ಪುಣ್ಯ ಸ್ಥಾನಕ್ಕೆ ಕುಟುಂಬ ಸಮೇತ ತೆರಳಿದ ಡಿಸಿಎಂ ಡಿ.ಕೆ.ಶಿವಕುಮಾರ್

Picture of Savistara

Savistara

Bureau Report

ಬೆಂಗಳೂರು: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪುಣ್ಯಸ್ನಾನಕ್ಕೆ ಭಾನುವಾರ ಬೆಳಗಿನ ಜಾವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ಅವರು ಕುಟುಂಬ ಸಮೇತರಾಗಿ ಹೊರಟಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ‘ಕುಂಭ ಮೇಳದಲ್ಲಿ ಪುಣ್ಯ ಸ್ನಾನಕ್ಕೆ ತೆರಳುತ್ತಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ತಿ.ನರಸೀಪುರದ ಕುಂಭಮೇಳದಲ್ಲೂ ಭಾಗಿಯಾಗಲಿದ್ದೇನೆ. ಜಿಲಾಧಿಕಾರಿ ಸಹಿತ ಅಧಾರಿಗಳು ಬಂದು ಕರೆದಿದ್ದಾರೆ. ಸ್ವಾಮೀಜಿಗಳೊಂದಿಗೂ ಮಾತನಾಡಿದ್ದೇನೆ’ ಎಂದು ತಿಳಿಸಿದರು.

ಪ್ರಯಾಗ್ ರಾಜ್ ನಿಂದ ಬಳಿಕ ಬೆಂಗಳೂರು ಏರ್ ಶೋ ನಲ್ಲಿ ಭಾಗಿಯಾಗುತ್ತೇನೆ. ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ ನಲ್ಲಿ ಭಾಗಿಯಾಗಲಿದ್ದೇನೆ. ಧರ್ಮ, ಅಭಿವೃದ್ಧಿ ಎಲ್ಲವೂ ಇರಲಿದೆ’ ಎಂದು ತಿಳಿಸಿದರು.

ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ಪ್ರತಿಕ್ರಿಯಿಸಲುಡಿ.ಕೆ.ಶಿವಕುಮಾ‌ರ್ ಅವರು ನಿರಾಕರಿಸಿದರು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!