ಕೇಂದ್ರದ ಸಬ್ಸಿಡಿ ಮುಗಿಯುತ್ತಿದ್ದಂತೆ ಕೈಕೊಟ್ಟ ವಿಮಾನಯಾನ ಸಂಸ್ಥೆಗಳು: ದೇಶದ 14 ಉಡಾನ್ ಏರ್‌ಪೋರ್ಟ್‌ಗಳು ಬಂದ್, ವಿಮಾನ ಸೇವೆ ಸ್ಥಗಿತ

Picture of Savistara

Savistara

Bureau Report

ನವದೆಹಲಿ, ನ. 20: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉಡಾನ್ ಯೋಜನೆಯಡಿ ಆರಂಭವಾಗಿದ್ದ ದೇಶದ 14 ಪ್ರಾದೇಶಿಕ ವಿಮಾನ ನಿಲ್ದಾಣಗಳಲ್ಲಿ ವಿಮಾನ ಸೇವೆ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.ಉಡಾನ್ ಯೋಜನೆಯಡಿ ವಿಮಾನಯಾನ ಸಂಸ್ಥೆಗಳಿಗೆ ನೀಡಲಾಗುತ್ತಿದ್ದ ಮೂರು ವರ್ಷಗಳ ಕೇಂದ್ರ ಸಬ್ಸಿಡಿ ಅವಧಿ ಮುಗಿಯುತ್ತಿದೆ. ಸಬ್ಸಿಡಿ ಮುಗಿದ ನಂತರ ಈ ಮಾರ್ಗಗಳಲ್ಲಿ ವಿಮಾನ ಹಾರಾಟ ಲಾಭದಾಯಕವಲ್ಲ ಎಂದು ವಿಮಾನಯಾನ ಸಂಸ್ಥೆಗಳು ಸೇವೆಯನ್ನು ನಿಲ್ಲಿಸಲು ಮುಂದಾಗಿವೆ ಎಂದು ವರದಿಯಾಗಿದೆ.

Advertisement

ಉಡಾನ್ ಅಂದರೆ ಉಡೇ ದೇಶ್ ಕಾ ಆಮ್ ನಾಗರಿಕ್ ಯೋಜನೆ. ಸಣ್ಣ ನಗರಗಳು ಮತ್ತು ಪ್ರಾದೇಶಿಕ ಕೇಂದ್ರಗಳನ್ನು ವಿಮಾನ ಸಂಪರ್ಕಕ್ಕೆ ತರುವುದು, ಸಾಮಾನ್ಯ ಜನರಿಗೂ ಕಡಿಮೆ ಬೆಲೆಯಲ್ಲಿ ವಿಮಾನ ಪ್ರಯಾಣ ಸಿಗಬೇಕು ಎಂಬುದು ಈ ಯೋಜನೆಯ ಉದ್ದೇಶವಾಗಿತ್ತು.

Advertisement

Advertisement

ಈ ಯೋಜನೆಯಡಿ ಕೇಂದ್ರ ಸರ್ಕಾರ ವಿಮಾನಯಾನ ಸಂಸ್ಥೆಗಳಿಗೆ ವೈಯಬಿಲಿಟಿ ಗ್ಯಾಪ್ ಫಂಡಿಂಗ್ ಅಂದರೆ ಸಬ್ಸಿಡಿ ನೀಡುತ್ತಿತ್ತು.ಆದರೆ ಮೂರು ವರ್ಷಗಳ ನಂತರ ಸಬ್ಸಿಡಿ ನಿಂತರೆ, ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಮಾರ್ಗಗಳಲ್ಲಿ ವಿಮಾನ ಹಾರಿಸುವುದು ಕಂಪನಿಗಳಿಗೆ ನಷ್ಟವಾಗುತ್ತಿದೆ. ಈ ಕಾರಣಕ್ಕೆ 14 ವಿಮಾನ ನಿಲ್ದಾಣಗಳಿಂದ ಸೇವೆ ಹಿಂಪಡೆಯಲು ಕಂಪನಿಗಳು ನಿರ್ಧರಿಸಿವೆ ಎನ್ನಲಾಗಿದೆ.

Advertisement

Advertisement

ಈ ವಿಮಾನ ನಿಲ್ದಾಣಗಳು ಬಂದ್ ಆದರೆ ಆ ಭಾಗದ ಜನರಿಗೆ ಮತ್ತೆ ಸಂಪರ್ಕ ಕಡಿತವಾಗಲಿದೆ. ವ್ಯಾಪಾರ, ಪ್ರವಾಸೋದ್ಯಮ, ಆರೋಗ್ಯ ಮತ್ತು ತುರ್ತು ಸೇವೆಗಳಿಗೂ ತೊಂದರೆಯಾಗಲಿದೆ. ಸಣ್ಣ ನಗರಗಳ ಅಭಿವೃದ್ಧಿಗೆ ಹೊಡೆತ ಬೀಳಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಸ್ಪಷ್ಟನೆ ಬರಬೇಕಿದೆ. ಸಬ್ಸಿಡಿ ಅವಧಿಯನ್ನು ವಿಸ್ತರಿಸಬೇಕೆಂದು ಕೋರಿಕೆ ಕೇಳಿಬಂದಿದೆ.

Advertisement
[t4b-ticker]
error: Content is protected !!