ಇದೇ ಆ ಪುಟ್ಟ ಮನೆ! ಅಧಿಕಾರದ ಉತ್ತುಂಗದಲ್ಲಿದ್ದ ಮಗ, ಸರಳತೆಯಲ್ಲೇ ಬದುಕಿದ ತಾಯಿ

Picture of Savistara

Savistara

Bureau Report

ಪಾಂಚೂರ್ (ಪೌರಿ ಗರ್ವಾಲ್), ನ. 22:ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಾಯಿ ಸಾವಿತ್ರಿ ದೇವಿ (91) ಕೊನೆಯುಸಿರೆಳೆದಿದ್ದು ಇದೇ ಪುಟ್ಟ ಮನೆಯಲ್ಲಿ.

Advertisement

ಗುಲಾಬಿ ಬಣ್ಣದ ಗೋಡೆ, ಸಣ್ಣ ಕಿಟಕಿ, ಮೇಲ್ಛಾವಣಿಗೆ ಹಾಕಿರುವ ಟಾರ್ಪಾಲ್, ನೆಲದ ಮೇಲೆ ಹಾಸಿದ ಚಾಪೆ. ಇಷ್ಟೇ ಆ ಮನೆಯ ವೈಭವ. ಆದರೆ ಅದರೊಳಗೆ ಬದುಕಿದ್ದು ಒಂದು ಶತಮಾನದ ತ್ಯಾಗದ ಕಥೆ.

Advertisement

Advertisement

ಇದು ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ಪಾಂಚೂರ್ ಗ್ರಾಮದಲ್ಲಿರುವ ಯೋಗಿ ಆದಿತ್ಯನಾಥ್ ಅವರ ಪೂರ್ವಿಕರ ಮನೆ. 1972ರ ಜೂನ್ 5ರಂದು ಅಜಯ್ ಸಿಂಗ್ ಬಿಷ್ಟ್ ಆಗಿ ಯೋಗಿ ಜನಿಸಿದ್ದು ಇದೇ ಮನೆಯಲ್ಲಿ.

Advertisement

Advertisement

ತಂದೆ ಆನಂದ್ ಸಿಂಗ್ ಬಿಷ್ಟ್ ಅರಣ್ಯ ಇಲಾಖೆಯಲ್ಲಿ ರೇಂಜರ್ ಆಗಿ ಸೇವೆ ಸಲ್ಲಿಸಿದ್ದರು. ತಾಯಿ ಸಾವಿತ್ರಿ ದೇವಿ ಗೃಹಿಣಿ. ಏಳು ಮಕ್ಕಳನ್ನು ಇದೇ ಸಣ್ಣ ಮನೆಯಲ್ಲಿ ಸಾಕಿ ಬೆಳೆಸಿದರು.1994ರಲ್ಲಿ ಮನೆ ತೊರೆದು ಸನ್ಯಾಸ ಸ್ವೀಕರಿಸಿದ ಅಜಯ್, ಮುಂದೆ ಯೋಗಿ ಆದಿತ್ಯನಾಥ್ ಆಗಿ ದೇಶದ ಅತಿದೊಡ್ಡ ರಾಜ್ಯದ ಮುಖ್ಯಮಂತ್ರಿಯಾದರು.

Advertisement

ಆದರೆ ತಾಯಿ ಮಾತ್ರ ಕೊನೆಯವರೆಗೂ ಈ ಪೂರ್ವಿಕರ ಮನೆಯನ್ನೇ ಬಿಡಲಿಲ್ಲ.ಮಗ ಅಧಿಕಾರದ ಉತ್ತುಂಗದಲ್ಲಿದ್ದರೂ, ತಾಯಿ ಯಾವುದೇ ಐಷಾರಾಮಿ ಇಲ್ಲದೆ ಇದೇ ಸರಳ ಮನೆಯಲ್ಲಿ ಬದುಕಿದರು. 2022ರ ಮೇ ತಿಂಗಳಲ್ಲಿ ಯೋಗಿ ಐದು ವರ್ಷಗಳ ನಂತರ ಈ ಮನೆಗೆ ಬಂದು ತಾಯಿಯನ್ನು ಭೇಟಿಯಾಗಿ ಒಂದು ರಾತ್ರಿ ಇದೇ ಮನೆಯಲ್ಲಿ ತಂಗಿದ್ದರು.

Advertisement

ಶುಕ್ರವಾರ ಬೆಳಗ್ಗೆ ಇದೇ ಮನೆಯಲ್ಲಿ ಸಾವಿತ್ರಿ ದೇವಿ ಕೊನೆಯುಸಿರೆಳೆದರು. ಶನಿವಾರ ಪಾಂಚೂರ್‌ನಲ್ಲಿ ಅಂತಿಮ ದರ್ಶನದ ಬಳಿಕ ಹರಿದ್ವಾರದ ಚಂಡಿ ಘಾಟ್‌ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು

[t4b-ticker]
error: Content is protected !!