ಸುಳ್ಯಕ್ಕೆ ಆಗಮಿಸಿದ ನಂದಿ ರಥಯಾತ್ರೆಗೆ | ಸಾರ್ವಜನಿಕರಿಂದ ಭವ್ಯ ಸ್ವಾಗತ

Picture of Savistara

Savistara

Bureau Report

ಗೋಸೇವಾ ಗತಿವಿಧಿ ಕರ್ನಾಟಕ, ರಾಧಾಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ್ ಟ್ರಸ್ಟ್ ಇದರ ಆಶ್ರಯದಲ್ಲಿ ರಾಜ್ಯವ್ಯಾಪಿ ಸಂಚರಿಸಿದ ನಂದಿ ರಥಯಾತ್ರೆ ಮಾ.15ರಂದು ಸಂಜೆ ಸುಳ್ಯಕ್ಕೆ ಆಗಮಿಸಿತು. ರಥಯಾತ್ರೆ ಸುಳ್ಯ ಜ್ಯೋತಿ ಸರ್ಕಲ್ ತಲುಪುತಿದ್ದಂತೆ ಶಾಸಕಿ‌ ಭಾಗೀರಥಿ ಮುರುಳ್ಯ ನಂದಿಗೆ ಹಾರಹಾಕಿ ಸ್ವಾಗತಿಸಿದರು. ಅಕಾಡೆಮಿ ಆಫ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರು ಪುಷ್ಪಾರ್ಚನೆಗೈದರು. ನಂದಿ ರಥಯಾತ್ರೆಯ ಸ್ವಾಗತ ಸಮಿತಿ ಅಧ್ಯಕ್ಷ ಅಕ್ಷಯ್ ಕೆ.ಸಿ.,‌ ಕಾರ್ಯಾಧ್ಯಕ್ಷ ಪತಂಜಲಿ ಭಾರದ್ವಾಜ್, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ,ಮಾಜಿ ಸಚಿವ ಎಸ್ ಅಂಗಾರ ಸೇರಿದಂತೆ ನಂದಿ ರಥಯಾತ್ರೆ ಸಮಿತಿಯ ಸದಸ್ಯರು , ಸಾವಿರಾರು ಮಂದಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!