ನಂದಿ ರಥಯಾತ್ರೆ ಕುಕ್ಕೆ ಸುಬ್ರಹ್ಮಣ್ಯ ಪುರಪ್ರವೇಶ

Picture of Savistara

Savistara

Bureau Report

ಇಂದು ಲಾಭದಾಯಕ ದೃಷ್ಟಿಯಿಂದ ಬೆಳೆಗಳಿಗೆ ರಾಸಾಯನಿಕ ಹಾಕುವುದರಿಂದ ವಿಷಯುಕ್ತ ಆಹಾರ ಸೇವನೆ ನಮ್ಮ ಜೀವನದ ಒಂದು ಭಾಗ ವಾಗಿದೆ.

ಹಾಗಾಗಿ ವಿಷಮುಕ್ತ ಆಹಾರ ಪಡೆಯ ಬೇಕಾದರೆ ನಾವು ಗೋವುಗಳನ್ನು ಸಾಕಿ ಸಾವಯವ ಗೊಬ್ಬರದಿಂದ ಬೆಳೆಗಳನ್ನು ಬೆಳೆಯ ಬೇಕು. ಗೋ ಸಂಪತ್ತು ನಮ್ಮ ನಿಜವಾದ ಸಂಪತ್ತು ಎಂದು ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.ಗೋಸೇವಾ ಗತಿವಿಧಿ ಕರ್ನಾಟಕ, ರಾಧಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಟ್ರಸ್ಟ್ ವತಿಯಿಂದ ಕರ್ನಾಟಕ ರಾಜ್ಯಾದ್ಯಂತ ಹೊರಟಿ ರುವ ನಂದಿ ರಥಯಾತ್ರೆ ಶುಕ್ರವಾರ ಸುಬ್ರಹ್ಮಣ್ಯ ಪುರಪ್ರವೇಶ ಮಾಡಿದ್ದು, ಈ ವೇಳೆ ಶ್ರೀಗಳು ನಂದಿ ರಥಯಾತ್ರೆಯನ್ನು ಸ್ವಾಗತಿಸಿ ಆಶೀರ್ವಚನ ನೀಡಿದರು.ನಂದಿ ರಥಯಾತ್ರೆಯನ್ನು ಸುಬ್ರಹ್ಮಣ್ಯದ ಕಾಶಿಕಟ್ಟೆ ಗಣಪತಿ ದೇವಸ್ಥಾನದ ಮುಂಭಾಗ ಸ್ವಾಗತಿಸಲಾಯಿತು. ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ಗೋವಿಗೆ ಹಾರ ಹಾಕಿ, ಫಲಾಹಾರ ನೀಡಿ ಹರಸಿದರು. ಬಳಿಕ ಮೆರವಣಿಗೆ ಯಲ್ಲಿನಂದಿ ರಥ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಗೆ ಬಂದು ಅಲ್ಲಿ ಸಭಾ ಕಾರ್ಯ ಕ್ರಮ ನಡೆಯಿತು.

ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ ಅಧ್ಯಕ್ಷ ಭಕ್ತಿಭೂಷಣ್ ದಾಸ್, ಗೋಸೇವಾ ಗತಿವಿಧಿ ಕರ್ನಾಟಕ ಉತ್ತರ ಪ್ರಾಂತ ಪ್ರಶಿಕ್ಷಣ ಪ್ರಮುಖ್ ದತ್ತಾತ್ರೇಯ ಭಟ್, ಸುಳ್ಯ ಬಿಜೆಪಿ ಮಂಡಳ

ಅಧ್ಯಕ್ಷ ವೆಂಕಟ್ ವಳಲಂಬೆ, ಸುಬ್ರಹ್ಮಣ್ಯ ರಥಯಾತ್ರೆ ಸಂಚಾಲಕ ಕಿಶೋರ್ ಶಿರಾಡಿ, ಗೌರವಾಧ್ಯಕ್ಷ ಯಜ್ಞೇಶ್ ಆಚಾರ್, ಜಯಪ್ರಕಾಶ್ ಕೂಜುಗೋಡು, ದಿನೇಶ್ ಸಂಪ್ಯಾಡಿ, ಅಶೋಕ್ ಕುಮಾರ್, ಪ್ರಮೋದ್ ಕಡಬ, ಗಿರಿಧರ ಸ್ಕಂದ, ಶ್ರೀಕುಮಾರ್ ಬಿಲದ್ವಾರ, ಯಶೋಧ ಕೃಷ್ಣ ಪಂಚಾಯಿತಿ, ಜಯಪ್ರಕಾಶ್ ಮೊಗ್ರ, ಎನ್ ರಾಜೇಶ್ ಆಚಾರ್ಯ, ಎಸ್. ಚಂದ್ರಶೇಖರ ನಾಯರ್, ಭಾರತಿ ದಿನೇಶ್, ಶುಭಶಿಣಿ ಶಿವರಾಂ, ಲತಾಸರ್ವೇಶ್ವರ ವನಜಾ ವಿ.ಭಟ್, ರಾಮಚಂದ್ರ ದೇವರಗದ್ದೆ ಮತ್ತಿತರು ಉಪಸ್ಥಿತರಿದ್ದರು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!