ಧರ್ಮ ಯಾವುದೇ ಇರಲಿ, ಪ್ರತಿಯೊಬ್ಬ ಭಾರತೀಯನ ರಕ್ತದ ಕಣದಲ್ಲೂ ರಾಮನಿದ್ದಾನೆ – ಜಾವೇದ್ ಅಖ್ತರ್

Picture of Savistara

Savistara

Bureau Report

ಮುಂಬೈ, ನ. 20: ಖ್ಯಾತ ಗೀತರಚನೆಕಾರ ಜಾವೇದ್ ಅಖ್ತರ್ ಅವರು ಶ್ರೀರಾಮನ ಬಗ್ಗೆ ಆಡಿದ ಮಾತುಗಳು ರಾಷ್ಟ್ರಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿವೆ.ಮುಂಬೈನಲ್ಲಿ ನವೆಂಬರ್ 17ರಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜಾವೇದ್ ಅಖ್ತರ್, ನಿತೇಶ್ ತಿವಾರಿ ನಿರ್ದೇಶನದ ಹೊಸ ರಾಮಾಯಣ ಚಿತ್ರದ ಸಂಗೀತದ ಬಗ್ಗೆ ಚರ್ಚಿಸುವಾಗ ತಮ್ಮ ಹಳೆಯ ಸ್ವದೇಶ್ ಚಿತ್ರದ ಪಲ್ ಪಲ್ ಹೈ ಭಾರಿ ಹಾಡಿನ ಸಾಲುಗಳನ್ನು ನೆನಪಿಸಿಕೊಂಡರು.

Advertisement

ಮನ್ ಸೆ ರಾವಣ್ ಜೋ ನಿಕಾಲೆ, ರಾಮ್ ಉಸ್ಕೆ ಮನ್ ಮೇ ಹೈ ಎಂಬ ಸಾಲುಗಳ ಬಗ್ಗೆ ಮಾತನಾಡುತ್ತಾ ಅವರು, ರಾಮ ಕೇವಲ ಒಬ್ಬ ವ್ಯಕ್ತಿಯಲ್ಲ, ರಾಮ ಒಂದು ನೈತಿಕತೆ. ರಾಮ ಒಂದು ಬದುಕುವ ರೀತಿ. ರಾಮ ಒಂದು ಸೌಂದರ್ಯ, ಒಂದು ನೈತಿಕ ಮೌಲ್ಯ. ಧರ್ಮ ಯಾವುದೇ ಇರಲಿ, ಪ್ರತಿಯೊಬ್ಬ ಭಾರತೀಯನ ರಕ್ತದಲ್ಲೂ ರಾಮನಿದ್ದಾನೆ. ಅವನು ಒಂದು ಜೀವನ ಶೈಲಿ ಎಂದು ಹೇಳಿದರು.

Advertisement

Advertisement

ತಾವು ಆಡಿದ ಮಾತಿನಿಂದ ಕೆಲವರಿಗೆ ಕೋಪ ಬರಬಹುದು ಎಂದು ಅವರು ಆ ಸಂದರ್ಭದಲ್ಲೇ ಹೇಳಿದ್ದರು.ಜಾವೇದ್ ಅಖ್ತರ್ ಮಾತಿಗೆ ಅಖಿಲ ಭಾರತ ಇಮಾಮ್ ಅಸೋಸಿಯೇಷನ್ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ನಾಸ್ತಿಕನೇ ಈಗ ರಾಮನಲ್ಲಿ ಇಷ್ಟು ನಂಬಿಕೆ ತೋರಿಸ್ತಿದ್ದಾನೆ. ಹಾಗಾದ್ರೆ ಜಾವೇದ್ ಅಖ್ತರ್ ಎಂಬ ಹೆಸರನ್ನು ಬದಲಿಸಿ ರಾಮ್ ಪಾಲ್ ಎಂದು ಇಟ್ಟುಕೊಳ್ಳಲಿ. ಆಗ 80% ಹಿಂದೂ ಜನಸಂಖ್ಯೆ ಅವರಿಗೆ ಪೂರ್ಣ ಗೌರವ ಕೊಡಬಹುದು ಎಂದು ಅವರು ಹೇಳಿದ್ದಾರೆ.

Advertisement

Advertisement

ಜಾವೇದ್ ಅಖ್ತರ್ ಒಬ್ಬ ಉದ್ಯಮಿ, ಬಾಲಿವುಡ್‌ನಲ್ಲಿ ಹಾಡುಗಳು ಮಾರಾಟವಾಗುತ್ತವೆ, ಹೀಗೆ ಹೇಳದಿದ್ದರೆ ಅವರ ಹಾಡುಗಳನ್ನು ಯಾರು ಕೊಳ್ಳುತ್ತಾರೆ ಎಂದು ರಶೀದಿ ವ್ಯಂಗ್ಯವಾಡಿದ್ದಾರೆ. ಜಾವೇದ್ ಅಖ್ತರ್ ಎರಡು ದೋಣಿಯಲ್ಲಿ ಕಾಲು ಇಟ್ಟಂತೆ ವರ್ತಿಸುತ್ತಿದ್ದಾರೆ, ಒಂದೇ ನಿಲುವು ತೆಗೆದುಕೊಳ್ಳಬೇಕು ಎಂದು ಅವರು ಆರೋಪಿಸಿದ್ದಾರೆ. ನಾನು ಮುಸ್ಲಿಂ, ಅದರ ಬಗ್ಗೆ ಹೆಮ್ಮೆ ಇದೆ, ಗೌರವಯುತ ಬದುಕು ಬದುಕುತ್ತಿದ್ದೇನೆ ಎಂದೂ ಅವರು ಹೇಳಿದ್ದಾರೆ.

Advertisement

Advertisement

ಈ ವಿವಾದಕ್ಕೆ ಕಾಂಗ್ರೆಸ್ ನಾಯಕ ಉದಿತ್ ರಾಜ್ ಮತ್ತು ಸಮಾಜವಾದಿ ಪಕ್ಷದ ಸಂಸದ ರಾಜೀವ್ ರೈ ಜಾವೇದ್ ಅಖ್ತರ್ ಪರ ನಿಂತಿದ್ದಾರೆ. ಅವರಿಗೆ ಅವರದ್ದೇ ಆದ ದೃಷ್ಟಿಕೋನ ಇರಬಹುದು, ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ಹೇಳುವ ಹಕ್ಕಿದೆ ಎಂದು ಉದಿತ್ ರಾಜ್ ಹೇಳಿದ್ದಾರೆ.ರಾಮಾಯಣ ಹಿಂದೂಗಳಿಗೆ ಪವಿತ್ರ ಗ್ರಂಥ ಎಂಬುದರಲ್ಲಿ ಅನುಮಾನವಿಲ್ಲ, ಆದರೆ ಸೀತೆಯನ್ನು ವನವಾಸಕ್ಕೆ ಕಳುಹಿಸಿದ್ದು ಮುಂತಾದ ವಿಷಯಗಳ ಬಗ್ಗೆ ಬೇರೆ ಬೇರೆ ಅಭಿಪ್ರಾಯ ಇರಬಹುದು ಎಂದು ರಾಜೀವ್ ರೈ ಹೇಳಿದ್ದಾರೆ.

ತಾವು ನಾಸ್ತಿಕ ಎಂದು ಬಹಿರಂಗವಾಗಿ ಹೇಳಿಕೊಂಡಿರುವ ಜಾವೇದ್ ಅಖ್ತರ್, ಈ ಹಿಂದೆ ಎರಡೂ ಕಡೆಯ ಧಾರ್ಮಿಕ ಮೂಲಭೂತವಾದಿಗಳಿಂದ ನಿಂದನೆ ಎದುರಿಸಿದ್ದೇನೆ ಎಂದು ಹೇಳಿದ್ದರು. ಸದ್ಯ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

[t4b-ticker]
error: Content is protected !!