ಗೋ ಸೇವಾ ಗತಿವಿಧಿ ಕರ್ನಾಟಕ,ರಾಧ ಸುರಭಿ ಗೋಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ (ರಿ.)ಬ್ರಹ್ಮಗಿರಿ, ಗೋವಿನತೋಟ, ಪುದು, ಬಂಟ್ವಾಳ ತಾಲೂಕು ವತಿಯಿಂದ ರಾಜ್ಯಾದ್ಯಂತ ನಂದಿ ರಥ ಗೋ ಯಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ.ಡಿಸೆಂಬರ್ 31/12/24 ರಂದು ರಾಜ್ಯಾದ್ಯಂತ ಆರಂಭಗೊಂಡ ಯಾತ್ರೆ ಮಾರ್ಚ್ 29 ಕ್ಕೆ ಸಮಾರೋಪಗೊಳ್ಳಲಿದೆ.

ಭಾರತೀಯ ಕೃಷಿ ಪರಂಪರೆಯಲ್ಲಿ ಗೋವಿಗೆ ವಿಶೇಷ ಸ್ಥಾನಮಾನವಿದೆ, ಗೋವು ದೇವತಾ ಸ್ವರೂಪಿಯೆಂದು ನಂಬಿಕೊಂಡು ಬಂದ ಬಹು ದೊಡ್ಡ ಸಮುದಾಯ ನಮ್ಮ ದೇಶದಲ್ಲಿದ್ದು ಆದರೆ ಇತ್ತಿಚಿನ ದಿನಗಳಲ್ಲಿ ಗೋವು ಮತ್ತು ಅದರ ಅಗತ್ಯತೆ ಬಗ್ಗೆ ತಿಳಿದುಕೊಳ್ಳಲು ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ.

ಗೋವು,ಕೃಷಿ ಮತ್ತು ಗ್ರಾಮೀಣ ಬದುಕಿಗೆ ಅವಿನಾಭಾವ ಸಂಬಂಧವಿದ್ದು ಇತ್ತೀಚಿನ ದಿನಗಳಲ್ಲಿ ಅವೆಲ್ಲ ಮರೆಯಾಗುತ್ತಿದ್ದು ಗೋವು ಸಾಕಣೆ ಕಡಿಮೆಯಾಗುತ್ತಿದೆ,ಪುಣ್ಯಕೋಟಿ ಯ ಈ ನೆಲದಲ್ಲಿ ಮತ್ತೆ ದೇಶಿ ಗೋ ತಳಿ ಮತ್ತು ಗೋ ಆಧಾರಿತ ಉತ್ಪನ್ನಗಳನ್ನು,ಗೋವು ಮಾತೆ ಯ ಮಹಿಮೆ ಪ್ರಸ್ತುತ ಸಂದರ್ಭದಲ್ಲಿ ಸಮಾಜಕ್ಕೆ ತಿಳಿಸುವುದು ಯಾತ್ರೆಯ ಉದ್ದೇಶವಾಗಿದೆ.

ರಾಜ್ಯಾದ್ಯಂತ ವಾಗಿ ರಾಜ್ಯಪಾಲ ರಿಂದ ಪೂಜ್ಯ ಅನೇಕ ಯತಿವರ್ಯ ರು ಗೋ ಯಾತ್ರೆಯಲ್ಲಿ ಪಾಲ್ಗೊಂಡು ಶುಭ ಹಾರೈಸಿದ್ದಾರೆ ಈ ಯಾತ್ರೆ ಮಾರ್ಚ್ 15 ರಂದು ಸುಳ್ಯ ನಗರಕ್ಕೆ ಸಕಲೇಶಪುರ ಮಾರ್ಗವಾಗಿ ಸಂಜೆ 4 ಗಂಟೆಗೆ ಅಗಮಿಸಲಿದ್ದು ಅಲ್ಲಲ್ಲಿ ಗೋ ಪ್ರೇಮಿಗಳು ಸ್ವಾಗತಿಸಲಿದ್ದು ನಂದಿ ಗೆ ಪೂಜೆ ಮಾಡುವ ಅವಕಾಶ ಕಲ್ಪಿಸಲಾಗಿದ್ದು ಕುಣಿತ ಭಜನೆ ಮತ್ತು ಪೂರ್ಣ ಕುಂಭದೊಂದಿಗೆ ನಂದಿ ಗೋ ಯಾತ್ರೆಯನ್ನು ಸ್ವಾಗತಿಸಲಿದ್ದಾರೆ.













































