3 ವರ್ಷಗಳ ಹಿಂದೆ ನಡೆದಿದ್ದ ಮೇಲ್ಮನೆ ಚುನಾವಣೆ: ಫೆ.28ಕ್ಕೆ ಮತ ಮರುಎಣಿಕೆ

Picture of Savistara

Savistara

Bureau Report

ಚಿಕ್ಕಮಗಳೂರು: ಮೂರು ವರ್ಷಗಳ ಹಿಂದೆ ನಡೆದಿದ್ದ ವಿಧಾನಪರಿಷತ್‌ ಚುಣಾವಣೆಯ ಮತ ಮರು ಎಣಿಕೆ ಕಾರ್ಯ ಫೆ.28ರಂದು ನಡೆಯಲಿದೆ. ನಗರದ ಐಡಿಎಸ್‌ಜಿ ಕಾಲೇಜನಲ್ಲಿ ಮತ ಎಣಿಕೆಗೆ ಸಿದ್ಧತೆ ಮಾಡಲಾಗುತ್ತಿದ್ದು, ಎಲ್ಲಾ ಅಭ್ಯರ್ಥಿಗಳಿಗೂ ಜಿಲ್ಲಾ ಚುನಾವಣಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.

ಕಾಂಗ್ರೆಸ್‌ನಿಂದ ಎ.ವಿ.ಗಾಯತ್ರಿ ಶಾಂತೇಗೌಡ, ಬಿಜೆಪಿಯಿಂದ ಎಂ.ಕೆ.ಪ್ರಾಣೇಶ್, ಆಮ್ ಆದ್ಮ ಪಕ್ಷದಿಂದ ಡಾ.ಕೆ.ಸುಂದರಗೌಡ, ಪಕ್ಷೇತರರಾಗಿ ಬಿ.ಟಿ.ಚಂದ್ರಶೇಖರ, ಜಿ.ಐ.ರೇಣುಕುಮಾರ ಸ್ಪರ್ಧೆ ಮಾಡಿದ್ದರು. ಅಭ್ಯರ್ಥಿಗಳ ಸಮ್ಮುಖದಲ್ಲಿ ಮತ ಎಣಿಕೆ ನಡೆಯಲಿದೆ.ಮರು ಮತಎಣಿಕೆಗೆ ಆಯೋಗದಿಂದ ಸೂಚನೆ ಬಂದಿದ್ದು, ದಿನಾಂಕ ನಿಗದಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ತಿಳಿಸಿದರು.ಸ್ಥಳೀಯ ಸಂಸ್ಥೆಗಳಿಂದ ಪರಿಷತ್ತಿಗೆ 2021ರ ಡಿ. 10ರಂದು ಮತದಾನ, 14ರಂದು ಮತ ಎಣಿಕೆ ನಡೆದಿತ್ತು. ಬಿಜೆಪಿಯ ಎಂ.ಕೆ. ಪ್ರಾಣೇಶ್‌(ಹಾಲಿ ಉಪಸಭಾಪತಿ) 1,188 ಮತ ಪಡೆದಿದ್ದರೆ, ಕಾಂಗ್ರೆಸ್‌ನ ಎ.ವಿ. ಗಾಯತ್ರಿ ಶಾಂತೇಗೌಡ ಅವರು 1,182 ಮತ ಪಡೆದಿದ್ದರು. ಪ್ರಾಣೇಶ್‌ ಅವರು ಆರು ಮತದಿಂದ ಗೆಲುವು ಸಾಧಿಸಿದ್ದರು. ಫಲಿತಾಂಶವನ್ನು ಗಾಯತ್ರಿ ಅವರು ಪ್ರಶ್ನಿಸಿದ್ದರು.

ಮಾರ್ಚ್ 7ರೊಳಗೆ ಮತಗಳ ಮರು ಎಣಿಕೆ ನಡೆಸಿ ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ ನೀಡಿದೆ. ಹೈಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಕೆಯಾಗಲಿದೆ.

[t4b-ticker]
error: Content is protected !!