ಲಕ್ನೋ:_ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಾಯಿ ಸಾವಿತ್ರಿ ದೇವಿ (91) ನಿಧನರಾದರು.
Advertisement

ಸಭೆಯೊಂದರಲ್ಲಿ ಮಾತನಾಡುತ್ತಿದ್ದ ವೇಳೆ ತಾಯಿಯ ನಿಧನದ ಸುದ್ದಿ ತಿಳಿದು ಯೋಗಿ ಆದಿತ್ಯನಾಥ್ ಭಾವುಕರಾದರು. ಸಭೆಯನ್ನು ಅಲ್ಲಿಗೆ ಮೊಟಕುಗೊಳಿಸಿ ತಕ್ಷಣ ಉತ್ತರಾಖಂಡಕ್ಕೆ ತೆರಳಲು ನಿರ್ಧರಿಸಿದರು.
Advertisement

Advertisement

ಉತ್ತರಾಖಂಡದ ಪೌರಿ ಗರ್ಹ್ವಾಲ್ ಜಿಲ್ಲೆಯ ಪಂಚೂರು ಗ್ರಾಮದ ನಿವಾಸಿಯಾಗಿದ್ದ ಸಾವಿತ್ರಿ ದೇವಿ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
Advertisement

Advertisement

ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.ಸಾವಿತ್ರಿ ದೇವಿ ಅವರಿಗೆ ಮೂವರು ಪುತ್ರರು ಹಾಗೂ ನಾಲ್ವರು ಪುತ್ರಿಯರು ಇದ್ದಾರೆ. ಯೋಗಿ ಆದಿತ್ಯನಾಥ್ ಎರಡನೇ ಪುತ್ರ.
Advertisement

Advertisement

ತಾಯಿಯ ಅಂತ್ಯಕ್ರಿಯೆ ಪಂಚೂರು ಗ್ರಾಮದಲ್ಲಿ ನಡೆಯಲಿದ್ದು, ಯೋಗಿ ಆದಿತ್ಯನಾಥ್ ಪಾಲ್ಗೊಳ್ಳಲಿದ್ದಾರೆ.ಸಾವಿತ್ರಿ ದೇವಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ













































