ಅಮೆರಿಕದ ಹೊರಗೆ ಚಿಪ್ ತಯಾರಿಸಿದರೆ ಶೇ.100 ಸುಂಕ: ಟ್ರಂಪ್

Picture of Savistara

Savistara

Bureau Report

ವಾಷಿಂಗ್ಟನ್: ಅಮೆರಿಕದಲ್ಲೇ ತಯಾರಿಸಿ, ಇಲ್ಲವೇ ಭಾರೀ ಸುಂಕಕಟ್ಟಲು ಸಿದ್ಧರಾಗಿ ಎಂಬ ನಿಲುವಿಗೆ ಜೋತು ಬಿದ್ದಿರುವ ಟ್ರಂಪ್, ಅಮೆರಿಕದಲ್ಲಿ ಉತ್ಪಾದನೆಯಾಗದ ಕಂಪ್ಯೂಟರ್ ಚಿಪ್, ಸೆಮಿಕಂಡಕ್ಟರ್‌ಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ.ಅಮೆರಿಕದಲ್ಲೇ ಉತ್ಪಾದಿ ಸುವ ಸಂಸ್ಥೆಗಳಿಗೆ ಆಮದು ಸುಂಕದಿಂದ ವಿನಾಯಿತಿ ನೀಡು ವುದಾಗಿ ಹೇಳಿದ್ದಾರೆ. ಇದರಿಂದಾಗಿ ಜಾಗತಿಕ ಮಾರು ಕಟ್ಟೆಯಲ್ಲಿ ಬೆಲೆಯೇರಿಕೆ, ಕೊರತೆ ಯಂತಹ ಪರಿಣಾಮ ಎದುರಾಗುವ ಸಾಧ್ಯತೆಗಳಿವೆ.ಈ ನಡುವೆ ಆ್ಯಪಲ್ ಸಂಸ್ಥೆಯು ಅಮೆರಿಕದಲ್ಲೇ ಉತ್ಪಾದನೆ ಪ್ರಾರಂಭಿಸ ಲಿದ್ದರೆ, ಅಮೆರಿಕದೊಂದಿನ ಹಾಲಿ ಒಪ್ಪಂದದ ಪ್ರಕಾರ, ಶೇ.100ರಷ್ಟು ತೆರಿಗೆ ತಮಗೆ ಅನ್ವ ಯವಾಗಲ್ಲ ಎಂದು ದ.ಕೊರಿಯಾದ ಅಧಿಕಾರಿಗಳು ಹೇಳಿದ್ದಾರೆ. ತೈವಾನ್‌ನ ಕೆಲ ಕಾರ್ಖಾನೆಗಳು ಅಮೆರಿಕದಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವುದರಿಂದ ಎನ್‌ವಿಡಿಯಾ ಚಿಪ್‌ಗ್ಗು ಅಷ್ಟೇನೂ ದುಬಾರಿಯಾಗುವುದಿಲ್ಲ ಎನ್ನಲಾಗುತ್ತಿದೆ.

[t4b-ticker]
error: Content is protected !!