ಕಾಂಗ್ರೆಸ್ ಮತ ಕಳವು ಆರೋಪ ವಾಸ್ತವಿಕವಾಗಿ ತಪ್ಪು ಎಂದ ಚುನಾವಣಾ ಆಯೋಗ: ಫ್ಯಾಕ್ಟ್​ ಚೆಕ್​ ಮೂಲಕ ಉತ್ತರ

Picture of Savistara

Savistara

Bureau Report

ಮತ ಕಳವು ಆರೋಪಕ್ಕೆ ಫ್ಯಾಕ್ಟ್​ ಚೆಕ್​ ಮೂಲಕ ಉತ್ತರಿಸಿರುವ ಚುನಾವಣಾ ಆಯೋಗ ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡ ಕುರಿತು ಮಾಹಿತಿಯನ್ನು ಪೋಸ್ಟ್​ ಮಾಡಿದೆ.

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ನಡೆಸಿದ ಪ್ರತಿಭಟನೆಯಲ್ಲಿ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್​ ಗಾಂಧಿ ಮಾಡಿರುವ ಮತ ಕಳ್ಳತನದ ಆರೋಪವು ವಾಸ್ತವಿಕವಾಗಿ ತಪ್ಪಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.ಇಂಡಿಯಾ ಬಣದ ಒಕ್ಕೂಟ ಮಾಡಿರುವ ಆರೋಪಗಳ ಕುರಿತು ಫ್ಯಾಕ್ಟ್​ ಚೆಕ್​ ನಡೆಸಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದೆ.

ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ಹಾಗೂ ಮತ ಕಳ್ಳತನ ಆರೋಪದ ಮೇಲೆ ಸೋಮವಾರ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟದ ಪಕ್ಷಗಳ ನಾಯಕರು ಪ್ರತಿಭಟನೆಯಲ್ಲಿ ಬಾಗವಹಿಸಿದ್ದರು.

ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿರುವ ಕುರಿತು ಕೆಲವು ದಾಖಲೆಗಳ ಪಟ್ಟಿಯನ್ನು ಚುನಾವಣಾ ಆಯೋಗ ಹಂಚಿಕೊಂಡಿದೆ. ಇದರಲ್ಲಿ ಆರ್​ಜೆಡಿ, ಕಾಂಗ್ರೆಸ್​ ಮತ್ತು ಸಿಪಿಐನಂತಹ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ವಿಡಿಯೋ ಸಾಕ್ಷಿಗಳು ಇವೆ.

ಬಿಹಾರದಲ್ಲಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸುವ ಮೊದಲು, ಪ್ರಕಟಿಸಿದ ನಂತರ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಗಳ ವಿವರಗಳನ್ನು ಕೂಡ ಚುನಾವಣಾ ಆಯೋಗ ಹಂಚಿಕೊಂಡಿದೆ. ಕ್ಷೇತ್ರ ಮಟ್ಟದಲ್ಲಿ ಅತ್ಯುನ್ನತ ಮಟ್ಟದ ಪಾರದರ್ಶಕತೆಯೊಂದಿಗೆ ಎಸ್​ಐಆರ್​ ಪ್ರಕ್ರಿಯೆ ನಡೆಸಲಾಗಿದೆ ಎಂದು ತಿಳಿಸಿದೆ.ಶುದ್ಧ ಮತದಾರರ ಪಟ್ಟಿಗಳು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತವೆ ಎಂದಿರುವ ಚುನಾವಣಾ ಆಯೋಗ ಕರಡು ಮತದಾರರ ಪಟ್ಟಿ ಪ್ರಕಟವಾದಾಗಿನಿಂದ ಅದು ಬಿಡುಗಡೆ ಮಾಡಿದ ದೈನಂದಿನ ಬುಲೆಟಿನ್‌ನ ಲಿಂಕ್ ಅನ್ನು ಸಹ ಹಂಚಿಕೊಂಡಿದೆ.

[t4b-ticker]
error: Content is protected !!