ಹಕ್ಕಿಜ್ವರ ಭೀತಿ : ಚಿಕನ್, ಮೊಟ್ಟೆ ವಹಿವಾಟಿಗೆ ಹೊಡೆತ; ಕೋಳಿ ಮಾಂಸ ಖರೀದಿಗೆ ಜನರ ಹಿಂದೇಟು

Picture of Savistara

Savistara

Bureau Report

ಕೋಳಿ ಮಾಂಸ ಹಾಗು ಮೊಟ್ಟೆ ಸರಿಯಾಗಿ ಬೇಯಿಸಿ ಸೇವಿಸಿದರೆ ಸಮಸ್ಯೆ ಇಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ರು ಜನ ಕೋಳಿ ಮಾಂಸ ಖರೀದಿಗೆ ಹಿಂದೇಟು ಹಾಕ್ತಿರುವುದು ಫಾರಂ ಮಾಲೀಕರಿಗೆ ದಿಕ್ಕು ತೋಚದಂತಾಗಿದೆ.

ದಾವಣಗೆರೆ : ಆಂಧ್ರಪ್ರದೇಶ ಹಾಗು ತೆಲಂಗಾಣ ರಾಜ್ಯಗಳಲ್ಲಿ ಹಕ್ಕಿಜ್ವರ ತಾಂಡವಾಡುತ್ತಿದೆ. ಇದು ಬಳ್ಳಾರಿ ಹಾಗು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೂ ಕಾಲಿಟ್ಟಿದೆ. ರಾಜ್ಯದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಬೆನ್ನಲ್ಲೇ ದಾವಣಗೆರೆ ಜನರಲ್ಲಿ ಆತಂಕ ಮನೆ ಮಾಡಿದೆ. ಬಹುತೇಕ ಚಿಕನ್ ಪ್ರಿಯರು ಕೋಳಿ ಮಾಂಸದಿಂದ ದೂರ ಆಗಿದ್ದಾರೆ.‌ ಎಲ್ಲಿ ಹಕ್ಕಿಜ್ವರ ಆವರಿಸಿಕೊಳ್ಳುತ್ತದೆಯೋ ಎಂಬ ಭಯದಲ್ಲಿ ಜನ ಕೋಳಿ ಮಾಂಸ ಹಾಗು ಮೊಟ್ಟೆ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.‌ ಇದು ಕುಕ್ಕುಟೋದ್ಯಮದ ಮೇಲೆ ಪರಿಣಾಮ ಬೀರಿದೆ.ಈ ಕುರಿತು ಜಿಲ್ಲಾಧಿಕಾರಿ ಡಾ. ಗಂಗಾಧರ್ ಸ್ವಾಮಿ ಜಿ.ಎಂ‌ ಅವರು ಸಭೆ ಮಾಡಿ ಕೋಳಿ ಮಾಂಸ ಹಾಗು ಮೊಟ್ಟೆ ಸರಿಯಾಗಿ ಬೇಯಿಸಿ ಸೇವಿಸಿದರೆ ಸಮಸ್ಯೆ ಇಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಆದ್ರೆ ಜನ ಕೋಳಿ ಮಾಂಸ ಖರೀದಿಗೆ ಹಿಂದೇಟು ಹಾಕ್ತಿರುವುದು ಮಾತ್ರ ಫಾರಂ ಮಾಲೀಕರನ್ನು ಚಿಂತೆಗೀಡು ಮಾಡಿದೆ.

ದಾವಣಗೆರೆ ಜಿಲ್ಲೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿಲ್ಲವಾದರೂ ಜನರಲ್ಲಿ ಆತಂಕ ಮಾತ್ರ ಮನೆಮಾಡಿದೆ. ಕೋಳಿ ಮಾಂಸ ತಿಂದ್ರೆ ಏನಾದ್ರು ಆರೋಗ್ಯ ಸಮಸ್ಯೆ ಕಾಡಬಹುದು ಎಂದು ಮಾಂಸಪ್ರಿಯರು ಭಯಭೀತರಾಗಿದ್ದಾರೆ. ಬಳ್ಳಾರಿಯಿಂದ ದಾವಣಗೆರೆ ಜಿಲ್ಲೆಗೆ ಬರುವ ಕೋಳಿ ಹಾಗು ಫೀಡರ್ ಮೇಲೆ ಜಿಲ್ಲಾಡಳಿತ ನಿಗಾ ಇಟ್ಟಿದೆ. ಇದಕ್ಕಾಗಿ ಆಯಾ ಮಾರ್ಗಗಳಲ್ಲಿ ಚೆಕ್​ಪೋಸ್ಟ್​ಗಳನ್ನು ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಅಲ್ಲದೆ ಚಿಕ್ಕಬಳ್ಳಾಪುರದಿಂದ ಆಮದಾಗುವ ಕೋಳಿಗಳ ಮೇಲೂ ನಿಗಾವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಅಲ್ಲದೆ ಕಾಡುಗಳಲ್ಲಿ ಪಕ್ಷಿಗಳು ಅಸಹಜವಾಗಿ ಸಾವನ್ನಪ್ಪಿದ್ರೆ ಅರಣ್ಯ ಇಲಾಖೆ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ತಿಳಿಸಲಾಗಿದೆ. ಹಕ್ಕಿಜ್ವರ ದಾವಣಗೆರೆ ಜಿಲ್ಲೆಗೆ ಕಾಲಿಡದಂತೆ ಜಿಲ್ಲಾಡಳಿತ ಸರ್ವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದದ್ದಾರೆ.

ಕೋಳಿ ಮಾಂಸ, ಮೊಟ್ಟೆ ದರಕ್ಕೆ ಹೊಡೆತ : ಕಳೆದ ಭಾನುವಾರ, ಮಂಗಳವಾರ ಕೋಳಿ ಮಾಂಸದ ಮಾರಾಟದ ವಹಿವಾಟು ಅಷ್ಟಕ್ಕಷ್ಟೆ ಎಂದು ಕೋಳಿ ಫಾರಂ ಮಾಲೀಕ ಮಲ್ಲಿಕಾರ್ಜುನ ಮಾಹಿತಿ ನೀಡಿದರು. ದೂರವಾಣಿ ಮೂಲಕ ಮಾಹಿತಿ ನೀಡಿದ ಅವರು “ಎರಡು ವಾರಗಳಲ್ಲಿ ಜಿಲ್ಲೆಯಲ್ಲಿ ಐದು ರೂಪಾಯಿ ಇದ್ದ ಮೊಟ್ಟೆ ಸಗಟು ಧಾರಣೆ 4.20 ರೂ.ಗೆ ಇಳಿಕೆಯಾಗಿದೆ. ಕೆಜಿ ಮಾಂಸದ ಕೋಳಿ ಸಗಟು ದರ 110-70 ಕ್ಕೆ ಇಳಿಕೆಯಾಗಿದೆ. ಕೋಳಿ ಮಾಂಸ ಹಾಗು ಮೊಟ್ಟೆಗೆ ಬೇಡಿಕೆ ಕಡಿಮೆಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.ಜಿಲ್ಲೆಯಲ್ಲಿರುವ ಫಾರಂಗಳೆಷ್ಟು, ಕೋಳಿ ಎಷ್ಟಿವೆ ? ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 210 ಕೋಳಿ ಫಾರಂಗಳಿವೆ. ಅಲ್ಲಿ 3.5 ಲಕ್ಷದಷ್ಟು ಕೋಳಿ ಸಾಕಾಣಿಕೆ ಮಾಡಲಾಗುತ್ತಿದೆ. ಅಲ್ಲದೆ 29 ಮೊಟ್ಟೆ ಕೋಳಿಯ ಫಾರಂಗಳಿದ್ದು, ಅಂದಾಜು 30 ಲಕ್ಷ ಮೊಟ್ಟೆ ಕೋಳಿಗಳಿವೆ. ದಾವಣಗೆರೆ ತಾಲೂಕಿನಲ್ಲೇ ಹೆಚ್ಚು ಫಾರಂಗಳಿವೆ. ಅಲ್ಲದೆ ಹರಿಹರ, ಜಗಳೂರು, ಅಲ್ಲಲ್ಲಿ ಫಾರಂಗಳನ್ನು ರೈತರು ಸಹ ಈ ಉದ್ಯಮ ನಡೆಸುತ್ತಿದ್ದಾರೆ.ಜಿಲ್ಲಾಧಿಕಾರಿ ಡಾ.ಗಂಗಾಧರ್ ಸ್ವಾಮಿ ಜಿಎಂ ಪ್ರತಿಕ್ರಿಯಿಸಿ “ಬಳ್ಳಾರಿ ಜಿಲ್ಲೆಯಲ್ಲಿ ಹಕ್ಕಿಜ್ವರ ಹರಡಿದೆ.‌ ಅಲ್ಲಿಂದ ಫೀಡರ್, ಕೋಳಿಗಳು ಬರುತ್ತಿವೆ ಎಂಬ ಮಾಹಿತಿ ಇದೆ. ಆ ರಸ್ತೆಯಲ್ಲಿ ಚೆಕ್​ಪೋಸ್ಟ್ ಮಾಡಲಾಗುತ್ತದೆ. ಚಿಕ್ಕಬಳ್ಳಾಪುರದಿಂದ ಬರುವ ಕೋಳಿಗಳ ಮೇಲೆ ನಿಗಾ ವಹಿಸಲಾಗಿದೆ.‌ ಜನ ಆತಂಕ ಪಡುವ ಅಗತ್ಯ ಇಲ್ಲ. ಇನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸಕಲ ಸಿದ್ಧತೆ ನಡೆಸಿದ್ದೇವೆ. ಮೊಟ್ಟೆ ಮತ್ತು ಚಿಕನ್ ಬೇಯಿಸಿ ತಿಂದರೆ ಯಾವುದೇ ಸಮಸ್ಯೆ ಇಲ್ಲ. ಮಾಂಸ, ಮೊಟ್ಟೆ ಬಳಸುವ ವೇಳೆ ಎಚ್ಚರಿಕೆ ಇರಬೇಕು. ಇನ್ನು ಹಾಸ್ಟೆಲ್​ಗಳಿಗೆ ಮುಂಜಾಗ್ರತಾ ಕ್ರಮ ವಹಿಸಬೇಕೆಂದು ಹೇಳಿದ್ದೇವೆ. ಇದು ಗಂಭೀರವಾದ ಕಾಯಿಲೆ ಅಲ್ಲ. ಇನ್ನು ಕಾಡುಗಳಲ್ಲಿ ಪಕ್ಷಿಗಳು ಸಹಜವಾಗಿ ಸಾವಿನಪ್ಪಿದ್ರೆ ಗಮನ ಹರಿಸಲು ಅರಣ್ಯ ಇಲಾಖೆಗೆ ಹೇಳಲಾಗಿದೆ” ಎಂದು ಮಾಹಿತಿ ನೀಡಿದರು.38 ರ‍್ಯಾಪಿಡ್ ರೆಸ್ಪಾನ್ಸ್ ಟೀಂ ಸಿದ್ಧ : ಜಿಲ್ಲೆಯಲ್ಲಿ ಒಟ್ಟು 38 ರ‍್ಯಾಪಿಡ್ ರೆಸ್ಪಾನ್ಸ್ ಟೀಂಗಳನ್ನು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಆ ಟೀಂ ಅಲ್ಲಿ ಒಬ್ಬರು ಪಶುವೈದ್ಯರು, ಒಬ್ಬರು ಸಿಬ್ಬಂದಿ, ಓರ್ವ ಗ್ರೂಪ್ ಡಿ ಸಿಬ್ಬಂದಿ ಇರುತ್ತಾರೆ. ಈ ಟೀಂ ಆಯಾ ಕೋಳಿ ಫಾರಂಗಳಿಗೆ ಭೇಟಿ ನೀಡಿ ಯಾವ ರೀತಿ ಮುಂಜಾಗ್ರತಾ ಕ್ರಮ ವಹಿಸಬೇಕೆಂದು ಸಲಹೆ ನೀಡಲಿದ್ದಾರೆ. ಕೋಳಿ ಫಾರಂಗಳು ಒಟ್ಟು 210 ಇದ್ದು, ಮಾಲೀಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮಾಡುತ್ತೇವೆ. ಯಾರೂ ಆತಂಕಪಡುವ ಅಗತ್ಯ ಇಲ್ಲ. ಇದು ಸಾಮಾನ್ಯ ವೈರಸ್, ಮುಂಜಾಗ್ರತೆ ವಹಿಸಿದರೆ ನಮಗಾಗಲಿ, ಪ್ರಾಣಿ ಪಕ್ಷಿಗಳಿಗಾಗಲಿ ಯಾವುದೇ ಹಾನಿಯಾಗುವುದಿಲ್ಲ” ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.ಜಿಪಂ ಸಿಇಒ ಸುರೇಶ್ ಬಿ. ಹಿಟ್ನಾಳ್ ಹೇಳಿದ್ದಿಷ್ಟು : 200ಕ್ಕೂ ಹೆಚ್ಚು ಪೌಲ್ಟ್ರಿ ಫಾರಂಗಳಿವೆ. ಅಲ್ಲಿ ಸ್ವಚ್ಛತೆಗೆ ಹೆಚ್ಚು ಕ್ರಮ ತೆಗೆದುಕೊಳ್ಳಬೇಕಾಗಿದೆ. ಆಯಾ ಗ್ರಾ.ಪಂ ವ್ಯಾಪ್ತಿಯಲ್ಲಿ ಔಷಧ ಸಿಂಪಡಣೆ ಮಾಡಬೇಕು, ಅಲ್ಲದೆ ನಗರದಲ್ಲಿರುವ ಕೋಳಿ ಅಂಗಡಿಗಳಲ್ಲಿ ಸ್ವಚ್ಛತೆ ವಹಿಸಬೇಕಾಗಿದೆ. ಕೋಳಿ ಪೌಲ್ಟ್ರಿ ವೇಸ್ಟೇಜ್ ಬಗ್ಗೆ ಗಮನಹರಿಸಬೇಕಾಗಿದೆ. ಪೌಲ್ಟ್ರಿ ಗೊಬ್ಬರ ಅಡಿಕೆ ಬೆಳೆಗೆ ಹಾಕುವುದನ್ನು ರೈತರು ಮುಂದೂಡಿದರೆ ಸಾಕು” ಎಂದು ಸಿಇಒ ಸಲಹೆ ನೀಡಿದರು. ಮಾಡಿದರು.

[t4b-ticker]
error: Content is protected !!