ಮುಂಬೈ:_ ಕಾಂತಾರ ಮೂಲಕ ಡಿವೈನ್ ಸ್ಟಾರ್ ಎಂದೇ ಜನಪ್ರಿಯರಾಗಿರುವ ರಿಷಬ್ ಶೆಟ್ಟಿ ಅವರಿಗೆ ಮತ್ತೊಂದು ಮಹತ್ವದ ಮನ್ನಣೆ ಸಿಕ್ಕಿದೆ.

ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್ 2026 ರಲ್ಲಿ _‘ಕಾಂತಾರ: ಚಾಪ್ಟರ್ 1’_ ಚಿತ್ರಕ್ಕಾಗಿ _ವಿಮರ್ಶಕರ ಅತ್ಯುತ್ತಮ ನಟ (Critics Best Actor)_ ಪ್ರಶಸ್ತಿಯನ್ನು ರಿಷಬ್ ಶೆಟ್ಟಿ ಗೆದ್ದುಕೊಂಡಿದ್ದಾರೆ.


ಇದೇ ವೇಳೆ _‘ಕಾಂತಾರ: ಚಾಪ್ಟರ್ 1’ ವಿಮರ್ಶಕರ ಅತ್ಯುತ್ತಮ ಚಲನಚಿತ್ರ_ ಪ್ರಶಸ್ತಿಗೂ ಭಾಜನವಾಗಿದೆ. ಜೊತೆಗೆ ಅರವಿಂದ್ ಎಸ್. ಕಶ್ಯಪ್ ಅವರಿಗೆ _ಅತ್ಯುತ್ತಮ ಛಾಯಾಗ್ರಾಹಕ_ ಪ್ರಶಸ್ತಿ ಕೂಡ ಸಿಕ್ಕಿದೆ.


DPIFF ಸಂಸ್ಥೆ ತನ್ನ ಅಧಿಕೃತ X ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, “ಪರದೆ ಮೇಲೆ ಅವರ ಪ್ರಭಾವಶಾಲಿ ಉಪಸ್ಥಿತಿ, ಅಸಾಧಾರಣ ಸಮರ್ಪಣಾ ಭಾವ ಮತ್ತು ಸಾಂಸ್ಕೃತಿಕ ಕಥಾಹಂದರವನ್ನು ಆಧರಿಸಿದ ಶಕ್ತಿಯುತ ಅಭಿನಯಕ್ಕಾಗಿ” ಈ ಗೌರವ ನೀಡಲಾಗಿದೆ ಎಂದು ತಿಳಿಸಿದೆ._


ಈ ಬಾರಿಯ ಪ್ರಮುಖ ವಿಜೇತರು:_-
ಅತ್ಯುತ್ತಮ ಚಿತ್ರ: ಧುರಂಧರ್
– ಅತ್ಯುತ್ತಮ ನಟ: ರಣವೀರ್ ಸಿಂಗ್ – ಧುರಂಧರ್-
ಅತ್ಯುತ್ತಮ ನಟಿ: ಅನೀತ್ ಪಡ್ಡಾ – ಸೈಯಾರಾ
– ಅತ್ಯುತ್ತಮ ನಿರ್ದೇಶಕ: ಆದಿತ್ಯ ಧರ್ – ಧುರಂಧರ್
– ವಿಮರ್ಶಕರ ಅತ್ಯುತ್ತಮ ಚಿತ್ರ: ಕಾಂತಾರ: ಚಾಪ್ಟರ್ 1
– ವಿಮರ್ಶಕರ ಅತ್ಯುತ್ತಮ ನಟ: ರಿಷಬ್ ಶೆಟ್ಟಿ
– ವಿಮರ್ಶಕರ ಅತ್ಯುತ್ತಮ ನಟಿ: ಯಾಮಿ ಗೌತಮ್ ಧರ್
– ಹಕ್ನ.20ರಂದು ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಒಟ್ಟು 41 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು.














































