ಸುಳ್ಯದಲ್ಲಿ ಸಂಜೆ ಸುರಿದ ಭಾರಿ ಮಳೆ | ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆ ತುಂಬಾ ಹರಿದ ನೀರು

Picture of Savistara

Savistara

Bureau Report

ಸುಳ್ಯ: ಸುಳ್ಯ ನಗರದಲ್ಲಿ ಇಂದು ( ಜು.16) ರ ಸಂಜೆ ಸುಮಾರಿಗೆ ಸುರಿದ ಬಾರಿ ಮಳೆಗೆ ಸಾರ್ವಜನಿಕರು ಪರದಾಡುವಂತಾಗಿದೆ. ಸುಳ್ಯ ನಗರದ ಒಳ ಚರಂಡಿ ವ್ಯವಸ್ಥೆ ಸರಿಯಿಲ್ಲದಿರುವುದರಿಂದ ರಸ್ತೆ ಪೂರ್ತಿ ಮಳೆ ನೀರು ಹರಿದು ಶ್ರೀರಾಮ ಪೇಟೆ, ಎ.ಪಿ.ಎಂ.ಸಿ,ಜ್ಯೂನಿಯರ್ ಕಾಲೇಜ್ ಬಳಿ ಪಾದಚಾರಿಗಳು ಮತ್ತು ವಾಹನ ಸವಾರರು ತೊಂದರೆ ಅನುಭವಿಸಿದ್ದಾರೆ. ಮಳೆಗಾಲ ಸುರುವಾದ ನಂತರವೂ ಅನೇಕ ಒಳ ಚರಂಡಿ ಸ್ಲಾಬ್ ಗೆ ಸರಾಗವಾಗಿ ನೀರು ಹರಿದುಹೋಗುವ ವ್ಯವಸ್ಥೆಯಿಲ್ಲದಿರುವುದು ಇದಕ್ಕೆಲ್ಲ ಕಾರಣವಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.

[t4b-ticker]
error: Content is protected !!