ಶ್ರೀಕೃಷ್ಣ ಮಂದಿರ ಕದ್ರಿಯಲ್ಲಿ ನ೦ದಿ ರಥಯಾತ್ರೆಯ ಸಮಾರೋಪ ಸಮಾರಂಭದ ಕಾರ್ಯಾಲಯ ಉದ್ಘಾಟನೆ

Picture of Savistara

Savistara

Bureau Report

ಇಂದು ಶ್ರೀಕೃಷ್ಣ ಮಂದಿರ,ಕದ್ರಿ ನ೦ದಿ ರಥಯಾತ್ರೆಯ ಸಮಾರೋಪ ಸಮಾರಂಭದ, ಕಾರ್ಯಾಲಯ ಉದ್ಘಾಟನೆಯು ಮಾ.15 ಶನಿವಾರದಂದು ಶ್ರೀಕೃಷ್ಣ ಮಂದಿರ,ಕದ್ರಿ ದ್ವಾರದ ಬಳಿ ನಡೆಯಿತು. ಕಾರ್ಯಕ್ರಮ ವನ್ನು ಶ್ರೀ ಶ್ರೀ ರಾಜಶೇಕರಾನಂದ ಸ್ವಾಮೀಜಿ, ವಜ್ರದೇಹಿ ಮಠ ಗುರುಪುರ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶ್ರೀಯುತ ಬ್ರಿಜೇಶ್ ಚೌಟ, ಸಂಸದರು ದಕ್ಷಿಣ ಕನ್ನಡ ಜಿಲ್ಲೆ.ಉಪಸ್ಥಿತರಿದ್ದರು. ಶ್ರೀಯುತ ವೇದವ್ಯಾಸ ಕಾಮತ್, ಶ್ರೀಯುತ ಭರತ್ ಶೆಟ್ಟಿ, ಶಾಸಕರು ಮಂಗಳೂರು.ಹಾಗೂಸ್ವಾಗತ ಸಮಿತಿಯ ಎಲ್ಲಾ ಪದಾಧಿಕಾರಿಗಳು. ಪೂಜ್ಯ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿ ಮಠ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿದರು. ವೇದಿಕೆಯಲ್ಲಿದ್ದ ಗಣ್ಯರು ಆಮಂತ್ರಣ ಪತ್ರ ಬಿಡುಗಡೆ ಮಾಡಿದರು.

ಗೋ ಸೇವಾ ಗತಿವಿಧಿ, ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಶ್ರೀ ಪ್ರವೀಣ ಸರಳಾಯ ಅವರು ಪ್ರಾಸ್ತಾವಿಕ ಮಾತನಾಡಿದರು.ಸ್ವಾಗತ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಗಿರಿಧರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀ ಜಗದೀಶ್ ಶೇರಣವ, ಶಾಸಕರಾದ ಶ್ರೀಯುತ ಭರತ್ ಶೆಟ್ಟಿ ಹಾಗೂ ಶ್ರೀಯುತ ವೇದವ್ಯಾಸ ಕಾಮತ್, ರಾಧಾ ಸುರಭಿ ಗೋ ಮಂದಿರದ ಶ್ರೀಯುತ ಭಕ್ತಿ ಭೂಷಣ ಜಿ, ಮೊದಲಾದವರು ಉಪಸ್ಥಿತರಿ ದ್ದರು.ಪ್ರಧಾನ ಕಾರ್ಯದರ್ಶಿ ಜಗದೀಶ ಶೇಣವ ಅವರು ಸ್ವಾಗತಿಸಿದರು.ಸುಧಾಕರ್ ರಾವ್ ಪೇಜಾವರ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಮನೋಹರ್ ಶೆಟ್ಟಿ ಕದ್ರಿ ಅವರು ವಂದನಾರ್ಪಣೆ ಗೈದರು.ಸಂಸದರಾದ ಕ್ಯಾಪ್ಟನ್ ಭೃಜೇಶ್ ಚೌಟ ಆಗಮಿಸಿ, ಶುಭ ಹಾರೈಸಿದರು.ಶ್ರೀಯುತ ಎಚ್ ಕೆ ಪುರುಷೋತ್ತಮ್, ಹರಿಕೃಷ್ಣ ಮಂಗಳೂರು, ಭೋಜರಾಜ ಕಲ್ಲಡ್ಕ, ಗಂಗಾಧರ್ ಪೆರ್ಮಂಕಿ, ಬಸವರಾಜ ಬಿರಾದಾರ, ತಾರಾನಾಥ ಕೊಟ್ಟಾರಿ, ಅನಿಲ್ ಪಂಡಿತ್, ವಿನಯ್, ಸಂದೇಶ್ ಮೊದಲಾದವರು ಉಪಸ್ಥಿತರಿದ್ದರು.

[t4b-ticker]
error: Content is protected !!