ದಿನನಿತ್ಯ ಬೆಲೆ ಏರಿಕೆಯ ಬಿಸಿ: ಜನಸಾಮಾನ್ಯರ ಜೇಬಿಗೆ ನೇರ ಹೊಡೆತ

Picture of Savistara

Savistara

Bureau Report

ಬೆಂಗಳೂರು, ನ. 20: ರಾಜ್ಯದಲ್ಲಿ ದಿನನಿತ್ಯದ ವೆಚ್ಚ ಗಗನಕ್ಕೇರಿದೆ ಎಂದು ಜನಸಾಮಾನ್ಯರು ಮತ್ತು ಪ್ರತಿಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು ಬೆಂಗಳೂರು ನಗರದೊಳಗೆ ಈ ಹಿಂದೆ 20 ರೂ.ಗೆ ಪ್ರಯಾಣಿಸುತ್ತಿದ್ದ ಜಾಗಕ್ಕೆ ಈಗ 35 ರೂ. ಕೊಡಬೇಕಾದ ಪರಿಸ್ಥಿತಿ ಬಂದಿದೆ.

Advertisement

ರಾಜ್ಯ ಸರ್ಕಾರ ಬಂದ ಕೂಡಲೇ ಪೆಟ್ರೋಲ್, ಡೀಸೆಲ್ ಮೇಲೆ 5 ರೂ. ಅಧಿಕ ತೆರಿಗೆ ವಿಧಿಸಿತು. ನಂತರ ಹಂತ ಹಂತವಾಗಿ ಬಸ್ ಪ್ರಯಾಣ ದರ ಏರಿಸಿತು. ಮೊನ್ನೆ ಮತ್ತೆ ಒಟ್ಟಾರೆ ದರ ಏರಿಕೆ ಮಾಡಿದ ಕಾರಣ ಬಡವ ತನ್ನ ಪ್ರಯಾಣಕ್ಕೆ ಸುಮಾರು 70% ಅಧಿಕ ದರ ವ್ಯಯಿಸುವಂತಾಗಿದೆ.

Advertisement

Advertisement

ಮಂಗಳೂರು – ಬೆಂಗಳೂರು ಮಾರ್ಗದ ಸಾಮಾನ್ಯ ಕೆಂಪು ಬಸ್ ದರ 401 ರೂ.ನಿಂದ 579 ರೂ.ಗೆ ಏರಿದೆ.ಹಾಲಿನ ದರ 12 ರೂ., ಮೊಸರಿನ ದರ 14 ರೂ., ತುಪ್ಪದ ದರ 70 ರೂ.ಗಿಂತ ಅಧಿಕ ಏರಿದೆ. ಇದರ ಪರಿಣಾಮವಾಗಿ 16 ರೂ. ಇದ್ದ ಚಹಾ ದರ ಎರಡು ಹಂತದಲ್ಲಿ 23 ರೂ.ಗೆ ತಲುಪಿದೆ. ಆರ್‌ಟಿಸಿ, ಜಾಗದ ನೋಂದಣಿ ದರ ಎಷ್ಟು ಏರಿದೆ ಎಂಬುದು ಕಟ್ಟಿದವರಿಗೆ ಮಾತ್ರ ಗೊತ್ತು.

Advertisement

Advertisement

40% ಕಮಿಷನ್ ಎಂದು ಆರೋಪಿಸುತ್ತಿದ್ದ ಕಂಟ್ರಾಕ್ಟರ್‌ಗಳಿಗೆ ಈಗ 60% ಕಮಿಷನ್ ಬಿಸಿ ಸಿಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ರಾಜಧಾನಿಯಲ್ಲೇ ರಸ್ತೆ ಪರಿಸ್ಥಿತಿ ಹದಗೆಟ್ಟಿದೆ. ಬೇರೆ ಊರುಗಳ ಕಥೆ ಹೇಳಬೇಕಾಗಿಲ್ಲ.ವಿದ್ಯುತ್ ದರ 34% ಅಧಿಕವಾಗಿ, ಮಿನಿಮಮ್ ಪೇ ಕೂಡಾ 50% ಅಧಿಕವಾಗಿದೆ.ಗುತ್ತಿಗೆ ನೌಕರರ ಸಂಬಳ ಸರಿಯಾಗಿ ಬರುತ್ತಿಲ್ಲ. ಕೆಎಸ್‌ಆರ್‌ಟಿಸಿ ಐರಾವತ ಬಸ್ಸುಗಳು ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿವೆ. ಹಗರಣಗಳ ಸರಮಾಲೆಯೇ ಕಾಣುತ್ತಿದೆ ಎಂದು ಜನರು ಆರೋಪಿಸುತ್ತಿದ್ದಾರೆ.

Advertisement

Advertisement

ಬಡವರ ಸರ್ಕಾರ ಗ್ಯಾರಂಟಿ ಘೋಷಣೆ ನಡುವೆ ರಾಜ್ಯದ ಆರ್ಥಿಕ ಪರಿಸ್ಥಿತಿ ಹದೆಗೆಟ್ಟಿದ್ದು ಜನಸಾಮಾನ್ಯರು ಕಷ್ಟಪಡುತ್ತಿddare ಕಾಲಕ್ಕೆ ತಕ್ಕಂತೆ ದರ ಏರಿಕೆ ಅನಿವಾರ್ಯ. ಆದರೆ ಅದು ಸೈನ್ ವೇವ್‌ನಲ್ಲಿ ಹೋಗಬೇಕಾದದ್ದು, ಈಗ ಸ್ಕ್ವೇರ್ ವೇವ್‌ನಲ್ಲಿ ಏರುತ್ತಿದೆಯೆಂದು ಸಾರ್ವಜನಿಕರ ಅಭಿಪ್ರಾಯ

[t4b-ticker]
error: Content is protected !!