ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಕ ದೀಪಂ ಹಚ್ಚಲು ಸುಪ್ರೀಂ ಕೋರ್ಟ್ ಅನುಮತಿ

Picture of Savistara

Savistara

Bureau Report

ಮದುರೈ:_ ತಮಿಳುನಾಡಿನ ಮದುರೈನ ತಿರುಪ್ಪರಂಕುಂದ್ರಂ ಬೆಟ್ಟದ ಮೇಲೆ ಕಾರ್ತಿಕ ದೀಪಂ ಹಚ್ಚುವ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಂತರ ಆದೇಶ ನೀಡಿದೆ.

Advertisement

ನವೆಂಬರ್ 24ರಂದು ಕಾರ್ತಿಕ ದೀಪಂ ದಿನದಂದು ಬೆಟ್ಟದ ಮೇಲಿರುವ ದೀಪಸ್ತಂಭ (ದೀಪತ್ತೂನ್) ದಲ್ಲಿ ದೀಪ ಹಚ್ಚಲು _ಒಂದು ಬಾರಿಗೆ ಮಾತ್ರ_ ಅನುಮತಿ ನೀಡಿದೆ.ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ವಿಪುಲ್ ಎಂ. ಪಾಂಚೋಲಿ ಅವರ ಪೀಠ ಈ ಆದೇಶ ನೀಡಿದೆ.

Advertisement

ಸುಪ್ರೀಂ ಕೋರ್ಟ್ ಹೇಳಿದ್ದೇನು?_

Advertisement

Advertisement

– ಇದು ಕೇವಲ ಒನ್-ಟೈಮ್ ವ್ಯವಸ್ಥೆ, ಇದು ಯಾವುದೇ ಸಾಂಪ್ರದಾಯಿಕ ಹಕ್ಕು ಎಂದು ಪರಿಗಣಿಸಬಾರದು

Advertisement

Advertisement

– ಮದ್ರಾಸ್ ಹೈಕೋರ್ಟ್ ತೀರ್ಪಿನ 1 ರಿಂದ 140ನೇ ಪ್ಯಾರಾಗಳಲ್ಲಿನ ಅಂಶಗಳಿಗೆ ತಡೆ

Advertisement

– ದೀಪ ಹಚ್ಚಲು ದೇವಸ್ಥಾನದ ಅಧಿಕೃತ ಪ್ರತಿನಿಧಿಗಳು + ಸರ್ಕಾರಿ ಅಧಿಕಾರಿಗಳು ಮಾತ್ರ ಹೋಗಬೇಕು, ಸಾರ್ವಜನಿಕರಿಗೆ ಅವಕಾಶವಿಲ್ಲ

– ಮೆರವಣಿಗೆ, ಜನ ಸೇರುವುದು, ಘೋಷಣೆ ಕೂಗುವುದು, ಪ್ರತಿಭಟನೆಗೆ ಸಂಪೂರ್ಣ ನಿಷೇಧ

– ASI ಸೂಚಿಸುವಂತೆ ಸ್ಮಾರಕ ರಕ್ಷಣೆಗೆ ಕ್ರಮ, ಅಗೆಯುವುದು, ಕಟ್ಟಡ ಕಟ್ಟುವುದು, ಬದಲಾವಣೆ ಮಾಡುವುದು ನಿಷೇಧ

– ದರ್ಗಾ ಮತ್ತು ಮಸೀದಿಯ ಕಾರ್ಯಗಳಿಗೆ ಯಾವುದೇ ಅಡ್ಡಿ ಮಾಡಬಾರದು- ಈ ಅನುಮತಿಯನ್ನು ಮುಂದಿನ ವರ್ಷಗಳಲ್ಲಿ ಹಕ್ಕಾಗಿ ಬಳಸುವಂತಿಲ್ಲ

– ಮುಂದಿನ ವಿಚಾರಣೆ 2027ರ ಜನವರಿ 2ನೇ ವಾರ_

ವಿವಾದ ಏನು?

ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಮತ್ತು ಹಜರತ್ ಸುಲ್ತಾನ್ ಸಿಕಂದರ್ ಬಾದುಷಾ ದರ್ಗಾ ಎರಡೂ ಇವೆ.

ದಶಕಗಳಿಂದ ದೀಪವನ್ನು ಕೆಳಭಾಗದ ದೀಪ ಮಂಟಪದಲ್ಲಿ ಹಚ್ಚಲಾಗುತ್ತಿತ್ತು. ದರ್ಗಾದಿಂದ ಸುಮಾರು 50 ಮೀಟರ್ ದೂರದಲ್ಲಿರುವ ದೀಪತ್ತೂನ್ ಕಲ್ಲು ಕಂಬದಲ್ಲೂ ದೀಪ ಹಚ್ಚಬೇಕು ಎಂದು ಭಕ್ತರು ಕೇಳಿದ್ದರು.

2025ರ ಡಿಸೆಂಬರ್ 1ರಂದು ಹೈಕೋರ್ಟ್ ಏಕಸದಸ್ಯ ಪೀಠ, 2026ರ ಜನವರಿ 6ರಂದು ವಿಭಾಗೀಯ ಪೀಠ ಅದನ್ನು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋಗಿತ್ತು.ಈಗ ಸುಪ್ರೀಂ ಕೋರ್ಟ್ ಒಂದು ಬಾರಿಗೆ ದೀಪ ಹಚ್ಚಲು ಅನುಮತಿ ಕೊಟ್ಟಿದ್ದು, ಭಕ್ತರಲ್ಲಿ ಸಂತಸ ಮೂಡಿಸಿದೆ.

[t4b-ticker]
error: Content is protected !!