ಜನರ ಬಳಿ ಇನ್ನೂ 6,181 ಕೋಟಿ ರೂ. ಮೌಲ್ಯದ 2,000 ರೂ. ನೋಟುಗಳಿವೆ: ರಿಸರ್ವ್ ಬ್ಯಾಂಕ್

Picture of Savistara

Savistara

Bureau Report

2,000 ರೂ. ನೋಟುಗಳ ಕುರಿತು ಆರ್‌ಬಿಐನ ಪ್ರಮುಖ ಘೋಷಣೆಯೊಂದನ್ನು ಮಾಡಿದೆ.

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ 2,000 ರೂ. ನೋಟುಗಳ ಕುರಿತು ಪ್ರಮುಖ ಘೋಷಣೆ ಮಾಡಿದೆ. 2,000 ರೂ. ನೋಟುಗಳು ನಮಗೆ ಪೂರ್ಣವಾಗಿ ತಲುಪಿಲ್ಲ ಎಂದು ಅದು ಹೇಳಿದೆ. ಜನರ ಬಳಿ ಇನ್ನೂ 6,181 ಕೋಟಿ ರೂ. ಮೌಲ್ಯದ 2,000 ರೂ. ನೋಟುಗಳನ್ನು ಇವೆ ಎಂದು ಭಾರತೀಯ ರಿಸರ್ವ್​ ಬ್ಯಾಂಕ್​​ ಸ್ಪಷ್ಟಪಡಿಸಿದೆ.ಚಲಾವಣೆಯಲ್ಲಿರುವ 2,000 ರೂ. ನೋಟುಗಳಲ್ಲಿ 98.26 ಪ್ರತಿಶತದಷ್ಟನ್ನ ಮೇ 19, 2023ರ ಹೊತ್ತಿಗೆ ಹಿಂತಿರುಗಿಸಲಾಗಿದೆ ಎಂದು ಆರ್​ ಬಿಐ ಘೋಷಿಸಿದೆ. ಆಯ್ದ ಅಂಚೆ ಕಚೇರಿಗಳಲ್ಲಿ 2,000 ರೂ. ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಆರ್‌ಬಿಐ ಅವಕಾಶ ಒದಗಿಸಿತ್ತು. ಆರ್‌ಬಿಐ ಮೇ 19, 2023 ರಂದು 2,000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಂಡಿತ್ತು.

ಸರ್ಕಾರವು ಅಕ್ಟೋಬರ್ 7, 2023 ರವರೆಗೆ ಬ್ಯಾಂಕುಗಳಲ್ಲಿ ವಿನಿಮಯ ಮತ್ತು ಠೇವಣಿ ಮಾಡಲು ಅವಕಾಶವನ್ನು ಒದಗಿಸಿದೆ. ಅಕ್ಟೋಬರ್ 9, 2023 ರಿಂದ, ಆರ್‌ಬಿಐ ವಿತರಣಾ ಕಚೇರಿಗಳಲ್ಲಿ 2000 ಸಾವಿರ ರೂ. ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಿತ್ತು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!