ವಾಟ್ಸಾಪ್‌ನಿಂದ ಸುರಕ್ಷತೆ ಟೂಲ್

Picture of Savistara

Savistara

Bureau Report

ನವದೆಹಲಿ: ಹೊಸ ‘ಸೇಫ್ಟಿ ಓವರ್‌ವ್ಯೂ’ (ಸುರಕ್ಷತೆ ಅವಲೋಕನ) ಟೂಲ್ಅನ್ನು ವಾಟ್ಯಾಪ್ ಪರಿಚಯಿಸಿದೆ. ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಇಲ್ಲದವರು ನಿಮ್ಮನ್ನು ದಿಢೀರನೆ ಅಪರಿಚಿತ ಗ್ರೂಪ್‌ ಗೆ ಸೇರಿಸಿದರೆ ಇದು ಮುನ್ನೆಚ್ಚರಿಕೆ ಸಂದೇಶ ನೀಡುತ್ತದೆ. ಆ ಗ್ರೂಪ್ ಬಗೆಗಿನ ಮಾಹಿತಿ ನೀಡುವುದಲ್ಲದೆ, ಸುರಕ್ಷತೆ ಕುರಿತು ಸಲಹೆ ನೀಡುತ್ತದೆ. ಗ್ರೂಪ್‌ನ ನೋಟಿಫಿಕೇಷನ್‌ಗಳನ್ನು ಮ್ಯೂಟ್ ಮಾಡಲಾಗುತ್ತದೆ. ಬಳಕೆದಾರರು ಗ್ರೂಪ್‌ನಲ್ಲಿನ ಚಾಟ್ ನೋಡದೆ ನಿರ್ಗಮಿಸಬಹುದು.ಒಂದು ವೇಳೆ ಗ್ರೂಪ್ ಪರಿಶೀಲಿಸಬೇಕೆನಿಸಿದರೆ, ಚಾಟ್ ನೋಡಿ ನಂತರ ಮುಂದುವರಿಯಬೇಕೋ, ನಿರ್ಗಮಿಸಬೇಕೋ ಎಂಬುದನ್ನು ನಿರ್ಧರಿಸಬಹುದು. ಈ ಮಧ್ಯೆ, 2025ರ ಮೊದಲ ಆರು ತಿಂಗಳಲ್ಲಿ, ವಂಚನೆ ಕೇಂದ್ರಗಳಿಗೆ ಸಂಬಂಧಿಸಿದ 68 ಲಕ್ಷ ಖಾತೆಗಳನ್ನು ವಾಟ್ಯಾಪ್ ನಿಷೇಧಿಸಿದೆ. ಕಾಂಬೋಡಿಯಾದ ವಂಚನೆ ಕೇಂದ್ರದಿಂದ ನಡೆಯುತ್ತಿದ್ದ ಕೃತ್ಯಗಳನ್ನು ತಡೆಯಲಾಗಿದೆ. ನಕಲಿ ಲೈಕ್‌ಗಳಿಗೆ ಪೇಮೆಂಟ್, ಕ್ರಿಸ್ಟೋಕರೆನ್ಸಿ ಹೂಡಿಕೆ ಮುಂತಾದ ಆಮಿಷ ಒಡ್ಡಲಾಗುತ್ತಿತ್ತು.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!