ಉತ್ತರಾಧಿಕಾರಿ: ಟ್ರಸ್ಟ್‌ಗೆ ಅಧಿಕಾರವೆಂದ ದಲೈ ™ ಲಾಮಾ; ತನ್ನ ಒಪ್ಪಿಗೆ ಬೇಕೆಂದ ಚೀನಾ

Picture of Savistara

Savistara

Bureau Report

ಧರ್ಮಶಾಲಾ: ಗಾಡೆನ್‌ ಫೋಡ್ರಾಂಗ್ ಟ್ರಸ್ಟ್‌ಗೆ ಮಾತ್ರ ನನ್ನ ಉತ್ತರಾಧಿಕಾರಿಯನ್ನು ಗುರುತಿಸುವ ಅಧಿಕಾರವಿದೆ ಎಂದು ಟಿಬೆಟಿಯನ್‌ ಧರ್ಮಗುರು ದಲೈ ಲಾಮಾ ತಿಳಿಸಿದ್ದಾರೆ. ಆ ಮೂಲಕ ಉತ್ತರಾಧಿಕಾರಿ ಆಯ್ಕೆಯಲ್ಲಿ ಚೀನಾದ ಹಸ್ತಕ್ಷೇಪವನ್ನು ಬಲವಾಗಿ ತಿರಸ್ಕರಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಾನು ಪುನರ್ಜನ್ಮ ಹೊಂದುವುದಾಗಿ ತಿಳಿಸಿದ್ದಾರೆ. ಅಲ್ಲದೇ ಉತ್ತರಾಧಿಕಾರಿಯ ಆಯ್ಕೆಯನ್ನು ಟಿಬೆಟಿಯನ್ ಸಂಪ್ರದಾಯದಂತೆ ಸಂಸ್ಥೆಯು ನಡೆಸಲಿದೆ ಎಂದು ತಿಳಿಸಿದ್ದಾರೆ.ಜುಲೈ 6ರಂದು 90ನೇ ವಸಂತಕ್ಕೆ ಕಾಲಿಡುತ್ತಿರುವ ದಲೈ ಲಾಮಾ ಅವರು, ಉತ್ತರಾಧಿಕಾರಿ ಆಯ್ಕೆ ವಿಚಾರದಲ್ಲಿ ಲಕ್ಷಾಂತರ ಅನುಯಾಯಿಗಳಲ್ಲಿ ಇದ್ದ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ.ಏತನ್ಮಧ್ಯೆ, ‘ಮುಂದಿನ ದಲೈ ಲಾಮಾ ಪುನರ್ಜನ್ಮ ಪ್ರಕ್ರಿಯೆಯನ್ನು ನಮ್ಮ ಸರ್ಕಾರ ಅನುಮೋದಿಸಬೇಕು ಮತ್ತು ಈ ಪ್ರಕ್ರಿಯೆಯು ಚೀನಾದೊಳಗೆ ನಡೆಯಬೇಕು’ ಎಂದು ಚೀನಾ ಬುಧವಾರ ಹೇಳಿದೆ.

15ನೇ ದಲೈ ಲಾಮಾ ಆಯ್ಕೆ ಮತ್ತು ಪ್ರಕ್ರಿಯೆಗಳು ರಾಜಕೀಯ ಪ್ರಾಮುಖ್ಯತೆಯನ್ನೂ ಪಡೆದಿದ್ದು, ಚೀನಾ, ಅಮೆರಿಕ ಮತ್ತು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿವೆ.ಈ ಹಿಂದೆ ದಲೈ ಲಾಮಾ ಅವರು ತಮ್ಮ ಉತ್ತರಾಧಿಕಾರಿ ಚೀನಾದ ಹೊರಗೆ ಜನಿಸುತ್ತಾರೆ ಎಂದು ಹೇಳಿದ್ದರು. ಅಲ್ಲದೇ ಚೀನಾವು ಆಯ್ಕೆ ಮಾಡುವ ಉತ್ತರಾಧಿಕಾರಿಯನ್ನು ತಿರಸ್ಕರಿಸುವಂತೆಯೂ ತಮ್ಮ ಅನುಯಾಯಿಗಳಿಗೆ ಕರೆ ನೀಡಿದ್ದರು. ತಮ್ಮ ನಂತರ ಉತ್ತರಾಧಿಕಾರಿ ಇಲ್ಲದಿರಬಹುದು ಎಂದೂ ಹೇಳಿದ್ದರು.ಚೀನಾದ ಆಳ್ವಿಕೆಯ ವಿರುದ್ಧ ದಂಗೆ ಎದ್ದು 1959ರಲ್ಲಿ ಟಿಬೆಟ್‌ನಿಂದ ಭಾರತಕ್ಕೆ ಪಲಾಯನ ಮಾಡಿದ್ದ ದಲೈ ಲಾಮಾ ಅವರನ್ನು ಚೀನಾ ‘ಪ್ರತ್ಯೇಕತಾವಾದಿ’ ಎಂದು ಕರೆದಿದೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!