ಎನ್‌ಎಚ್‌ಎಂ ವೈದ್ಯರ ಸಂಬಳ ಹೆಚ್ಚಳ

Picture of Savistara

Savistara

Bureau Report

ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನ (ಎಸ್.ಎಚ್‌.ಎಂ) ಯೋಜನೆ ಯಡಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಮತ್ತು ಸ್ಟಾರ್ಫ್ ನರ್ಸ್ ಗಳ ವೇತನವನ್ನು ರಾಜ್ಯ ಆರೋಗ್ಯ ಇಲಾಖೆ ಪರಿಷ್ಕರಿಸಿದೆ. ಎನ್.ಎಸ್. ಎಂ ಕಾರ್ಯ ಕಮದಡಿ ಕರ್ತವ್ಯ ನಿರ್ವಹಿಸುತ್ತಿರುವ ಎಂಬಿಬಿಎಸ್ ವೈದ್ಯರು, ತಜ್ಞ ವೈದ್ಯರು, ಎನ್‌ಸಿಯು ಮತ್ತು ಐಸಿಯು ದಲ್ಲಿ ಕೆಲಸ ಮಾಡುವ ಸ್ಟಾಫ್ ನರ್ಸ್ಗಳ ಬೇತನ ಪರಿಷ್ಕರಿಸಲಾಗಿದೆ.

ಎಷ್ಟು ಹೆಚ್ಚಳ?: ಎಂಬಿಬಿಎಸ್ ವೈದ್ಯರಿಗೆ ಪ್ರಸ್ತುತ ವೇತನ 46,895- 50,000 ರೂ.ಗಳಷ್ಟಿದ್ದು, ಪರಿಷ್ಕೃತ ವೇತನ 60 ಸಾವಿರ ರೂ. ಮಾಡಲಾಗಿದೆ. ತಜ್ಞ ವೈದ್ಯರಿಗೆ ಪ್ರಸ್ತುತ 1,10,000-1,30,000 ರೂ. ಇದ್ದು, ಇದನ್ನು 1.40 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಸ್ಟಾಫ್ ನರ್ಸ್ಗಳಿಗೆ ಪ್ರಸ್ತುತ 14,186 18,774 ರೂ. ಇದ್ದು, 22 ಸಾವಿರ ರೂ.ಗೆ ಪರಿಷ್ಠಸಲಾಗಿದೆ. ಇದೇ ವೇಳೆ ಪ್ರಸೂತಿ ಮತ್ತು ಸ್ತ್ರೀರೋಗ, ಮಕ್ಕಳ ತಜ್ಞರು. ಅನಸ್ತೇಶಿಯಾ, ಜನರಲ್ ಮೆಡಿಸಿನ್, ಮೂಳೆತಜ್ಞ, ಸರ್ಜನ್ ಹುದ್ದೆಗೆ ಆರಂಭಿಕ ವೇತನ 1.40 ಲಕ್ಷ ರೂ. ವೇತನದ ಜತೆಗೆ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಪ್ರತಿ ವರ್ಷ ಅನುಭವಕ್ಕೆ ಶೇ 2.5ರಷ್ಟು ಹೆಚ್ಚುವರಿ ವೇತನ ಸಹ ನೀಡಲಾಗುತ್ತದೆ.

ಹೊಸ ಸಿಬ್ಬಂದಿ ಮಾತ್ರ ಅನ್ವಯ: ಪರಿಷ್ಕರಿಸಲ್ಪಟ್ಟ ವೇತನವು ಹೊಸದಾಗಿ ನೇಮಕಗೊಂಡ ಸಿಬ್ಬಂದಿಗಳಿಗೆ ಮಾತ್ರ ಅನ್ವಯಿಸುತ್ತದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಹಾಲಿ ಪಡೆಯುತ್ತಿರುವ ವೇತನ ಶ್ರೇಣಿಯಲ್ಲಿಯೇ ಮುಂದುವರಿಯುತ್ತಾರೆ.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!