ಮೈಸೂರು ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಚೀಫ್ ಜನರಲ್ ಮ್ಯಾನೇಜರ್ ಅನಂತ ಹೆಗ್ಡೆ ಮತ್ತು ಗೋಪಾಲಕೃಷ್ಣರವರನ್ನು ಜುಲೈ 24 ರಂದು ಭೇಟಿ ಮಾಡಲಾಯಿತು. ಸೇವಾಧಾಮ ಸೇವಾಭಾರತಿಯ ಸೇವಾಕಾರ್ಯಗಳ ಬಗ್ಗೆ ಅವರಿಗೆ ವಿವರಿಸಿ ಕನ್ಯಾಡಿಯಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ನಿರ್ಮಾಣವಾಗುವ ನೂತನ ಪುನಶ್ಚೇತನ ಕೇಂದ್ರದ ಕಟ್ಟಡಕ್ಕಾಗಿ ತಮ್ಮ ಬ್ಯಾಂಕ್ ನ CSR ನ ಮೂಲಕ ಸಹಕರಿಸುವಂತೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಸೇವಾಧಾಮ ಸಂಸ್ಥೆಯ ಸಂಸ್ಥಾಪಕರಾದ ಕೆ. ವಿನಾಯಕ ರಾವ್ ಮತ್ತು ಹಿರಿಯ ಪ್ರಬಂಧಕರಾದ ಚರಣ್ ಕುಮಾರ್ ಎಂ, ಅನುಸರಣೆ ಮತ್ತು ಹಣಕಾಸು ವ್ಯವಸ್ಥಾಪಕ ಮೋಹನ ಎಸ್ ಉಪಸ್ಥಿತರಿದ್ದರು.
ಸೇವಾಭಾರತಿಯಿಂದ ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗೆ ಭೇಟಿ
Savistara
Bureau Report
[t4b-ticker]











































