ಸೋತರೂ ಆರ್‌ಸಿಬಿಯೇ ನಂ.1: ಗೆದ್ರೂ 3ರಲ್ಲೇ ಎಸ್‌ಆರ್‌ಎಚ್

Picture of Savistara

Savistara

Bureau Report

ಹೈದ್ರಾಬಾದ್‌: ಶುಕ್ರವಾರದ ಐಪಿಎಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್‌ ಆರ್‌ಸಿಬಿ ವಿರುದ್ಧ ಸನ್‌ರೈಸರ್ಸ್‌ ಹೈದ್ರಾಬಾದ್‌ 55 ರನ್‌ಗಳ ಭರ್ಜರಿ ಜಯ ಗಳಿಸಿತು. ಆದರೂ ಆರ್‌ಸಿಬಿ ನೆಟ್‌ ರನ್‌ರೇಟ್‌ ಆಧಾರದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಉಳಿದುಕೊಂಡಿದ್ದು, ಹೈದ್ರಾಬಾದ್‌ 3ನೇ ಸ್ಥಾನದಲ್ಲೇ ಸ್ಪರ್ಧೆ ಕೊನೆಗೊಳಿಸಿದೆ.

2ನೇ ಸ್ಥಾನದಲ್ಲಿ ಗುಜರಾತ್‌ ಟೈಟಾನ್ಸ್‌ ಇದೆ.ಇನ್ನು 4ನೇ ಸ್ಥಾನಿ ತಂಡ ಮಾತ್ರ ಅಂತಿಮಗೊಳ್ಳಬೇಕಿದೆ. ಟಾಸ್‌ ಗೆದ್ದು ಬ್ಯಾಟಿಂಗ್‌ ನಡೆಸಿದ ಹೈದ್ರಾಬಾದ್‌ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 255 ರನ್‌ ಬಾರಿಸಿತು. ಗುರಿ ಬೆನ್ನತ್ತಿದ ಆರ್‌ಸಿಬಿ 20 ಓವರ್‌ ಮುಕ್ತಾಯಕ್ಕೆ 4 ವಿಕೆಟ್‌ ಕಳೆದುಕೊಂಡು ಭರ್ತಿ 200 ರನ್‌ ಪೇರಿಸಿತು. ಹೈದ್ರಾಬಾದ್‌ ಪರ ಟ್ರಾವಿಸ್‌ ಹೆಡ್‌-ಅಭಿಷೇಕ್‌ ಶರ್ಮ ಸ್ಫೋಟಕ ಆರಂಭವಿತ್ತರು.ಅಭಿಷೇಕ್‌ 22 ಎಸೆತಕ್ಕೆ 56 ರನ್‌ ಸಿಡಿಸಿದರೆ, ಇಶಾನ್‌ ಕಿಶನ್‌ 46 ಎಸೆತಕ್ಕೆ 79, ಹೆನ್ರಿಚ್‌ ಕ್ಲಾಸೆನ್‌ 24 ಎಸೆತಕ್ಕೆ 51, ನಿತೀಶ್‌ ಕುಮಾರ್‌ ಅಜೇಯ 29 ರನ್‌ ಬಾರಿಸಿದರು. ಆರ್‌ಸಿಬಿ ಪರ ವೆಂಕಟೇಶ್‌ ಅಯ್ಯರ್‌44, ವಿರಾಟ್‌ ಕೊಹ್ಲಿ 15, ನಾಯಕ ರಜತ್‌ ಪಾಟಿದಾರ್‌ 39 ಎಸೆತಕ್ಕೆ 56, ಕೃಣಾಲ್‌ ಪಾಂಡ್ಯ ಅಜೇಯ 41, ಟಿಮ್‌ ಡೇವಿಡ್‌ ಅಜೇಯ 15 ರನ್‌ ಬಾರಿಸಿ ಹೋರಾಟ ನೀಡಿದರು.

ಸಂಕ್ಷಿಪ್ತ ಸ್ಕೋರ್‌: ಹೈದ್ರಾಬಾದ್‌ 20 ಓವರ್‌,255/4 (ಅಭಿಷೇಕ್‌ 56, ಕಿಶನ್‌ 79, ಕ್ಲಾಸೆನ್‌ 51, ರಸಿಖ್‌ 52ಕ್ಕೆ 2), ಆರ್‌ಸಿಬಿ 20 ಓವರ್‌,200/4 (ವೆಂಕಟೇಶ್‌ 44, ರಜತ್‌ 56, ಕೃಣಾಲ್‌ ಪಾಂಡ್ಯ 41*, ಈಶನ್‌ ಮಾಲಿಂಗ 33ಕ್ಕೆ 2).

ಪಂದ್ಯಶ್ರೇಷ್ಠ: ಇಶಾನ್‌ ಕಿಶನ್‌

ಈ ಪಂದ್ಯದೊಂದಿಗೆ ಅಂಕ ಪಟ್ಟಿಯ ಅಗ್ರ 3 ಸ್ಥಾನಿ ಗಳು ಅಂತಿಮಗೊಂಡಿವೆ. ಅಗ್ರಸ್ಥಾನಿ ಆರ್‌ಸಿಬಿ ಮತ್ತು 2ನೇ ಸ್ಥಾನಿ ಗುಜರಾತ್‌ ಮೇ 26ಕ್ಕೆ ಧರ್ಮಶಾಲಾದಲ್ಲಿ ನಡೆವ ಕ್ವಾಲಿಫೈಯರ್‌-1ರಲ್ಲಿ ಆಡಿದರೆ, 3ನೇ ಸ್ಥಾನಿ ಹೈದ್ರಾಬಾದ್‌ ಮೇ 27ಕ್ಕೆ ಚಂಡೀಗಢದಲ್ಲಿ ಎಲಿಮಿನೇಟರ್‌ಗಾಗಿ ಕಣಕ್ಕಿಳಿ ಯಲಿದೆ. 4ನೇ ಸ್ಥಾನಿಯಾಗುವ ತಂಡ ಇದರ ಎದುರಾಳಿಯಾಗಲಿದೆ. ಈ 1 ಸ್ಥಾನಕ್ಕೆ ರಾಜಸ್ಥಾನ್‌, ಪಂಜಾಬ್‌, ಕೋಲ್ಕತಾ ಸ್ಪರ್ಧೆಯಲ್ಲಿವೆ.

ಪಂದ್ಯದ ತಿರುವು 17ನೇ ಓವರ್‌ನಲ್ಲಿ 3 ವಿಕೆಟ್‌ ನಷ್ಟಕ್ಕೆ 168 ರನ್‌ ಗಳಿಸಿದ್ದಾಗಲೇ ಆರ್‌ಸಿಬಿ ಸೋಲುವ ಸುಳಿವು ಲಭಿಸಿತ್ತು. ಏಕೆಂದರೆ ಈ ವೇಳೆ ಅದು 18 ಎಸೆತಕ್ಕೆ 88 ರನ್‌ ಬಾರಿಸುವುದು ದೂರದ ಮಾತಾಗಿತ್ತು

6 ಬಾರಿ 250+ ರನ್‌

ಪಂದ್ಯದೊಂದಿಗೆ ಹೈದ್ರಾಬಾದ್‌,ಐಪಿಎಲ್‌ನಲ್ಲಿ 6ನೇ ಬಾರಿಗೆ 250+ ರನ್‌ ಬಾರಿಸಿದ ದಾಖಲೆ ನಿರ್ಮಿಸಿತು. 2ನೇ ಸ್ಥಾನಿ ಆರ್‌ಸಿಬಿ ಮತ್ತು ಪಂಜಾಬ್‌ ತಲಾ 3 ಬಾರಿ ಈ ಸಾಧನೆ ಮಾಡಿವೆ.

9 ಬಾರಿ 200+ ರನ್‌

ಈ ಆವೃತ್ತಿಯಲ್ಲಿ ಹೈದ್ರಾಬಾದ್‌ 9ನೇ ಬಾರಿಗೆ 200+ ರನ್‌ ಬಾರಿಸಿ ದಾಖಲೆ ನಿರ್ಮಿಸಿದೆ. ಗುಜರಾತ್‌ ,ಪಂಜಾಬ್‌ (2025), ಆರ್‌ಸಿಬಿ (2026) 8 ಬಾರಿ ಈ ಸಾಧನೆ ಮಾಡಿದೆ.

12ಬಾರಿ 220+ ರನ್‌ ಡಿಫೆಂಡ್‌

ಹೈದ್ರಾಬಾದ್‌ ತಂಡ 220+ ರನ್‌ ಗುರಿ ನೀಡಿದ್ದ ಎಲ್ಲಾ 12 ಪಂದ್ಯಗಳನ್ನೂ ಗೆದ್ದ ಸಾಧನೆ ಮಾಡಿದೆ. ಹೈದ್ರಾಬಾದ್‌ ಹೀಗೆ ಸೋತಿದ್ದೇ ಇಲ್ಲ.

News Updates

ಮಂಗಳೂರು : ಬೈಕಂಪಾಡಿ, ಕೂಳೂರು ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ₹11.63 ಕೋ ರೂ. ಅಧಿಕ ಅನುದಾನ ಮಂಜೂರು | ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ : ಸಂಸದ ಕ್ಯಾ.ಬ್ರಿಜೇಶ್ ಚೌಟ

[t4b-ticker]
error: Content is protected !!