ಬೈಕ್​ ಟ್ಯಾಕ್ಸಿ ಪ್ರಯಾಣಕ್ಕೆ ಕೇಂದ್ರದಿಂದ ಹಸಿರು ನಿಶಾನೆ; ಮಾರ್ಗಸೂಚಿ ಪ್ರಕಟ

Picture of Savistara

Savistara

Bureau Report

ಕೇಂದ್ರದ ಮಾರ್ಗಸೂಚಿಯನ್ನು ಉಬರ್​ ಮತ್ತು ರಾಪಿಡೊದಂತಹ ಬೈಕ್​ ಟ್ಯಾಕ್ಸಿ ಕಂಪನಿಗಳು ಸ್ವಾಗತಿಸಿವೆ.

ನವದೆಹಲಿ: ಮೋಟಾರು ವಾಹನ ಅಗ್ರಿಗೇಟರ್​ ಮಾರ್ಗಸೂಚಿ-2025ರ ಅನುಸಾರ ಪ್ರಯಾಣಿಕರ ಪ್ರಯಾಣಕ್ಕೆ ಸಾರಿಗೇತರ (ಖಾಸಗಿ) ಮೋಟಾರ್​ಸೈಕಲ್​ ಬಳಕೆಗೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅನುಮತಿ ನೀಡಿದೆ. ಈ ಮೂಲಕ ಬೈಕ್​ ಟ್ಯಾಕ್ಸಿಯಂತಹ ವಾಹನಗಳ ಕುರಿತು ಕೇಂದ್ರ ಸರ್ಕಾರ ಸ್ಪಷ್ಟ ನಿಲುವು ತಳೆದಿದೆ.ಮೋಟಾರ್​ ವಾಹನ ಅಗ್ರಿಗೇಟರ್​ ಮಾರ್ಗಸೂಚಿ-2025ರ ಹೊಸ ಮಾರ್ಗಸೂಚಿಯು ಬಳಕೆದಾರರ ಸುರಕ್ಷತೆ, ಭದ್ರತೆ ಹಾಗೂ ಚಾಲಕನ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಒಂದು ನಿಯಂತ್ರಣ ವ್ಯವಸ್ಥೆ ಒದಗಿಸಲು ಪ್ರಯತ್ನಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.ರಾಜ್ಯ ಸರ್ಕಾರ ಸಾರಿಗೇತರ ಮೋಟರ್​ಸೈಕಲ್​ಗಳನ್ನು ಪ್ರಯಾಣಿಕರ ಪ್ರಯಾಣದ ಹಂಚಿಕೆಗೆ ಅವಕಾಶ ನೀಡಬಹುದು. ಇದು ಸಂಚಾರ ದಟ್ಟಣೆ ಮತ್ತು ಮಾಲಿನ್ಯ ಕಡಿಮೆ ಮಾಡಲು ನೆರವಾಗುತ್ತದೆ. ಹಾಗೆಯೇ ಪ್ರಯಾಣಿಕರಿಗೆ ದುಬಾರಿಯಲ್ಲದ ಪ್ರಯಾಣಕ್ಕೆ ಅವಕಾಶ ಮತ್ತು ಹೈಪರ್​ಲೋಕಲ್​ ಡೆಲಿವರಿ ಹಾಗೂ ಜೀವನೋಪಾಯಕ್ಕೂ ದಾರಿಯಾಗುತ್ತದೆ ಎಂದು ಹೇಳಿದೆ.

ಮಾರ್ಗಸೂಚಿ ಪ್ರಕಾರ, ರಾಜ್ಯ ಸರ್ಕಾರಗಳು ಕಾಯ್ದೆಯ ಸೆಕ್ಷನ್​ 67ರ ಸಬ್​ ಸೆಕ್ಷನ್​ (3) ಅಡಿಯಲ್ಲಿ ಪ್ರಯಾಣಿಕರ ಪ್ರಯಾಣಕ್ಕೆ ಬೈಕ್​ ಸಾರಿಗೆಗೆ ಅವಕಾಶ ನೀಡಲಿದೆ. ಸರ್ಕಾರ ದೈನಂದಿನ, ವಾರ, ಹದಿನೈದು ದಿನಗಳ ಆಧಾರದ ಮೇಲೆ ಶುಲ್ಕ ವಿಧಿಸಬಹುದು.

ಕೇಂದ್ರದ ಮಾರ್ಗಸೂಚಿಯನ್ನು ಉಬರ್​ ಮತ್ತು ರಾಪಿಡೊದಂತಹ ಬೈಕ್​ ಟ್ಯಾಕ್ಸಿ ಒದಗಿಸುವ ಪ್ರಮುಖ ಕಂಪನಿಗಳು ಸ್ವಾಗತಿಸಿವೆ. ಅಗ್ಗದ ದರದ ಪ್ರಯಾಣದ ಅವಕಾಶ ನೀಡುವ ಜೊತೆಗೆ ಉದ್ಯೋಗಾವಕಾಶ ನೀಡುತ್ತದೆ ಎಂದು ಹೇಳಿವೆ.ಮಾರ್ಗಸೂಚಿಗೆ ಪ್ರತಿಕ್ರಿಯಿಸಿರುವ ಉಬರ್​, ರಾಜ್ಯಗಳು ಸಕಾಲಿಕವಾಗಿ ಏಕರೂಪದ ನೀತಿಗಳನ್ನು ಅನುಷ್ಠಾನಗೊಳಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದೆ.ಕರ್ನಾಟಕದಲ್ಲಿ ಇತ್ತೀಚೆಗೆ ಬೈಕ್​ ಟಾಕ್ಸಿ ಸೇವೆಗಳ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದ್ದು, ಬಳಿಕ ಸರ್ಕಾರ ನಿರ್ಬಂಧ ವಿಧಿಸಿತ್ತು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!