ನಾರಿಯರ ಮೊಗದಲ್ಲಿ ಮಂದಹಾಸ: ಭಾರಿ ಇಳಿಕೆ ಕಂಡ ಬಂಗಾರ, ರಾಜ್ಯದಲ್ಲಿಂದು ಎಷ್ಟಿದೆ ಚಿನ್ನದ ದರ?

Picture of Savistara

Savistara

Bureau Report

ಬಂಗಾರದ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಇತ್ತೀಚಿನ ದಿನಗಳಲ್ಲಿ ಬಂಗಾರದ ದರ ಇಳಿಮುಖ ಕಾಣುತ್ತಿದೆ, ಇದು ಆಭರಣ ಪ್ರಿಯರನ್ನು ತುಸು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

ಹೈದರಾಬಾದ್​: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ತೀವ್ರವಾಗಿ ಕುಸಿತ ಕಂಡಿವೆ. 99.9 ಫ್ಯೂರಿಟಿಯ 10 ಗ್ರಾಂ ಚಿನ್ನದ ಬೆಲೆ ರೂ. ಬುಧವಾರ 97,000 ರೂ.ಗೆ ಇಳಿಕೆ ಕಂಡಿತ್ತು. ಗುರುವಾರದ ವೇಳೆಗೆ 2,040 ರೂಗಳಷ್ಟು ಕುಸಿತ ಕಾಣುವ ಮೂಲಕ 94,960ಕ್ಕೆ ತಲುಪಿದೆ.ಬೆಳ್ಳಿ ಬೆಲೆ ಪ್ರತಿ ಕೆಜಿಗೆ ರೂ. ಬುಧವಾರ 99,100 ರೂ. ಇತ್ತು. ಅದು ಗುರುವಾರದ ವೇಳೆಗೆ 2,320ರೂ. ಇಳಿಕೆ ಕಾಣುವ ಮೂಲಕ 96,780ಕ್ಕೆ ಇಳಿಕೆ ಕಂಡಿದೆ.

  • ಬೆಂಗಳೂರಿನಲ್ಲಿ ಸಂಜೆ 5:30 ಗಂಟೆಯ ವೇಳೆಗೆ 99.9 ಫ್ಯೂರಿಟಿಯ 10 ಗ್ರಾಂ ಕಾಯಿನ್​ ಬಂಗಾರದ ಬೆಲೆ 95,550 ರೂ ಇತ್ತು.
  • ಇನ್ನು 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ 2130 ರೂ ಇಳಿಕೆ ಆಗುವ ಮೂಲಕ 93,930 ಮಾರಾಟವಾಗುತ್ತಿತ್ತು.
  • 22 ಕ್ಯಾರೆಟ್​ ನ 10 ಗ್ರಾಂ ಆಭರಣ ಚಿನ್ನದ ಬೆಲೆ 1950 ರೂ ಕಡಿಮೆ ಆಗುವ ಮೂಲಕ 86100 ರೂ. ಆಗಿದೆ.
  • ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ ಮೇ 15, 2025: ಹೈದರಾಬಾದ್‌ನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ ರೂ.94,960. ಒಂದು ಕಿಲೋ ಬೆಳ್ಳಿಯ ಬೆಲೆ ರೂ. 96,780.
  • ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಮಾರುಕಟ್ಟೆಯ ಆರಂಭದಲ್ಲಿದ್ದ ದರಗಳಾಗಿವೆ. ಚಿನ್ನ ಮತ್ತು ಬೆಳ್ಳಿ ದರಗಳು ಏರಿಳಿತಗೊಳ್ಳುತ್ತವೆ.
  • ಸ್ಪಾಟ್ ಚಿನ್ನದ ಬೆಲೆ? : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಡಿಮೆಯಾಗಿದೆ. ಬುಧವಾರ 3,232 ಡಾಲರ್ ಇದ್ದ ಒಂದು ಔನ್ಸ್ ಚಿನ್ನದ ಬೆಲೆ ಗುರುವಾರ 82 ಡಾಲರ್ ಇಳಿಕೆಯಾಗಿ 3,150 ಡಾಲರ್ ತಲುಪಿದೆ. ಒಂದು ಔನ್ಸ್ ಬೆಳ್ಳಿಯ ಪ್ರಸ್ತುತ ಬೆಲೆ $31.888 ಆಗಿದೆ.
  • ಷೇರು ಮಾರುಕಟ್ಟೆ :ದೇಶೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಬುಧವಾರ ಲಾಭದೊಂದಿಗೆ ಆರಂಭವಾಗಿ ಲಾಭದೊಂದಿಗೆ ಮುಕ್ತಾಯ ಕಂಡಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 395 ಅಂಕಗಳ ಏರಿಕೆಯೊಂದಿಗೆ 25062 ಅಂಶಗಳಿಗೆ ತಲುಪಿದೆ. ಇನ್ನು ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್​ 1200 ಅಂಕಗಳ ಏರಿಕೆಯೊಂದಿಗೆ 82530.74 ಕ್ಕೆ ಮುಟ್ಟಿದೆ.
[t4b-ticker]
error: Content is protected !!