ಪ್ರಧಾನಿ ಮೋದಿ ”ಮನ್ ಕೀ ಬಾತ್’ನಿಂದ ಆಕಾಶವಾಣಿಗೆ 34 ಕೋಟಿ ರೂ. ಆದಾಯ!

Picture of Savistara

Savistara

Bureau Report

ಕೇಂದ್ರ ಮಾಹಿತಿ, ಪ್ರಸಾರ ಖಾತೆ ರಾಜ್ಯ ಸಚಿವ ಎಲ್.ಮುರುಗನ್ ಮಾಹಿತಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ “ಮನ್ ಕೀ ಬಾತ್’ ಕಾರ್ಯಕ್ರಮ ಆರಂಭವಾದಾಗಿನಿಂದ ಈ ವರೆಗೆ 34.13 ಕೋಟಿ ರೂ. ಆದಾಯ ಗಳಿಸಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.ಈ ಕುರಿತು ಲಿಖಿತ ಉತ್ತರ ನೀಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್. ಮುರುಗನ್, ವಿವಿಧ ಸಾಂಪ್ರದಾಯಿಕ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಮನ್ ಕೀ ಬಾತ್ ಕಾರ್ಯಕ್ರಮ ಕೇಳುಗರನ್ನು ತಲುಪಿದೆ. ಯಾವುದೇ ಹೆಚ್ಚುವರಿ ಸಂಪನ್ಮೂಲವನ್ನು ವ್ಯಯಿಸದೆ ಇರುವ ವ್ಯವಸ್ಥೆಯನ್ನೇ ಬಳಸಿಕೊಂಡು 34.13 ಕೋಟಿ ರೂ. ಆದಾಯವನ್ನು ಆಕಾಶವಾಣಿ ಗಳಿಸಿದೆ ಎಂದು ತಿಳಿಸಿದ್ದಾರೆ.ಆಕಾಶವಾಣಿ (ಆಲ್‌ ಇಂಡಿಯಾ ರೇಡಿಯೊ)ಯಲ್ಲಿ ಪ್ರಸಾರವಾಗುವ ನರೇಂದ್ರ ಮೋದಿಯವರ ಮನದ ಮಾತುಗಳು ಡಿಜಿಟಲ್ ರೂಪದಲ್ಲಿ ಯೂಟ್ಯೂಬ್, ಫೇಸ್‌ಬುಕ್, ಎಕ್ಸ್, ದೂರದರ್ಶನ ಹಾಗೂ ನ್ಯೂಸ್ ಆನ್ ಎಐಆರ್ ಆ್ಯಪ್‌ನಲ್ಲಿ ಹಾಗೂ ಪ್ರಾದೇಶಿಕ ಭಾಷೆಗಳಲ್ಲಿಯೂ ಕೇಳುಗರಿಗೆ ಲಭ್ಯವಿರುತ್ತವೆ. ಮನ್ ಕೀ ಬಾತ್ ಜನಪ್ರಿಯ ಕಾರ್ಯಕ್ರಮವಾಗಿರುವುದರಿಂದ ಆ ಫ್ಲಾಟ್ ಫಾರ್ಮ್‌ಗಳಿಂದ ಆಕಾಶವಾಣಿಗೆ ಆದಾಯ ಬರುತ್ತದೆ. ಮನ್ ಕೀ ಬಾತ್‌ಗೆ ದೇಶದಲ್ಲಿ ಅಷ್ಟೇ ಅಲ್ಲ ವಿದೇಶದಲ್ಲಿಯೂ ಕೇಳುಗರಿದ್ದಾರೆ ಎಂಬುದು ಸಾಬೀತಾಗಿದೆ ಎಂದು ಸಚಿವ ಮುರುಗನ್ ತಿಳಿಸಿದ್ದಾರೆ.

2014 ಅಕ್ಟೋಬರ್ 3 ರಂದು ಆರಂಭವಾದ ಮನ್ ಕೀ ಬಾತ್ ಅಥವಾ ‘ಮನದ ಮಾತು’ ಆಕಾಶವಾಣಿಯ ಮಾಸಿಕ ರೇಡಿಯೊ ಕಾರ್ಯಕ್ರಮವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ನೆಚ್ಚಿನ ವಿಷಯ ಬಗ್ಗೆ ಹಾಗೂ ಜನರು ಸಲಹೆ ನೀಡಿದ ವಿಷಯಗಳ ಬಗ್ಗೆ ಅರ್ಧ ಗಂಟೆ ಮಾತನಾಡುತ್ತಾರೆ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!