ಚುನಾಯಿತರಲ್ಲದವರು ಗುದ್ದಲಿಪೂಜೆ ಮಾಡುವ ಮೂಲಕ ಶಾಸಕರ ಹಕ್ಕನ್ನು ಮೊಟಕುಗೊಳಿಸುವ ಪ್ರಯತ್ನ, ಕಾಂಗ್ರೆಸ್ ಮುಖಂಡರ ನಡೆ ವಿರುದ್ಧ ಭಾಗೀರಥಿ ಮುರುಳ್ಯ ಆಕ್ರೋಶ

Picture of Savistara

Savistara

Bureau Report

ಸುಳ್ಯ: ಒಂದೇ ಕಾಮಗಾರಿಗೆ ಎರಡು ಬಾರಿ ಗುದ್ದಲಿಪೂಜೆ ವಿವಾದ ಸುಳ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ.

Advertisement

ಬಾಳುಗೋಡು ಪದಕ ಸೇತುವೆ, ನೆಲ್ಯಾಡಿ ಬೈಲು ಸೇತುವೆ ಸೇರಿದಂತೆ ಹಲವು ಕಾಮಗಾರಿಗಳಿಗೆ ತಾವು ಶಾಸಕರಾಗಿ ಲೋಕೋಪಯೋಗಿ ಸಚಿವರಿಗೆ ಶಿಫಾರಸು ಮಾಡಿ ಅನುದಾನ ತಂದಿದ್ದೇನೆ.

Advertisement

Advertisement

ಆದರೆ ಚುನಾಯಿತರಲ್ಲದ ಸ್ಥಳೀಯ ಕಾಂಗ್ರೆಸ್ ಮುಖಂಡರು ತಾವೇ ಅನುದಾನ ತಂದೆವೆಂದು ಹೇಳಿಕೊಂಡು ಅನಧಿಕೃತವಾಗಿ ಗುದ್ದಲಿಪೂಜೆ ಮಾಡುತ್ತಿದ್ದಾರೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Advertisement

“ಯಾರೋ ಮನವಿ ಕೊಟ್ಟಿದ್ದಾರೆ ಎಂಬ ಕಾರಣಕ್ಕೆ ಸರ್ಕಾರ ಹಣ ಕೊಡುವುದಿಲ್ಲ. ಶಾಸಕರ ಶಿಫಾರಸಿನ ಮೇಲೆಯೇ ಅನುದಾನ ಬಿಡುಗಡೆಯಾಗುತ್ತದೆ. ಕೃತಜ್ಞತೆ ಸಲ್ಲಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಎಲ್ಲವೂ ನಾನೇ ಮಾಡಿದ್ದು ಎಂದು ಹೇಳುವುದು ಸರಿಯಲ್ಲ” ಎಂದು ಅವರು ಹೇಳಿದ್ದಾರೆ.

Advertisement
[t4b-ticker]
error: Content is protected !!