‘ಆಪರೇಷನ್ ಸಿಂದೂರ’ಕ್ಕೆ ವಿಜಯ ದೊರಕಿಸಿಕೊಡುವಲ್ಲಿ ಬ್ರಹ್ಮೋಸ್ ಕ್ಷಿಪಣಿ ಪಾತ್ರ ದೊಡ್ಡದೇ ಇದೆ. ಈ ವಿಜಯದ ಬಳಿಕ ಬ್ರಹ್ಮೋಸ್ ಕ್ಷಿಪಣಿಗೆ ಭರ್ಜರಿ ಡಿಮ್ಯಾಂಡ್ ಬಂದಿದೆ. ಇದೀಗ 17ಕ್ಕಿಂತ ಹೆಚ್ಚು ದೇಶಗಳು ಬ್ರಹ್ಮೋಸ್ ಮೇಲೆ ಕಣ್ಣಿಟ್ಟಿದ್ದು, ಕ್ಷಿಪಣಿ ಖರೀದಿಗೆ ಮುಂದಾಗಿವೆ.
ದೆಹಲಿ: ಭಾರತದ ಎದುರು ಪಾಕಿಸ್ತಾನ ಮಂಡಿಯೂರಿದೆ. ಕದನ ವಿರಾಮದ ನೆಪವೊಡ್ಡಿ, ಸೋಲಿನ ಸುಳಿಯಿಂದ ಸದ್ಯಕ್ಕೆ ಬಚಾವ್ ಆಗಿದೆ. ಭಾರತದ ಆಪರೇಷನ್ ಸಿಂದೂರ ಇಡೀ ಜಗತ್ತಿನ ನಿದ್ದೆ ಗೆಡಿಸಿದೆ. ಅದರಲ್ಲೂ ಆಪರೇಷನ್‌ಗೆ ವಿಜಯ ದೊರಕಿಸಿಕೊಡುವಲ್ಲಿ ಬ್ರಹ್ಮೋಸ್ ಕ್ಷಿಪಣಿ ಪಾತ್ರ ದೊಡ್ಡದೇ ಇದೆ. ಈ ವಿಜಯದ ಬಳಿಕ ಬ್ರಹ್ಮೋಸ್ ಕ್ಷಿಪಣಿಗೆ ಭರ್ಜರಿ ಡಿಮ್ಯಾಂಡ್ ಬಂದಿದೆ. ಭಾರತವು ಜನವರಿ 2022 ರಲ್ಲಿ ಫಿಲಿಪೈನ್ಸ್‌ನೊಂದಿಗೆ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಗಳ ಒಪ್ಪಂದಕ್ಕೆ ಸಹಿ ಹಾಕಿತು. ಇದೀಗ 17ಕ್ಕಿಂತ ಹೆಚ್ಚು ದೇಶಗಳು ಬ್ರಹ್ಮೋಸ್ ಮೇಲೆ ಕಣ್ಣಿಟ್ಟಿದ್ದು, ಕ್ಷಿಪಣಿ ಖರೀದಿಗೆ ಮುಂದಾಗಿವೆ.
ಆಪರೇಷನ್ ಸಿಂದೂರ್‌ಗೆ ಗೆಲುವು ತಂದ ಬ್ರಹ್ಮೋಸ್
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶವನ್ನು ತಲುಪಿಸುವ ಮೂಲಕ, ಆಪರೇಷನ್ ಸಿಂಧೂರ್‌ನಲ್ಲಿ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಪ್ರಮುಖ ಪಾತ್ರ ವಹಿಸಿತು. ಇದರ ಯಶಸ್ವಿ ಬಳಕೆಯು ಭಾರತದ ನಿಖರ-ದಾಳಿ ಸಾಮರ್ಥ್ಯಗಳನ್ನು ಎತ್ತಿ ತೋರಿಸಿತು ಮತ್ತು ಪಾಕಿಸ್ತಾನ ಮತ್ತು ಒಳಗೊಂಡಿರುವ ಭಯೋತ್ಪಾದಕ ಜಾಲಗಳಿಗೆ ಬಲವಾದ ಸಂಕೇತವನ್ನು ಕಳುಹಿಸಿತು.












































