ಡಿಸೆಂಬರ್‌ನಲ್ಲಿ ಡಿಕೆಶಿ ಮುಖ್ಯಮಂತ್ರಿ: ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜು

Picture of Savistara

Savistara

Bureau Report

ದಾವಣಗೆರೆ: ‘ಡಿಸೆಂಬರ್‌ನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ಅವರು ಸಿ.ಎಂ ಆಗಲಿದ್ದಾರೆ. ಅಲ್ಲಿಯವರೆಗೂ ನಾನು ಮಾಧ್ಯಮಗಳ ಎದುರು ಏನೂ ಮಾತನಾಡುವುದಿಲ್ಲ’ ಎಂದು ಚನ್ನಗಿರಿಯ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜು ಹೇಳಿದರು.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷದ ವಿರುದ್ದ ಹೇಳಿಕೆ ಕೊಟ್ಟು ಕೆ.ಎನ್.ರಾಜಣ್ಣ ಈಗ ಅನುಭವಿಸುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ವೋಟಿಗಾಗಿ ನೋಟು ಹಂಚಿಕೆ ಸಂಬಂಧದ ಆಡಿಯೊ ಹರಿದಾಡಿದೆ. ಶಾಸಕ ಶಿವಲಿಂಗೇಗೌಡ ಅವರ ವಿರುದ್ಧವೂ ಹೈಕಮಾಂಡ್ ಶಿಸ್ತು ಕ್ರಮ ಕೈಗೊಳ್ಳಲಿ’ ಎಂದು ಒತ್ತಾಯಿಸಿದರು.’ಡಿಸೆಂಬರ್‌ನಲ್ಲಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವುದು ನಿಶ್ಚಿತ’ ಎಂದು ಈ ಹಿಂದೆ ಹಲವು ಬಾರಿ ಹೇಳಿಕೆ ನೀಡಿದ್ದ ಅವರು, ಇತ್ತೀಚೆಗಷ್ಟೇ, ‘ಯಾವ ಡಿಸೆಂಬರ್ ಎಂದು ನಾನು ಹೇಳಿಲ್ಲ’ ಎಂದೂ ಸ್ಪಷ್ಟನೆ ನೀಡಿದ್ದರು.

[t4b-ticker]
error: Content is protected !!