ಗುಜರಾತ್, ಮಹಾರಾಷ್ಟ್ರದಂತೆ ನಮಗೂ ಆದ್ಯತೆ ಕೊಡಿ, ಮೆಟ್ರೋಗೆ ಕೇಂದ್ರಕ್ಕಿಂತ ಹೆಚ್ಚು ಹಣಕಾಸು ಕೊಟ್ಟಿದ್ದೇ ನಾವು ; ಪ್ರಧಾನಿ ಮೋದಿಗೆ ಮಾತಿನಲ್ಲೇ ತಿವಿದ ಸಿಎಂ ಸಿದ್ದರಾಮಯ್ಯ!

Picture of Savistara

Savistara

Bureau Report

ಬೆಂಗಳೂರು ಮೆಟ್ರೋ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ನಡೆಯುವ ಯೋಜನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ. 50 ಅನುದಾನ ಕೊಟ್ಟು ಮಾಡುವಂತದ್ದು. ಆದರೆ ಇಂದು ಉದ್ಘಾಟನೆಗೊಂಡ ಯೋಜನೆಗೆ ರಾಜ್ಯ ಸರ್ಕಾರವೇ ಹೆಚ್ಚು ಖರ್ಚು ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ಮೋದಿ ಸಮ್ಮುಖದಲ್ಲೇ ಮಾತಿನ ದಾಳ ಎಸೆದಿದ್ದಾರೆ.

ಬೆಂಗಳೂರು .10 : ಬೆಂಗಳೂರು ಮೆಟ್ರೋ ಯೋಜನೆಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ನಡೆಯುವ ಯೋಜನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ. 50 ಅನುದಾನ ಕೊಟ್ಟು ಮಾಡುವಂತದ್ದು. ಆದರೆ ಇಂದು ಉದ್ಘಾಟನೆಗೊಂಡ ಯೋಜನೆಗೆ ರಾಜ್ಯ ಸರ್ಕಾರವೇ ಹೆಚ್ಚು ಖರ್ಚು ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿ ಸಮ್ಮುಖದಲ್ಲೇ ಮಾತಿನ ದಾಳ ಎಸೆದಿದ್ದಾರೆ.ಮೆಟ್ರೋ ಹಳದಿ ಮಾರ್ಗದ ಯೋಜನೆಗೆ ಚಾಲನೆ ಕೊಟ್ಟ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರವೇ ಹಣಕಾಸು ಹೆಚ್ಚು ನೀಡಿದ್ದು ಎಂದು ಪ್ರಧಾನಿ ಮೋದಿಗೆ ತಿರುಗೇಟು ನೀಡುವಂತೆ ಮಾತನಾಡಿದರು. 20050 ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಬೆಂಗಳೂರು ಮೆಟ್ರೋ ಯೋಜನೆ ಆರಂಭವಾಗಿದ್ದು ಎಂಬುದನ್ನೂ ನೆನಪಿಸಿದ ಸಿದ್ದರಾಮಯ್ಯ ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರ ತಾಂತ್ರಿಕ ನೆರವು ಮತ್ತು ಹಣಕಾಸಿನ ನೆರವನ್ನು ನೀಡುತ್ತದೆ. ಹಾಗಾಗಿ ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಕಾರ್ಯಕ್ರಮ ಎಂದಾಗುತ್ತದೆ. ಇದಕ್ಕೆ ರಾಜ್ಯ ಸರ್ಕಾರ 25,387 ಕೋಟಿ ರೂಪಾಯಿ ಖರ್ಚು ಮಾಡಿದೆ. ಕೇಂದ್ರ ಸರ್ಕಾರ ಕೊಟ್ಟದ್ದು ಕೇವಲ 7,468 ಕೋಟಿ ರೂಪಾಯಿ ಮಾತ್ರ. ಕೇಂದ್ರ ಸರ್ಕಾರ ಸಾಲ ಕೊಡುತ್ತದೆ. ಆ ಸಾಲವನ್ನು ನಾವು ಈಗಾಗಲೇ ಬಡ್ಡಿ ಸಮೇತ 3,987 ಕೋಟಿ ರೂಪಾಯಿ ಸಾಲ ಮರು ಪಾವತಿ ಮಾಡಿದ್ದೇವೆ ಎಂದರು.

ಇವತ್ತು ಬೆಂಗಳೂರಿನಿಂದ ಬೆಳಗಾವಿಗೆ ವಂದೇ ಭಾರತ್ ಎಕ್ಸ್ ಪ್ರೆಸ್‌ ರೈಲು ಉದ್ಘಾಟನೆಗೊಂಡಿದೆ. ಅದೇ ರೀತಿ ಅಮೃತ್ ಸರ್ ಮಾತಾ ವೈಷ್ಟೋ ದೇವಿ ಹಾಗೂ ಪುಣೆ – ನಾಗಪುರ್ ವಂದೇ ಭಾರತ್ ಕೂಡ ಉದ್ಘಾಟನೆ ಆಗಿದೆ. ನಾವು 4ನೇ ಹಂತದ ಮೆಟ್ರೋ ಯೋಜನೆಗೆ ಡಿಪಿಆರ್ ಸಿದ್ದಪಡಿಸಿ ಕೇಂದ್ರಕ್ಕೆ ಕೊಟ್ಟಿದ್ದೇವೆ. ಕೇಂದ್ರ ಸರ್ಕಾರ ಅದಕ್ಕೆ ಅನುಮೋದನೆ ಕೊಟ್ಟರೆ 2030ರೊಳಗೆ ಆ ಕೆಲಸ ಪೂರ್ಣಗೊಳಿಸಿ 30 ಲಕ್ಷ ಜನರಿಗೆ ನೆರವಾಗಲು ಸಾಧ್ಯವಿದೆ. ಕೇಂದ್ರ ಸರ್ಕಾರ ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಿಗೆ ನೀಡುವ ಆದ್ಯತೆಯನ್ನು ಸ್ವಲ್ಪ ಕರ್ನಾಟಕ ರಾಜ್ಯಕ್ಕೂ ನೀಡಿ ಯೋಜನೆಗೆ ಅನುಮೋದನೆ ನೀಡಬೇಕು ಎಂದು ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಸಮ್ಮುಖದಲ್ಲಿ ಮಾತಿನಲ್ಲೇ ತಿವಿದರು.ಮೆಟ್ರೋ ರೈಲು ಯೋಜನೆಯನ್ನು ಕೇಂದ್ರದ್ದು ಎನ್ನುವ ರೀತಿ ಬಿಂಬಿಸುತ್ತಿರುವ ಪ್ರಯತ್ನಕ್ಕೆ ಕಾಂಗ್ರೆಸ್ ಸರ್ಕಾರದ ಸಿಎಂ ಸಿದ್ದರಾಮಯ್ಯ ಗಟ್ಟಿ ಸ್ವರದಲ್ಲಿಯೇ ಗುಟುರು ಹಾಕಿದ್ದಾರೆ.

[t4b-ticker]
error: Content is protected !!