ಫೈನಲ್ ಪಂದ್ಯಕ್ಕೂ ಮುನ್ನ RCBಗೆ ಬಿಗ್ ಶಾಕ್: ಈ ಸ್ಟಾರ್ ಬ್ಯಾಟರ್ ಆಡುವುದು ಡೌಟ್

Picture of Savistara

Savistara

Bureau Report

ಅಹಮದಾಬಾದ್‌: ಐಪಿಎಲ್ (IPL 2025)ನ ಮಹತ್ವದ ಫೈನಲ್ ಗೆ ಅಹಮದಾಬಾದ್ ಅಂಕಣ ಸಜ್ಜಾಗಿದೆ.ಬೆಂಗಳೂರು – ಪಂಜಾಬ್ (RCBvsPBKS) ನಡುವೆಬಹು ನಿರೀಕ್ಷಿತ ಫೈನಲ್ ನಡೆಯಲಿದ್ದು, ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳು ಕಾದಾಟ ನೋಡಲು ಕಾಯುತ್ತಿದ್ದಾರೆ.ಪಂಜಾಬ್ – ಬೆಂಗಳೂರು ಯಾರೇ ಗೆದ್ದರೂ ಮೊದಲಬಾರಿ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲಿದ್ದಾರೆ. ಆ ಮೂಲಕ ಅಂತಿಮ ಹಣಾಹಣಿ ರೋಚಕತೆಯಿಂದ ಸಾಗುವ ನಿರೀಕ್ಷೆ ಇದೆ.ಈ ನಡುವೆ ಆರ್‌ಸಿಬಿ ತಂಡದಲ್ಲಿ ಫೈನಲ್ ಪಂದ್ಯಕ್ಕೂ ಮುನ್ನ ಆಟಗಾರನೊಬ್ಬ ಅಲಭ್ಯತೆ ಬಗ್ಗೆ ವರದಿಯಾಗಿದೆ.ಆರ್‌ಸಿಬಿ ತಂಡದ ಭರವಸೆಯ ಆಟಗಾರ, ಆರಂಭಿಕ ಫಿಲ್ ಸಾಲ್ಟ್ (Phil Salt) ಫೈನಲ್ ಪಂದ್ಯದ ಟ್ರೈನಿಂಗ್ ಸೆಷನ್ಸ್‌ಗೆ ಗೈರಾಗಿದ್ದಾರೆ ಎಂದು ವರದಿಯಾಗಿದೆ.ಸದ್ಯ ಸಾಲ್ಟ್ ಅಹಮದಾಬಾದ್‌ನಲ್ಲಿ ಇಲ್ಲ ಎನ್ನಲಾಗಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಾರಣದಿಂದ ಅವರು ಇಂಗ್ಲೆಂಡ್‌ಗೆ ಹೋಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

ಆರ್‌ಸಿಬಿಯ ಕೋಚ್ ಆಂಡಿ ಫ್ಲವರ್ ಮತ್ತು ನಾಯಕ ರಜತ್ ಪಾಟಿದಾ‌ರ್ ಈ ಬಗ್ಗೆ ಯಾವ ಮಾಹಿತಿಯನ್ನು ಇದುವರೆಗೆ ನೀಡಿಲ್ಲ. ಅವರು ಫೈನಲ್ ಇದ್ದಾರೋ, ಇಲ್ಲೋ ಎನ್ನುವುದರ ಬಗ್ಗೆ ಆರ್‌ಸಿಬಿ ಇದುವರೆಗೆ ಖಚಿತ ಪಡಿಸಿಲ್ಲ.ಪಂಜಾಬ್ ವಿರುದ್ಧದ ಫೈನಲ್‌ಗೆ ಸಾಲ್ಟ್ ಲಭ್ಯವಾಗದೆ ಇದ್ರೆ, ಆರ್‌ಸಿಬಿಗೆ ಒಂದು ದೊಡ್ಡ ಹೊಡೆತ ಸಿಗುವುದು ಖಚಿತ.

ಈ ಋತುವಿನಲ್ಲಿ ಆರ್‌ಸಿಬಿ ಪರ ಸಾಲ್ಟ್ 12 ಪಂದ್ಯಗಳಲ್ಲಿ 175.90 ಸ್ಟೈಕ್ ರೇಟ್ ಮತ್ತು 35.18 ರ ಸರಾಸರಿಯಲ್ಲಿ 387 ರನ್ ಗಳಿಸಿದ್ದಾರೆ.ಒಂದು ವೇಳೆ ಸಾಲ್ಟ್ ಲಭ್ಯವಿಲ್ಲದಿದ್ದರೆ ವಿರಾಟ್ ಕೊಹ್ಲಿ ಜೊತೆಗೆ ಬದಲಿ ಆಟಗಾರನಾಗಿ ಸಹಿ ಹಾಕಿರುವ ಟಿಮ್ ಸೀಫರ್ಟ್ ಮತ್ತು ಮಾಯಾಂಕ್ ಅಗರ್ವಾಲ್ ಆರಂಭಿಕ ಸ್ಥಾನಕ್ಕೆ ಸೂಕ್ತ ಆಯ್ಕೆ ಆಗಿದ್ದಾರೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!