ಉದ್ಯಮಿಗಳಿಗೆ ವಂಚನೆ ಪ್ರಕರಣ: ಮಂಗಳೂರಿನ ರೋಶನ್ ಮನೆ ಸುತ್ತ ಸಿಸಿ ಕೆಮರಾ ಕೋಟೆ

Picture of Savistara

Savistara

Bureau Report

ಇದರ ದೃಶ್ಯಗಳೇ ಅಪಾಯ ಎಚ್ಚರಿಸುವ ಕರೆಘಂಟೆ… ಟಿವಿ ಪರದೆ ಮೇಲೆ ಪ್ರತೀ ದೃಶ್ಯವೂ ಬಿತ್ತರ

ಮಂಗಳೂರು: ಎಷ್ಟು ವಿಚಿತ್ರ ಈ ವಂಚಕ ರೋಶನ್ಗೊತ್ತೇ? ವಿಧಾನಸೌಧದಿಂದ ಹಿಡಿದು ಐಷಾರಾಮಿ ಬಂಗಲೆವರೆಗೂ ಕಾಯಲು ಭದ್ರತಾ ಸಿಬಂದಿ ಇರುತ್ತಾರೆ. ಪೂರಕವಾಗಿ ಸಿಸಿ ಕೆಮರಾಗಳಿರುತ್ತವೆ. ಆದರೆ ಈ ಮನೆಯಲ್ಲಿ ಹಾಗಲ್ಲ. ಮನುಷ್ಯರಿಗಿಂತ ಹೆಚ್ಚು ಆತ ನಂಬಿದ್ದು ತಂತ್ರಜ್ಞಾನವನ್ನು. ಮನೆಯನ್ನು ಭದ್ರತಾ ಸಿಬಂದಿಯ ಬದಲು ಕೆಮರಾಗಳಷ್ಟೇ ಕಾಯುತ್ತಿದ್ದವು!ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುವ ‘ಬಿಗ್ ಬಾಸ್’ ರಿಯಾಲಿಟಿ ಶೋ ಚಿತ್ರೀಕರಣವು ಮನೆಯಲ್ಲಿ ಅಳವಡಿಸಿರುವ ಸಿಸಿ ಕೆಮರಾಗಳ ಮೂಲಕ ನಡೆಯುತ್ತದೆ. ಮೂಲೆ ಮೂಲೆಯಲ್ಲೂ ಕೆಮರಾ ಇಟ್ಟು ಸ್ಪರ್ಧಿಗಳ ಚಲನವಲನ ಚಿತ್ರೀಕರಿಸುತ್ತಾರೆ. ಆದರೆ ಅದನ್ನೂ ಮೀರಿಸುವಂತಿದೆ ಮಂಗಳೂರಿನ ವಂಚಕ ರೋಶನ್ ಸಲ್ದಾನ್ಹಾ ತನ್ನ ಮನೆಯ ಸುತ್ತ ಕಟ್ಟಿಕೊಂಡಿದ್ದ ಕೆಮರಾ ಕಣ್ಣುಗಳ ಕೋಟೆ!

ದೇಶದ ಹಲವೆಡೆ ಶ್ರೀಮಂತ ಉದ್ಯಮಿಗಳಿಗೆ ನೂರಾರು ಕೋಟಿ ರೂ. ವಂಚಿಸಿರುವ ಪ್ರಕರಣದಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿರುವ ವಂಚಕ ರೋಶನ್ ಮನೆಯ (ಒಳಗೂ-ಹೊರಗೂ) ಸಿಸಿ ಕೆ ಮರಾಗಳ ಸಹಾಯದಿಂದ ಮನೆಯ ಆವರಣದ ಇಂಚಿಂಚಿನ ದೃಶ್ಯಗಳನ್ನು ಲಿವಿಂಗ್ ರೂಂನಲ್ಲಿರುವ ಬೃಹತ್ ಟಿವಿ ಪರದೆಯ ಮೂಲಕ ನೋಡುತ್ತಿದ್ದ.ವಂಚನೆಗೆ ಒಳಗಾದವರು, ಪೊಲೀಸರು ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಬಂದಾಗ ಅಡಗುತಾಣ ಸೇರಿಕೊಳ್ಳುತ್ತಿದ್ದ. ಕೆ ಮರಾಗಳು ತೋರಿಸುವ ದೃಶ್ಯಗಳೇ ಅವನಿಗೆ ಅಪಾಯ ಎಚ್ಚರಿಸುವ ಕರೆಘಂಟೆಯಾಗಿ ತ್ತು. ಏನಾದರೂ ಅಸ್ವಾಭಾವಿಕ, ಅಪಾಯ ಎನಿಸಿದರೆ ತತ್‌ಕ್ಷಣ ಅಡಗುತಾಣವನ್ನು ಹೊಕ್ಕುಬಿಡುತ್ತಿದ್ದ. ಅಡಗು ಕೋಣೆ ಹೊರತುಪಡಿಸಿ ಮಿಕ್ಕೆಲ್ಲ ಜಾಗಗಳಲ್ಲಿ ಕೆಮರಾ ಅವನನ್ನು ಕಾಯುತ್ತಿತ್ತು!

ಸಾಮಾನ್ಯವಾಗಿ ವಿಲಾಸಿ ಬಂಗಲೆಗಳಲ್ಲಿ ಹೆಚ್ಚೆಂದರೆ 10 ಕೆಮರಾಗಳಿರುತ್ತವೆ, ಇನ್ನೂ ಹೆಚ್ಚೆಂದರೆ 20 ಎಂದುಕೊಳ್ಳೋಣ. ಆದರೆ ಇವನ ಮನೆಯಲ್ಲಿ ಇವನನ್ನು ಕಾಯುತ್ತಿದ್ದುದು 50ಕ್ಕೂ ಹೆಚ್ಚು ಕೆ ಮರಾಗಳು. ಮನೆಗೆ ಕಾವಲುಗಾರರಿದ್ದರೆ ಒಂದಲ್ಲ ಒಂದು ದಿನ ಯಾರೋ ಒಬ್ಬರು ತನ್ನ ವಂಚನೆಯ ಬದುಕನ್ನು ಬಯಲು ಮಾಡಬಹುದೆಂಬ ಹೆದರಿಕೆ ಇತ್ತೆಂದೆನಿಸುತ್ತದೆ. ಅದಕ್ಕೇ ಕೆ ಮರಾಗಳನ್ನು ಅಳವಡಿಸಿಕೊಂಡಿದ್ದ. ತನ್ನಲ್ಲಿರುವ ರಿಮೋಟ್ ಮೂಲಕವೇ ಗೇಟನ್ನೂ ಕೆಮರಾ ನೋಡಿಯೇ ತೆರೆಯುತ್ತಿದ್ದ ಎನ್ನುತ್ತಾರೆ ಪೊಲೀಸರು.

ಹೈ ರೆಸಲ್ಯೂಷನ್-ನೈಟ್ ವಿಷನ್

ಆತ ಅಳವಡಿಸಿರುವ ಕೆಮರಾಗಳು ಅತ್ಯಾಧುನಿಕವಾಗಿದ್ದು, 180 ಡಿಗ್ರಿಯಲ್ಲಿ ಹೈ ರೆಸಲ್ಯೂಷನ್‌ನಲ್ಲಿ ದೃಶ್ಯಗಳನ್ನು ಸೆರೆಹಿಡಿಯುವ ವಿವಿಧ ನಮೂನೆಯ ಕೆ ಮರಾಗಳಿದ್ದವು. ಇನ್‌ಫ್ರಾರೆಡ್ ಅಥವಾ ಕಲರ್ ಯುವಿ ತಂತ್ರಜ್ಞಾನದ ಮೂಲಕ ರಾತ್ರಿಯ ಕಡು ಕತ್ತಲೆಯಲ್ಲೂ ದೃಶ್ಯಗಳನ್ನು ಚಿತ್ರೀಕರಿಸುವ ನೈಟ್ ವಿಷನ್ ಕೆ ಮರಾಗಳೂ ಇದ್ದವು. ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಈ ಕೆಮರಾಗಳು ನಿಷ್ಕ್ರಿಯವಾಗಬಾರದು ಎಂದು ಬ್ಯಾಟರಿಗಳು, ಸೋಲಾರ್ ಪ್ಯಾನಲ್, ಜನರೇಟರ್‌ಗಳನ್ನು ಪರ್ಯಾಯವಾಗಿ ಸಂಯೋಜಿಸಿಟ್ಟಿದ್ದ.

ದೃಶ್ಯಾವಳಿ ಪೊಲೀಸ್‌ ವಶಕ್ಕೆ

ಸದ್ಯ ಆತನ ಸಿಸಿ ಕೆ ಮರಾಗಳ ಸುಮಾರು 3 ತಿಂಗಳ ದೃಶ್ಯಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಗ ಮೂರು ತಿಂಗಳ ಅವಧಿಯಲ್ಲಿ ನಡೆದಿರುವ ಚಟುವಟಿಕೆಗಳು, ಬಂದು ಹೋಗಿರುವ ವ್ಯಕ್ತಿಗಳು ಇತ್ಯಾದಿ ಎಲ್ಲ ಮಾಹಿತಿಯನ್ನೂ ಸಮಗ್ರವಾಗಿ ಪೊಲೀಸರು ಕಲೆ ಹಾಕತೊಡಗಿದ್ದಾರೆ.

ನೆರೆ ಹೊರೆಯವರೂ ಅಷ್ಟಕಷ್ಟೆ

ರಸ್ತೆಯಲ್ಲಿ ನಿಂತು ಸ್ಥಳೀಯರು ಯಾರಾದರೂ ತನ್ನ ಮನೆಯವರೊಂದಿಗೆ ಮಾತನಾಡಿದರೆ ಕೆಮರಾದ ಮೂಲಕ ಗಮನಿಸುತ್ತಿದ್ದ. ಬಳಿಕ ಮನೆಯೊಳಗಿನಿಂದಲೇ ಮಾತನಾಡಿದವರಿಗೆ ಮತ್ತು ಮನೆಯ ಸದಸ್ಯರಿಗೆ ಬಯ್ಯುತ್ತಿದ್ದ. ಒಂದು ಬಾರಿ ಆತನ ತಾಯಿ ಸ್ಥಳೀಯರೊಬ್ಬರ ಜತೆ ಮಾತನಾಡಿದ್ದಕ್ಕೆ ಇಬ್ಬರಿಗೂ ಬೈದಿದ್ದ. ಅಕ್ಕಪಕ್ಕದ ಯಾರೊಬ್ಬರನ್ನೂ ತನ್ನ ಮನೆಯೊಳಗೆ ಸೇರಿಸಿಕೊಳ್ಳುತ್ತಿರಲಿಲ್ಲ ಎನ್ನುತ್ತಾರೆ ಸ್ಥಳೀಯರು.

ಕೆಮರಾವೇ ಭದ್ರತಾ ಸಿಬಂದಿ!

ರೋಶನ್‌ನ ಐಷಾರಾಮಿ ಮನೆಗೆ ಒನೇ ಒಬ್ಬ ಭದ್ರತಾ ಸಿಬಂದಿ ಇರಲಿಲ್ಲಮನೆಯ ಒಳಗೂ-ಹೊರಗೂ ಸಿಸಿ ಕೆಮರಾಗಳದ್ದೇ ಕಾರುಬಾರುಲಿವಿಂಗ್ ರೂಂನಲ್ಲಿನ ಟಿವಿ ಸ್ಟೀನ್ ಮೂಲಕ ಆವರಣದ ಇಂಚಿಂಚಿನ ದೃಶ್ಯಗಳ ವೀಕ್ಷಣೆವಂಚನೆಗೆ ಒಳಗಾದವರು, ಪೊಲೀಸರು ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಬಂದಾಗ ಅಡಗು ತಾಣ ಸೇರಿಕೊಳ್ಳುತ್ತಿದ್ದ ವಂಚಕ 3 ತಿಂಗಳ ಸಿಸಿ ಕೆಮರಾ ದೃಶ್ಯಗಳನ್ನು ವಶಕ್ಕೆ ಪಡೆದ ಪೊಲೀಸರು

ರಸ್ತೆಯಿಂದಲೇ ಕೆಮರಾ ಕಣ್ಣಾವಲು

ಕೆಮರಾಗಳ ಕಣ್ಣಾವಲು ರಸ್ತೆಯಿಂದಲೇ ಆರಂಭ. ಮುಖ್ಯ ರಸ್ತೆಯ ಚಿತ್ರಣ ಕಾಣು ವಂತೆ ಎರಡು ಕೆಮರಾ, ಗೇಟ್ ಬಳಿ ಎರಡು, ಅಂಗಳದ ಸುತ್ತ ನಾಲ್ಕು, ಮೇಲ್ಮ ಹಡಿಯಲ್ಲಿರುವ ಲಿವಿಂಗ್ ರೂಮ್‌ನಲ್ಲಿ ನಾಲ್ಕು, ಬೆಡ್‌ರೂಂ, ಕಚೇರಿ ಸೆಟ್‌ಅಪ್, ಹೊರಾಂಗಣ-ಹೀಗೆ ಎಲ್ಲ ಕಡೆಗಳಲ್ಲೂ ಕೆಮರಾ ಗಳಿದ್ದವು. ಲಿವಿಂಗ್ ರೂಂನಲ್ಲಿರುವ ಬೃಹತ್ ಟಿವಿಯ ಸ್ಟ್ರೀನ್ ಮೇಲೆ ಪ್ರತೀ ದೃಶ್ಯಗಳು ಬಿತ್ತರಗೊಳ್ಳುತ್ತಿದ್ದವು.

[t4b-ticker]
error: Content is protected !!