ಧರ್ಮಸ್ಥಳ: ಎಸ್.ಐ.ಟಿ ಅಧಿಕಾರಿಗಳಿಗೆ ಮೃತದೇಹಗಳನ್ನು ಹೂತು ಹಾಕಿದ 13 ಸ್ಥಳಗಳನ್ನು ತೋರಿಸಿದ ದೂರುದಾರ | ಸ್ಥಳಗಳಿಗೆ ಶಸ್ತ್ರ ಸಜ್ಜಿತ ಎ.ಎನ್.ಎಫ್ ಸಿಬ್ಬಂದಿಗಳಿಂದ ಬಿಗಿ ಭದ್ರತೆ |ನಾಳೆ ಮತ್ತೆ ಸ್ಥಳ ಮಹಜರು ಕಾರ್ಯ ಮುಂದುವರಿಕೆ

Picture of Savistara

Savistara

Bureau Report

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಎಸ್ ಐಟಿ ಅಧಿಕಾರಿಗಳು ದೂರುದಾರ ವ್ಯಕ್ತಿಯೊಂದಿಗೆ ತೆರಳಿ ಸ್ಥಳ ಮಹಜರು ನಡೆಸಿದರು. ಈ ವೇಳೆ 13 ಮೃತದೇಹಗಳನ್ನು ಹೂತು ಹಾಕಿದ ಜಾಗಗಳನ್ನು ಸಾಕ್ಷಿದಾರ ತೋರಿಸಿದ್ದಾರೆ ಎನ್ನಲಾಗಿದೆ.ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನ ಘಟ್ಟ ಸಮೀಪದ ಅರಣ್ಯ ಪ್ರದೇಶದಲ್ಲಿ ಒಟ್ಟು 4 ಕಡೆಗಳಲ್ಲಿ ಸೇರಿ 13 ಸ್ಥಳಗಳನ್ನು ಗುರುತಿಸಲಾಗಿದೆ. ಬಳಿಕ ಸಾಕ್ಷಿದಾರ ಹಾಗೂ ಅಧಿಕಾರಿಗಳು ಬೆಳ್ತಂಗಡಿ ಎಸ್ ಐಟಿ ಕಚೇರಿಗೆ ಬಂದಿದ್ದಾರೆ. ಗುರುತಿಸಿರುವ ಸ್ಥಳಗಳಿಗೆ ಗನ್ ಮ್ಯಾನ್ ಭದ್ರತೆ ನೀಡಲಾಗಿದೆ.ಅನಾಮಿಕ ವ್ಯಕ್ತಿ ಗುರುತು ಮಾಡಿದ ಸ್ಥಳದಲ್ಲಿ ತಲಾ ಇಬ್ಬರಂತೆ ಶಸ್ತ್ರ ಸಜ್ಜಿತ ಎ ಎನ್ ಎಫ್ ಸಿಬ್ಬಂದಿಯಿಂದ ರಕ್ಷಣೆ ನೀಡಲಾಗಿದ್ದು, ರಾತ್ರಿ ಪೂರ್ತಿ ಪಹರೆಯಲ್ಲಿರಲಿದ್ದಾರೆ.

News Updates

ಸುಳ್ಯ : ಮುರುಳ್ಯ ರಕ್ತೇಶ್ವರಿ ದೇಗುಲ ವಿವಾದಕ್ಕೆ ಬಿಗ್ ಟ್ವಿಸ್ಟ್ – ವಕ್ಫ್ ಆದೇಶ ವಿರುದ್ಧ ಸಿಡಿದೆದ್ದ ಹಿಂದೂ ಸಮಾಜ | ಮುರುಳ್ಯದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆ | ದ.ಕ. ಸಂಸದ ಕ್ಯಾ. ಚೌಟ, ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಸಾವಿರಾರು ಮಂದಿ ಭಾಗಿ

[t4b-ticker]
error: Content is protected !!