900 ಸಿಕ್ಸರ್​ಗಳ ಸ್ಫೋಟಕ ಹಿಟ್ಟರ್​​ ​ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ!

Picture of Savistara

Savistara

Bureau Report

ವೆಸ್ಟ್​ ಇಂಡೀಸ್​ ತಂಡ ಸ್ಫೋಟಕ ಹಿಟ್ಟರ್​ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಪ್ರಸಕ್ತ 2025ಕ್ರಿಕೆಟ್​ ಪ್ರಿಯರಿಗೆ ಅತ್ಯಂತ ನಿರಾಶದಾಯಕ ವರ್ಷವಾಗಿದೆ. ಕಾರಣ ಒಬ್ಬರ ಹಿಂದೆ​ ಒಬ್ಬರಂತೆ ಸ್ಟಾರ್​ ಕ್ರಿಕೆಟರ್​ಗಳು ನಿವೃತ್ತಿ ಘೋಷಣೆ ಮಾಡುತ್ತಿದ್ದಾರೆ. ಈ ವರ್ಷ ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ಗಳಾದ ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಸೇರಿದಂತೆ ಒಟ್ಟು 19 ಆಟಗಾರರು ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಇದೀಗ ಮತ್ತೊಬ್ಬ ಸ್ಟಾರ್​ ಪ್ಲೇಯರ್​ ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.ಹೌದು, ವೆಸ್ಟ್​ ಇಂಡೀಸ್​ನ ಸ್ಟಾರ್​ ಆಲ್​ರೌಂಡರ್​ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ​ತಮ್ಮ ಸ್ಫೋಟಕ ಬ್ಯಾಟಿಂಗ್​ ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ರಸೆಲ್​ ನಿವೃತ್ತಿ ಕುರಿತು ವೆಸ್ಟ್​ ಇಂಡೀಸ್​ ಕ್ರಿಕೆಟ್​ ಬೋರ್ಡ್ ಎಕ್ಸ್​ನಲ್ಲಿ ಪೋಸ್ಟ್​ ಅನ್ನು ಶೇರ್​ ಮಾಡಿದ್ದು ರಸೆಲ್​ ಅವರಿಗೆ ಧನ್ಯವಾದ ಅರ್ಪಿಸಿದೆ. ಕಳೆದ 15 ವರ್ಷಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಿರುವ ಪವರ್​ ಹಿಟ್ಟರ್​ ಎರಡು ಬಾರಿ ಟಿ20 ವಿಶ್ವಕಪ್ ಚಾಂಪಿಯನ್ ತಂಡದ ಭಾಗವಾಗವಾಗಿದ್ದರು. ಇಷ್ಟು ವರ್ಷಗಳ ಕಾಲ ತಂಡದ ಭಾಗವಾಗಿರುವ ನಿಮಗೆ ಧನ್ಯವಾದಗಳು ಎಂದು ತಿಳಿಸಿದೆ.

ಇತ್ತೀಚೆಗೆ ಇವರ ಸಹ ಆಟಗಾರ 29 ವರ್ಷದ ನಿಕೋಲಸ್​ ಪೂರನ್​ ಕೂಡ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿ ಅಚ್ಚರಿ ಮೂಡಿಸಿದ್ದರು. ಇದೀಗ ರಸೆಲ್​ ಈ ನಿರ್ಧಾರ ತೆಗೆದುಕೊಂಡಿದ್ದು ಫ್ಯಾನ್ಸ್​ಗಳಿಗೆ ಸಿಡಿಲು ಬಡಿದಂತಾಗಿದೆ. ಆಸ್ಟ್ರೇಲಿಯಾ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಆಡುವ ಮೂಲಕ ರಸೆಲ್​ ಅಂತರಾಷ್ಟ್ರೀಯ ಕ್ರಿಕೆಟ್​ ಜರ್ನಿಯನ್ನು ಮುಕ್ತಾಯಗೊಳಿಸಲಿದ್ದಾರೆ.

ರಸೆಲ್​ ವೃತ್ತಿ ಜೀವನ: ತಮ್ಮ ಕ್ರಿಕೆಟ್​ ವೃತ್ತಿ ಜೀವನದಲ್ಲಿ ಈವರೆಗೂ 702ಕ್ಕೂ ಹೆಚ್ಚಿನ ಪಂದ್ಯಗಳನ್ನು ಆಡಿದ್ದು ಇದರಲ್ಲಿ 141 ಅಂತರಾಷ್ಟ್ರೀಯ ಪಂದ್ಯಗಳು ಸೇರಿವೆ. 1 ಟೆಸ್ಟ್​, 56 ಏಕದಿನ ಮತ್ತು 84 ಟಿ20 ಪಂದ್ಯಗಳಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ. ಒಟ್ಟಾರೆ ತಮ್ಮ ಕ್ರಿಕೆಟ್​ ಕೆರೆಯರ್​ನಲ್ಲಿ 11,430 ರನ್​ಗಳನ್ನು ಗಳಿಸಿದ್ದು, 617 ವಿಕೆಟ್​ಗಳನ್ನು ಪಡೆದುಕೊಂಡಿದ್ದಾರೆ. ಇದರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 2114 ರನ್​ ಮತ್ತು 132 ವಿಕೆಟ್​ಗಳು ಸೇರಿವೆ.

ರಸೆಲ್​ ಕೊನೆಯ ಪಂದ್ಯ!

ಜು. 21ರಿಂದ ಆಸ್ಟ್ರೇಲಿಯಾ ಮತ್ತು ವೆಸ್ಟ್​ ಇಂಡೀಸ್​ ತಂಡಗಳು ಐದು ಪಂದ್ಯಗಳ ಟಿ20 ಸರಣಿಯನ್ನು ಆಡಿಲಿವೆ. ವರದಿಗಳ ಪ್ರಕಾರ ಆರಂಭಿಕ ಎರಡು ಪಂದ್ಯಗಳನ್ನು ರಸೆಲ್​ ಆಡಲಿದ್ದು ಬಳಿಕ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

[t4b-ticker]
error: Content is protected !!