ಬೆಳಾಲು ಮೈತ್ರಿ ಯುವಕ ಮಂಡಲ ಇದರ ವತಿಯಿಂದ 21 ನೇ ವರ್ಷದ ಮೊಸರು ಕುಡಿಕೆ ಉತ್ಸವ, ಕೃಷ್ಣವೇಷ, ಆಟೋಟ ಸ್ಪರ್ಧೆಯ ಉದ್ಘಾಟನಾ ಸಮಾರಂಭ

Picture of Savistara

Savistara

Bureau Report

ಬೆಳಾಲು : ಮೈತ್ರಿ ಯುವಕ ಮಂಡಲ (ರಿ.)ಬೆಳಾಲು ಇದರ ವತಿಯಿಂದ 21 ನೇ ವರ್ಷದ ಮೊಸರು ಕುಡಿಕೆ ಉತ್ಸವ, ಕೃಷ್ಣವೇಷ, ಆಟೋಟ ಸ್ಪರ್ಧೆ ಆಗಸ್ಟ್ 17 ರಂದು ಸಂಘದ ವಠಾರದಲ್ಲಿ ಉದ್ಘಾಟನಾ ಸಮಾರಂಭ ನೆರವೇರಿತು. ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಜಯರಾಮ್ ಮಯ್ಯರವರು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ, ಬೆಳಾಲು ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಗೀತಾ ಹಾಗೂ ಈ ಸಂದರ್ಭದಲ್ಲಿ ಮೈತ್ರಿ ಯುವಕ ಮಂಡಲ ಗೌರವಾಧ್ಯಕ್ಷರಾದ ರಾಜೇಶ್ ಪಾರಳ,

ಅಧ್ಯಕ್ಷರಾದ ನಿತಿನ್ ಮೋನಿಸ್, ಕಾರ್ಯದರ್ಶಿ ವಿಘ್ನೇಶ್ ಅನಂತೋಡಿ, ಪದಾಧಿಕಾರಿಗಳು ಉಪಸ್ಥಿತರಿದ್ದರು. ನಿತಿನ್ ಮೋನಿಸ್ ಸ್ವಾಗತಿಸಿ, ಸಂಘದ ಸಲಹೆಗಾರರು ನೋಟರಿ ವಕೀಲರಾದ ಶ್ರೀನಿವಾಸಗೌಡ ಹಾಗೂ ಅಧ್ಯಾಪಕರಾದ ಭರತ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಿಘ್ನೇಶ್ ಅನಂತೋಡಿ ಧನ್ಯವಾದವಿತ್ತರು. ಮಕ್ಕಳಿಗೆ ಕೃಷ್ಣವೇಷ ಸ್ಪರ್ಧೆಯೂ ವಿಶೇಷ ಆಕರ್ಷಣೆಗೊಂಡಿತ್ತು. ಗ್ರಾಮಸ್ಥರಿಗೆ ವಿವಿಧ ಆಟೋಟ ಸ್ಪರ್ಧೆಯೂ ನಡೆಯಿತು.

[t4b-ticker]
error: Content is protected !!