ಸುಳ್ಯದಲ್ಲಿ ಅನಿಯಮಿತ ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ಸುಳ್ಯ ಕೃಷಿಕ ಸಮಾಜದಿಂದ ಮೆಸ್ಕಾಂ ಗೆ ಮನವಿ

Picture of Savistara

Savistara

Bureau Report

ಸುಳ್ಯ: ಸುಳ್ಯ ತಾಲೂಕಿನಲ್ಲಿ ನಿರಂತರ ವಿದ್ಯುತ್ ಕಡಿತಉಂಟಾಗುತ್ತಿದ್ದು ಕೃಷಿಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದುದರಿಂದ ವಿದ್ಯುತ್‌ ಸಮಸ್ಯೆಯನ್ನು ಶೀಘ್ರ ಪರಿಹರಿಸಬೇಕೆಂದು ಸುಳ್ಯ ತಾಲೂಕು ಕೃಷಿಕ ಸಮಾಜದ ವತಿಯಿಂದ ಮೆಸ್ಕಾಂಗೆ ಮನವಿ ಸಲ್ಲಿಸಲಾಗಿದೆ. ಕೃಷಿಕ ಸಮಾಜದ ಅಧ್ಯಕ್ಷ ಕುಸುಮಾಧರ ಎ.ಟಿ.ಕುಸುಮಾಧರ ಅವರ ನೇತೃತ್ವದಲ್ಲಿ ಮೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಹರೀಶ್ ನಾಯ್ಕ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಸುಳ್ಯ ತಾಲೂಕಿನಲ್ಲಿ ಅನಿಮಿಯತ ವಿದ್ಯುತ್ ವ್ಯತ್ಯಯ, ಕಡಿಮೆ ವೋಲ್ವೇಜ್ ಗ್ರಾಮೀಣ ಪ್ರದೇಶದಲ್ಲಿ ತ್ರಿಫೇಸ್‌ ವಿದ್ಯುತ್‌ ವ್ಯತ್ಯಯ ಮೊದಲಾದವುಗಳಿಂದ ಕೃಷಿಕರಿಗೆ ತುಂಬಾ ತೊಂದರೆಯುಂಟಾಗಿ ಅಡಿಕೆ ಬೆಳೆಗೆ ದೊಡ್ಡ ಹೊಡೆತ ಉಂಟಾಗಿದೆ. ಇಲ್ಲಿಯ ಕೃಷಿಕರ ಜೀವನಾಧಾರವೇ ಅಡಿಕೆ ಬೆಳೆ ಅಡಿಕೆ ಮರವು ಫೆಬ್ರವರಿ ತಿಂಗಳನಲ್ಲಿಯೇ ಒಣಗಿಸುವ ಸ್ಥಿತಿಗೆ ಬರುತ್ತಿದೆ. ಅಲ್ಲದೇ ಈ ಸಮಯವು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯವಾಗಿರುತ್ತದೆ.

ವಿದ್ಯುತ್‌ ವ್ಯತ್ಯಯದಿಂದ ಮಕ್ಕಳ ಪರೀಕ್ಷೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದುದರಿಂದ ಕೃಷಿಕರ ಮತ್ತು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಹಳ್ಳಿಗಳಿಗೆ ನಿಯಮಿತ ಸಮಯಕ್ಕೆ ತ್ರಿಫೇಸ್ ಮತ್ತು ಸರಿಯಾದ ವೋಲ್ವೇಜ್ ಕೊಡಬೇಕು ಅದೇ ರೀತಿ ಮಕ್ಕಳ ಚಟುವಟಿಕೆಗಾಗಿ ವಿದ್ಯುತ್‌ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕೃಷಿಕ ಸಮಾಜದ ಅಧ್ಯಕ್ಷ ಎ.ಟಿ. ಕುಸುಮಾಧರ, ಪ್ರಧಾನ ಕಾರ್ಯದರ್ಶಿ ಶ್ಯಾಮ್‌ಪ್ರಸಾದ್ ಅಡ್ಡಂತ್ತಡ್ಕ, ಕೋಶಾಧಿಕಾರಿ ಸವಿನ್‌ ಕಡಪಳ, ನಿರ್ದೇಶಕರಾದ ಮನ್ಮಥ.ಎ.ಎಸ್, ರುಕ್ಕಯ್ಯ ಗೌಡ ಎಸ್‌.ಎನ್, ಕೆ. ಸುಧಾಕರ ಪ್ರಭು, ನಾರಾಯಣ ಆಲಂಕ ಪ್ರಮುಖರಾದ ರಾಜೇಶ್ ಮೇನಾಲ, ಸುಪ್ರೀತ್ ಮೋಂಟಡ್ಕ ಜಗನ್ನಾಥ ಜಯನಗರ, ಆಶೋಕ್ ಅಡ್ಯಾರ್, ನಾರಾಯಣ ಎಸ್.ಎಂ, ನವೀನ್ ಕುದ್ದಾಜೆ, ಕಿಶೋರ್ ಕಾಯರ್ತೋಡಿ ಮತ್ತಿತರರು ಉಪಸ್ಥಿತರಿದ್ದರು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!