“ಗುಂಡ್ಯದಲ್ಲಿ ಆನೆ ಶಿಬಿರ ಸ್ಥಾಪನೆಗೆ ಸಿದ್ಧತೆ, ಕಾಡು ಪ್ರಾಣಿಗಳಿಂದ ಕೃಷಿ ಹಾಗೂ ಜೀವಕ್ಕೆ ಹಾನಿ, ಜಾನುವಾರುಗಳನ್ನು ಅರಣ್ಯ ಪ್ರದೇಶದಲ್ಲಿ ಮೇಯಿಸಲು ನಿಷೇಧದ ಬಗ್ಗೆ, ಜಾಗದ ಫ್ಲೋಟಿಂಗ್ ಸಮಸ್ಯೆ, ರೈತರ ಉಳಿವಿಗಾಗಿ ಮತ್ತು ಗ್ರಾಮೀಣ ಪ್ರದೇಶದ ಜನರ ಸಂರಕ್ಷಣೆಗಾಗಿ ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ರೈತರನ್ನು ಜಾಗೃತಗೊಳಿಸಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ” ಎಂದು ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಕಿಶೋರ್ ಶಿರಾಡಿ ಹೇಳಿದ್ದಾರೆ.“ಅರಣ್ಯ ಇಲಾಖೆಯ ಕಾನೂನಿಂದ ಜನರಿಗೆ ಆಗುವ ಮಾನಸಿಕ ಹಿಂಸೆಯಿಂದ ರೈತರನ್ನು ಪಾರು ಮಾಡಲು ಸಮಾಲೋಚನಾ ಸಭೆಯನ್ನು ಜು.30 ಬುಧವಾರ ಬೆಳಿಗ್ಗೆ 11 ಗಂಟೆಗೆ ಕುಕ್ಕೆ ಸುಬ್ರಹ್ಮಣ್ಯದ ಐನೆಕಿದು ಸೊಸೈಟಿ ಬಳಿ ನಡೆಸುವುದೆಂದು ತೀರ್ಮಾನಿಸಲಾಗಿದೆ. ಈ ಸಭೆಗೆ ವಿವಿಧ ಧಾರ್ಮಿಕ ಪ್ರಮುಖರು, ಎಲ್ಲಾ ರಾಜಕೀಯ ಪಕ್ಷದ ಪ್ರಮುಖರು, ಜನಪ್ರತಿನಿಧಿಗಳು, ಊರಿನ ಗಣ್ಯರು ಸಭೆಗೆ ಬಂದು ರೈತರ ಉಳಿವಿಗಾಗಿ ಮತ್ತು ಗ್ರಾಮೀಣ ಪ್ರದೇಶದ ಜನರ ಸಂರಕ್ಷಣೆಗಾಗಿ ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ರೈತರನ್ನು ಜಾಗೃತಗೊಳಿಸಿ ಉಗ್ರವಾಗಿ ಹೋರಾಟ ಮಾಡಲು ತಾವುಗಳು ಸಲಹೆ ಸೂಚನೆ ನೀಡಬೇಕಾಗಿ” ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕರಾದ ಕಿಶೋರ್ ಶಿರಾಡಿ ವಿನಂತಿಸಿದ್ದಾರೆ.
“ಗುಂಡ್ಯದಲ್ಲಿ ಆನೆ ಶಿಬಿರ ಸ್ಥಾಪನೆಗೆ ಸಕಲ ಸಿದ್ಧತೆ , ಅರಣ್ಯ ಇಲಾಖೆಯ ಈ ಕಾನೂನಿಂದ ಜನರಿಗೆ ಮಾನಸಿಕ ಹಿಂಸೆ” – ಕಿಶೋರ್ ಶಿರಾಡಿ ಮುಂದಾಳತ್ವದಲ್ಲಿ ಜು.30 ರಂದು ಸಮಾಲೋಚನಾ ಸಭೆ ನಡೆಸಲು ತೀರ್ಮಾನ
Savistara
Bureau Report
[t4b-ticker]











































