ಗ್ರಾಹಕರೇ ಉಷಾರ್!! ನಕಲಿ ಚಾ ಹುಡಿ ದಂಧೆ; ಚಹಾ ಪುಡಿಗೂ ಹಾಕ್ತಾರೆ ಡೆಡ್ಲಿ ಕೆಮಿಕಲ್.!

Picture of Savistara

Savistara

Bureau Report

ಸುಳ್ಯ ಪುತ್ತೂರು ಭಾಗದಲ್ಲಿ ನಕಲಿ ಟೀ ಪುಡಿ ಜಾಲ ಸಕ್ರೀಯ, ಮಾರಕ ರೋಗಕ್ಕೆ ಕಾರಣವಾಗುತ್ತಿದೆ ಚಹಾ ಪುಡಿ

ಚಹಾ ನಾವು ಇಷ್ಟಪಟ್ಟು ಕುಡಿಯುವ ಪೇಯ. ಆಹಾರ ಖದೀಮರು ಟೀ ಪುಡಿಯನ್ನು ಬಿಡದೆ ಕಲಬೆರಕೆ ಮಾಡುತ್ತಾರೆ ಅನ್ನುವ ಸ್ಪೋಟಕ ಅಂಶ ಬಯಲಾಗಿದೆ. ರಾಜ್ಯದ ಖಾಸಗಿ ಮಾಧ್ಯಮವೊಂದು ಇತ್ತೀಚೆಗೆ ಟೀ ಮಾಫಿಯಾದ ಸಮಗ್ರ ವಿವರಣೆಯನ್ನು ಬಯಲಿಗೆ ತಂದಿತ್ತು. ಟೀ ಪುಡಿಗೆ ಕೃತಕ ಬಣ್ಣ ಬಳಸಿ ದೊಡ್ಡ ಮಟ್ಟದಲ್ಲಿ ವಿತರಿಸುವ ಜಾಲ ಕರಾವಳಿಯಲ್ಲಿ ಸಕ್ರೀಯವಾಗಿದೆ. ಟೀ ಪುಡಿಯ ಆಕರ್ಷಕ ಬಣ್ಣಕ್ಕೆ ಮೈ ಮರೆತು ಹೋಟೆಲ್, ಕ್ಯಾಂಟೀನ್ ಮಾಲಕರು ಖರೀದಿಸುತ್ತಿದ್ದಾರೆ. ಇದು ಮಾರಕ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತಿದೆ.

ಹೊರ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ನಕಲಿ ಟೀ ಪುಡಿ ಕಂಪನಿ ಲೇಬಲ್ ಹಾಕಿ ಇಂತಹ ಚಹಾ ಪುಡಿ ಮಾರಾಟ ಮಾಡುವುದಿಲ್ಲ. ಸಬ್ ವಿತರಕರ ಮೂಲಕ ಬೇರೆ ಆಹಾರ ವಸ್ತುಗಳ ಲೈನ್ ಸೇಲ್ ಜತೆಯಲ್ಲೇ ಈ ಟೀ ಪೌಡ‌ರ್ ಪೊಟ್ಟಣಗಳು ಸಣ್ಣ ಪುಟ್ಟ ಹೋಟೆಲ್‌, ಅಂಗಡಿ ಸೇರುತ್ತದೆ.ಮರದ ಬೊಟ್ಟು, ನಕಲಿ ಟೀ ಎಲೆ, ಮತ್ತುಬರಲು ಮದ್ದು ಸೇರಿಸುತ್ತಾರೆ, ಅಜಿಲಮೊಟಾನೂ ಸೇರಿಸುತ್ತಾರೆ. ಇಂತಹ ಟೀ ದಿನನಿತ್ಯ ಸೇರಿಸಿದರೆ ನಾನಾ ಕಾಯಿಲೆಗೆ ತುತ್ತಾಗಬೇಕಿದೆ. ಕ್ಯಾನ್ಸರ್ ಗೂ ಕಾರಣವಾಗುತ್ತದೆ. ಸಾಮಾನ್ಯವಾಗಿ ಕೆ.ಜಿ ಗೆ 170 ರಿಂದ 180 ರೂಪಾಯಿಗೆ ಚಹಾ ಪುಡಿ ವಿತರಣೆಯಾಗುತ್ತದೆ. ಆದರೆ ಕಲಬೆರಕೆ ಮಾಡುವವರು ಕಳಪೆ ಗುಣಮಟ್ಟದ ಟೀ ಪೌಡರನ್ನು ಕೆಲ ಎಸ್ಟೇಟ್ ಗಳಿಂದ 80-100 ರೂಪಾಯಿಗೆ ಪಡೆಯುತ್ತಾರೆ. ಅದಕ್ಕೆ ಒಂದಷ್ಟು ಪರ್ಷಿಯನ್ ಬ್ಲೂ, ಬಿಸ್ಮಾರ್ಕ್ ಬ್ರೌನ್, ಇಂಡಿಗೋ ದಂತಹ ಡೆಡ್ಲಿ ಕೆಮಿಕಲ್ ಬಳಸುತ್ತಾರೆ.

ಟೀ ಮಾಫಿಯಾದ ವಿರುದ್ಧ ಆಹಾರ ಸುರಕ್ಷತಾ ಅಧಿಕಾರಿಗಳು ಮೌನಕ್ಕೆ ಜಾರಿರುವುದು ಖೇದಕರ.ಆಹಾರ ಸುರಕ್ಷತಾ ಕಾಯ್ದೆ ಪ್ರಕಾರ ಚಹಾ ಪುಡಿಗೆ ಬಣ್ಣ ಸೇರಿಸುವಂತಿಲ್ಲ. ಆದರೆ ಡೆಡ್ಲಿ ಕೆಮಿಕಲ್ ಬಳಸಿ ಕೃತಕ ಟೀ ಪುಡಿ ಮಾರಾಟ ಮಾಡುವ ಜಾಲ ಸಕ್ರೀಯವಾಗಿದೆ. ಸುಳ್ಯ, ಪುತ್ತೂರು ಕೆಲವು ಭಾಗಗಳಲ್ಲಿ ಇಂತಹ ಜಾಲ ಬೃಹದಾಕಾರವಾಗಿ ಬೆಳೆದಿದೆ. ಸಾರಿಗೆ ನಿಗಮದ ಬಸ್ ಗಳಲ್ಲಿ ಇಂತಹ ನಕಲಿ ಚಾ ಹುಡಿ ಸುಳ್ಯಕ್ಕೆ ಬರುತ್ತದೆಯಂತೆ. ಈ ಮಾಪಿಯಾದ ಹಿಂದೆ ಸರಕಾರಿ ಸಾರಿಗೆ ನಿಗಮದ ಸಿಬ್ಬಂದಿಯ ಶಾಮಿಲಾತಿ ಕೇಳಿ ಬರುತ್ತಿದೆ. ಮಾಫಿಯಾ ರೀತಿ ಬದಲಾಗಿದೆ. ಮುಂದಿನ ದಿನಗಳಲ್ಲಿ ಮೀಡಿಯಾ ಇಂತಹ ನಕಲಿ ಟೀ ಪುಡಿಯ ವ್ಯವಹಾರ ನಡೆಸುವವರ ಬಣ್ಣ ಕಳಚಲಿದೆ.

ಇತ್ತೀಚೆಗಿನ ದಿನಗಳಲ್ಲಿ ಎಲ್ಲಾ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಕಾಣಬಹುದಾಗಿದೆ. ಅವುಗಳಲ್ಲಿ ಚಹಾ ಪುಡಿ ಕೂಡ ಒಂದು. ತೆಂಗಿನಕಾಯಿಯ ಸಿಪ್ಪೆಯ ಪುಡಿ, ಮರದ ತೊಗಟೆಯ ಪುಡಿ, ಹುಣಸೆ ಬೀಜದ ಪುಡಿ ಸೇರಿದಂತೆ ಹೀಗೆ ರಾಸಾಯನಿಕ ಬೆರೆಸಿ ಕಲಬೆರಕೆಯುಕ್ತ ಚಹಾ ಪುಡಿಯನ್ನು ಮಾರಾಟ ಮಾಡಲಾಗುತ್ತಿದೆ. ಒಂದು ವೇಳೆ ನೀವು ಬಳಸುತ್ತಿರುವ ಟೀ ಪುಡಿ ನಕಲಿಯಾಗಿದ್ದರೆ ಅದರ ಬಳಕೆಯನ್ನು ನಿಲ್ಲಿಸುವುದು ಒಳ್ಳೆಯದು. ನಕಲಿ ಟೀ ಪುಡಿಯಿಂದ ತಯಾರಿಸಿದ ಚಹಾ ಸೇವನೆ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ

[t4b-ticker]
error: Content is protected !!