ಈಗ ಪತಿ ಪತ್ನಿ ಔರ್ ಪಂಗಾ ಕಾರ್ಯಕ್ರಮದ ಮೂಲಕ ಮತ್ತೆ ಕಿರುತೆರೆಗೆ ಹಿಂತಿರುಗಿರುವ ಹಿನಾ, ಕ್ಯಾನ್ಸರ್ ಘೋಷಣೆ ಬಳಿಕ ಇದು ನನ್ನ ಮೊದಲ ಪ್ರಾಜೆಕ್ಟ್ ಎಂದು ತಿಳಿಸಿದ್ದಾರೆ.
ಹೈದರಾಬಾದ್: ತಮಗೆ ಸ್ತನ ಕ್ಯಾನ್ಸರ್ ಇರುವ ಬಗ್ಗೆ ಬಹಿರಂಗಪಡಿಸಿ ಒಂದು ವರ್ಷ ಕಳೆದರೂ, ಈ ಎಂಟರ್ಟೈನ್ಮೆಂಟ್ ಉದ್ಯಮ ಮಾತ್ರ ತಮ್ಮನ್ನು ಆಯ್ಕೆ ಮಾಡುವ ಬಗ್ಗೆ ಇನ್ನೂ ಜಾಗರೂಕವಾಗಿದೆ ಎಂದು ಕಿರುತೆರೆ ನಟಿ ಹಿನಾ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ.ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ, ಕಸೌತಿ ಜಿಂದಗಿ ಕೇ 2, ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ 8 ಮತ್ತು ಬಿಗ್ ಬಾಸ್ ಸೀಸನ್ 11 ರ ಖ್ಯಾತಿಯ ನಟಿ ಹಿನಾ ಖಾನ್, ಅನಾರೋಗ್ಯದ ಸಮಯದಲ್ಲಿ ಕೆಲಸ ಸ್ವಾಭಾವಿಕವಾಗಿ ಕಡಿಮೆಯಾಯಿತು. ಹಲವಾರು ಅವಕಾಶಗಳನ್ನು ತಿರಸ್ಕರಿಸುವುದು ಅನಿವಾರ್ಯವಾಗಿತ್ತು ಎಂದರು.
ಈಗ ಪತಿ ಪತ್ನಿ ಔರ್ ಪಂಗಾ ಕಾರ್ಯಕ್ರಮದ ಮೂಲಕ ಮತ್ತೆ ಕಿರುತೆರೆಗೆ ಹಿಂತಿರುಗಿರುವ ಹಿನಾ, ಕ್ಯಾನ್ಸರ್ ಇರುವುದಾಗಿ ಘೋಷಿಸಿದ ನಂತರ ಇದು ನನ್ನ ಮೊದಲ ಪ್ರಾಜೆಕ್ಟ್ ಆಗಿದೆ. ಹಾಗಾಗಿ ಮತ್ತೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ. ನೀವು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ಯಾರೂ ನನಗೆ ನೇರವಾಗಿ ಹೇಳಿಲ್ಲ. ಆದರೆ ಜನರು ನನ್ನ ಜೊತೆ ಕೆಲಸ ಮಾಡಲು ಹಿಂಜರಿಯುತ್ತಿರಬಹುದು ಎಂದು ನನಗೆ ಅರ್ಥವಾಗುತ್ತದೆ, ಪರವಾಗಿಲ್ಲ. ಅದನ್ನು ನಾನು ಮುರಿಯಬೇಕಾಗಬಹುದು. ಬಹುಶಃ ಈ ಕಾರ್ಯಕ್ರಮದ ಅದನ್ನು ಮಾಡುತ್ತದೆ. ನನಗೆ ಅರ್ಥವಾಗಿದೆ. ನಾನು ಅವರ ಸ್ಥಾನದಲ್ಲಿದ್ದರೆ, ನಾನು ಅದರ ಬಗ್ಗೆ ಸಾವಿರ ಬಾರಿ ಯೋಚಿಸುತ್ತಿದ್ದೆ ಎಂದು ಹೇಳಿದರು.ನಾನು ಆಡಿಷನ್ಗಳಿಗೆ ಸದಾ ತಯಾರಿದ್ದೆ, ನಾನು ಎಲ್ಲಿಯೂ ನಿಲ್ಲಿಸಿದ್ದೆ? ಕಳೆದ ಒಂದು ವರ್ಷದಿಂದ ಯಾರೂ ನನಗೆ ಕರೆ ಮಾಡಿಲ್ಲ. ನಾನು ಎಲ್ಲದಕ್ಕೂ ಮುಕ್ತಳಾಗಿದ್ದೇನೆ, ದಯವಿಟ್ಟು ನನಗೆ ಕರೆ ಮಾಡಿ ಎಂದು ಕೇಳಿಕೊಂಡರು.
ಕಲರ್ಸ್ ಚಾನೆಲ್‌ನಲ್ಲಿ ಪ್ರಸ್ತುತ ಪ್ರಸಾರವಾಗುತ್ತಿರುವ ಈ ರಿಯಾಲಿಟಿ ಶೋನಲ್ಲಿ ಜನಪ್ರಿಯ ಸೆಲೆಬ್ರಿಟಿ ಜೋಡಿಗಳಾದ ಹಿನಾ ಖಾನ್–ರಾಕಿ ಜೈಸ್ವಾಲ್, ದೇಬಿನ್ನಾ ಬೊನ್ನರ್ಜಿ–ಗುರ್ಮೀತ್ ಚೌಧರಿ, ರುಬಿನಾ ದಿಲೈಕ್–ಅಭಿನವ್ ಶುಕ್ಲಾ, ಅವಿಕಾ ಗೋರ್–ಮಿಲಿಂದ್ ಚಾಂದ್ವಾನಿ, ಸ್ವರಾ ಭಾಸ್ಕರ್–ಫಹಾದ್ ಅಹ್ಮದ್, ಗೀತಾ ಫೋಗಟ್–ಪವನ್ ಕುಮಾರ್, ಮತ್ತು ಸುದೇಶ್ ಲೆಹ್ರಿ–ಮಮತಾ ಲೆಹ್ರಿ ಕಾಣಿಸಿಕೊಂಡಿದ್ದಾರೆ. ಜೋಡಿ ವೀಕ್ಷಕರ ಮನೆ ಸೆಳೆಯಲು ಚಾಲೆಂಜ್ಗಳಲ್ಲಿ ಅದ್ಭುತವಾಗಿ ಸ್ಪರ್ಧಿಸುತ್ತಿದ್ದಾರೆ.ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನನಗೆ ಒಂದು ಹೆಲ್ತ್ ಎಕ್ಸ್ಪರಿಮೆಂಟ್ ಆಗಿತ್ತು. ನಾನು ಈ ಅದನ್ನು ಮಾಡಲು ಸಾಧ್ಯವಾಗುತ್ತದೆಯೊ ಅಥವಾ ಇಲ್ಲವೇ ಎಂಬ ಎಕ್ಸ್ಪರಿಮೆಂಟ್ ಇದು. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ನನಗೆ ಒಂದು ದೊಡ್ಡ ಹೆಜ್ಜಯಾಗಿತ್ತು. ಇಲ್ಲಿಯವರೆಗೆ ನಾನು ಸ್ವಲ್ಪ ದಣಿದಿದ್ದೇನೆ. ಆದರೆ ಅದನ್ನು ಹೊರತುಪಡಿಸಿ ಎಲ್ಲವೂ ಚೆನ್ನಾಗಿದೆ. ನಾನು ಯಾವುದನ್ನಾದರೂ ತೆಗೆದುಕೊಳ್ಳಲು ಸಿದ್ಧಳಿದ್ದೇನೆ. ಅದು ಡಿಜಿಟಲ್ ಕಾರ್ಯಕ್ರಮವಾಗಿರಲಿ ಅಥವಾ ಯಾವುದಾದರೂ ಆಗಿರಲಿ, ನಾನೂ
ದೀರ್ಘಾವಧಿಯ ಕಮಿಟ್ಮೆಂಟ್ ತೆಗೆದುಕೊಳ್ಳುವುದಿಲ್ಲ. ಸಿನಿಮಾಗಳಲ್ಲಿ ಏನಾದರೂ ಅವಕಾಶ ಸಿಕ್ಕರೆ, ನನ್ನನ್ನು ಆ ಪಾತ್ರಕ್ಕೆ ಬೇಕಾಗುವಷ್ಟು ಯೋಗ್ಯಳೆಂದು ಅವರಿಗೆ ಅನಿಸಿದರೆ, ನಾನು ಯಾಕೆ ಮಾಡಬಾರದು. ಖಂಡಿತಾ ಮಾಡುತ್ತೇನೆ ಎಂದು ತಿಳಿಸಿದರು.ಆ್ಯಕ್ಷನ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಬಯಕೆ ವ್ಯಕ್ತಪಡಿಸಿರುವ ಹಿನಾ ಖಾನ್, ಒಟಿಟಿಯಲ್ಲಾಗಲಿ ಅಥವಾ ಚಲನಚಿತ್ರಗಳಲ್ಲಾಗಲಿ ನಾನು ಸ್ಪೈ ಸಿನಿಮಾಗಳ ಪಾತ್ರವಾಗಲು ಬಯಸುತ್ತೇನೆ ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.














































