಧಿಸುವುದೇ ಮುಖ್ಯ. ಅವರು ಒಪ್ಪಂದಕ್ಕೆ ಸಹಿ ಹಾಕುವುದು ಅತಿ ಮುಖ್ಯ’ ಎಂದು ಟ್ರಂಪ್ ಬುಧವಾರ ಹೇಳಿದ್ದಾರೆ.’ಇರಾನ್‌ ಜತೆಗಿನ ಒಪ್ಪಂದವು ಅಂತಿಮ ಹಂತದಲ್ಲಿದೆ’ ಎಂದಿದ್ದ ಅವರು, ‘ಒಂದು ವೇಳೆ ಇರಾನ್‌ ಇದಕ್ಕೆ ಒಪ್ಪದಿದ್ದರೆ ಮತ್ತೆ ದಾಳಿ ಮಾಡುವುದಾಗಿ’ ಎಚ್ಚರಿಸಿದ್ದಾರೆ.ಅಮೆರಿಕ ಹಾಗೂ ಇಸ್ರೇಲ್‌ ಪಡೆಗಳು ಇರಾನ್‌ ಮೇಲೆ ಫೆಬ್ರುವರಿ 28ರಂದು ಜಂಟಿ ದಾಳಿ ನಡೆಸಿದ್ದವು. ಅಮೆರಿಕ ಹಾಗೂ ಇಸ್ರೇಲ್‌ ವಿರುದ್ಧ ಮಾತ್ರವಲ್ಲದೆ, ಅವುಗಳ ಮಿತ್ರ‌ರಾಷ್ಟ್ರಗಳ ವಿರುದ್ಧವೂ ಇರಾನ್‌ ಪ್ರತಿದಾಳಿ ನಡೆಸಿದ್ದರಿಂದ, ಪಶ್ಚಿಮ ಏಷ್ಯಾದಾದ್ಯಂತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.- ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷಯುಎಇ, ಕತಾರ್‌ ಸೇರಿದಂತೆ ಅರಬ್‌ ರಾಷ್ಟ್ರಗಳು ಮಾಡಿದ ಮನವಿಯಂತೆ ಇರಾನ್‌ ಮೇಲಿನ ದಾಳಿಯನ್ನು ನಿಲ್ಲಿಸಲಾಗಿದೆ.

News Updates

ಮಂಗಳೂರು : ಬೈಕಂಪಾಡಿ, ಕೂಳೂರು ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ₹11.63 ಕೋ ರೂ. ಅಧಿಕ ಅನುದಾನ ಮಂಜೂರು | ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ : ಸಂಸದ ಕ್ಯಾ.ಬ್ರಿಜೇಶ್ ಚೌಟ

[t4b-ticker]
error: Content is protected !!