ಕಡಬ ಪಟ್ಟಣ ಪಂಚಾಯತ್ ಚುನಾವಣೆ: ಕಾಂಗ್ರೆಸ್ 8 ಸ್ಥಾನದಲ್ಲಿ ಗೆಲುವು | ಬಿಜೆಪಿ 5 ಸ್ಥಾನಗಳಿಗೆ ತೃಪ್ತಿ

Picture of Savistara

Savistara

Bureau Report

ಕಡಬ: ಇಲ್ಲಿನ ಪಟ್ಟಣ ಪಂಚಾಯತ್‌ನ 13 ವಾರ್ಡ್ಗಗಳಿಗೆಆ.17ರಂದು ಚುನಾವಣೆ ನಡೆದಿದ್ದು, ಇಂದು (ಆ.20) ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಂಡಿದೆ. ಜಿದ್ದಾ ಜಿದ್ದಿನ ಹೋರಾಟದಲ್ಲಿ ಕಾಂಗ್ರೆಸ್ 8 ಸ್ಥಾನದಲ್ಲಿ ವಿಜಯಶಾಲಿಯಾಗಿದ್ದು, ಅಧಿಕಾರದ ಗದ್ದುಗೆಗೆ ಏರಳಿದೆ. ತೀವ್ರ ಪೈಪೋಟಿ ನೀಡಿರುವ ಬಿಜೆಪಿ ಬಿಜೆಪಿ 5 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ.

ವಿಜೇತರ ವಿವರ6ವಾರ್ಡ್ 1-ಕಳಾರ:

ಹಿಂದುಳಿದ ವರ್ಗ ಎ’ ಮಹಿಳೆಗೆ ಮೀಸಲಾದ ಕಳಾರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ತಮನ್ನಾ ಜಬೀನ್ 201 ಮತ ಪಡೆದು ವಿಜಯಿಯಾಗಿದ್ದಾರೆ. ಬಿಜೆಪಿಯಿಂದ ಪ್ರೇಮಾ 0, ಎಸ್‌ಡಿಪಿಐನಿಂದ ಸಮೀರಾ ಹಾರಿಸ್ 74, ಪಕ್ಷೇತರರಾಗಿ ಜೈನಾಬಿ. 139 ಮತಗಳನ್ನು ಪಡೆದಿದ್ದಾರೆ.

ವಾರ್ಡ್ 2-ಕೋಡಿಬೈಲು:

ಪರಿಶಿಷ್ಠ ಜಾತಿ ಮಹಿಳೆಗೆ ಮೀಸಲಾದಕೋಡಿಬೈಲು ಕ್ಷೇತ್ರದಲ್ಲಿ ಜೆಪಿಯಿಂದ ಕುಸುಮ ಅಂಗಡಿಮನೆ 187 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಮೋಹಿನಿ 177 ಮತ ಪಡೆದಿದ್ದಾರೆ-4 ನೋಟಾ ಮತಗಳು ಬಿದ್ದಿವೆ.

ವಾರ್ಡ್ 3-ಪನ್ಯ:

ಸಾಮಾನ್ಯ ಅಭ್ಯರ್ಥಿಗೆ ಮೀಸಲಾದ ಪನ್ಯಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮಹಮ್ಮದ್ ಪೈಝಲ್ 320 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ, ಬಿಜೆಪಿಯಿಂದ ಆದಂ ಕುಂಡೋಳಿ 75, ಎಸ್‌ಡಿಪಿಐನಿಂದ ಹಾರಿಸ್ ಕಳಾರ 6, ಮುಸ್ಲಿಂ ಲೀಗ್‌ನಿಂದ ಕೆ. ಅಬ್ದುಲ್ ರಝಾಕ್ 2 ಮತಗಳನ್ನು ಪಡೆದಿದ್ದಾರೆ.

ವಾರ್ಡ್ 4-ಬೆದ್ರಾಜೆ:

ಸಾಮಾನ್ಯ ಮೀಸಲು ಬೆದ್ರಾಜೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸೈಮನ್ ಸಿ.ಜೆ 232 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ, ಬಿಜೆಪಿಯಿಂದ ಅಶೋಕ್ ಕುಮಾರ್ ಪಿ. 168 ಮತಗಳನ್ನು ಪಡೆದಿದ್ದಾರೆ.

ವಾರ್ಡ್ 5-ಮಾಲೇಶ್ವರ:

ಹಿಂದುಳಿದ ವರ್ಗಎ’ಗೆ ಮೀಸಲಾದಮಾಲೇಶ್ವರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಹನೀಫ್ ಕೆ.ಎಂ. 297 ಮತ ಪಡೆದು ವಿಜಯಿಯಾಗಿದ್ದಾರೆ. ಬಿಜೆಪಿಯಿಂದ ಪ್ರಕಾಶ್ ಎನ್.ಕೆ.213 ಮತ ಪಡೆದಿದ್ದಾರೆ.

ವಾರ್ಡ್ 6-ಕಡಬ:

ಸಾಮಾನ್ಯ ಮಹಿಳೆಗೆ ಮೀಸಲಾದ ಕಡಬ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ನೀಲಾವತಿ ಶಿವರಾಮ್ 314 ಮತ ಪಡೆದು ವಿಜಯಿಯಾಗಿದ್ದಾರೆ, ಬಿಜೆಪಿಯಿಂದ ಪ್ರೇಮಾ 176 ಮತ, ಪಕ್ಷೇತರರಾಗಿ ಆಲೀಸ್ ಚಾಕೊ 16, ಎಸ್‌ಡಿಪಿಐನಿಂದ ಸ್ವಾಲಿಯತ್ ಜಸೀರಾ 78 ಮತ ಪಡೆದಿದ್ದಾರೆ.

ವಾರ್ಡ್ 7-ಪಣೆಮಜಲು:

ಹಿಂದುಳಿದ ವರ್ಗ ಬಿ’ಗೆ ಮೀಸಲಾದಪಣೆಮಜಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ರೋಹಿತ್ ಗೌಡ 333 ಮತ ಪಡೆದು ವಿಜಯಿಯಾಗಿದ್ದಾರೆ. ಬಿಜೆಪಿಯಿಂದ ಗಣೇಶ್ ಗೌಡ 248 ಮತ ಪಡೆದಿದ್ದಾರೆ.

ವಾರ್ಡ್ 8-ಪಿಜಕ್ಕಳ:

ಸಾಮಾನ್ಯ ಮೀಸಲು ಪಿಜಕ್ಕಳ ಕ್ಷೇತ್ರದಲ್ಲಿ ಬಿಜೆಪಿಯಿಂದ ದಯಾನಂದ ಗೌಡ ಪಿ. 386 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಅಶ್ರಫ್ ಶೇಡಿಗುಂಡಿ 184 ಮತಗಳನ್ನು ಪಡೆದಿದ್ದಾರೆ.

ವಾರ್ಡ್ 9-ಮೂರಾಜೆ:

ಹಿಂದುಳಿದ ವರ್ಗಎ’ಗೆ ಮೀಸಲಾದ ಮೂರಾಜೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕೃಷ್ಣಪ್ಪ ಪೂಜಾರಿ 263 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಬಿಜೆಪಿಯಿಂದ ಕುಂಞಣ್ಣ ಕುದ್ರಡ್ಕ 235 ಮತ, 5 ನೋಟಾ ಮತಗಳು ಬಿದ್ದಿವೆ.

ವಾರ್ಡ್ 10-ದೊಡ್ಡಕೊಪ್ಪ:

ಸಾಮಾನ್ಯ ಮಹಿಳೆಗೆ ತಪ್ಪಿದದೊಡ್ಡಕೊಪ್ಪ ಕ್ಷೇತ್ರದಲ್ಲಿ ಬಿಜೆಪಿಯಿಂದ ಗುಣವತಿ ರಘುರಾಮ 393 ಮತ ಪಡೆದು ವಿಜಯಿಯಾಗಿದ್ದಾರೆ, ಕಾಂಗ್ರೆಸ್‌ನಿಂದ ತುಳಸಿ ಅವರಿಗೆ 258 ಮತ ಹಾಗೂ 9ನೋಟಾ ನತ ಬಿದ್ದಿದೆ.

ವಾರ್ಡ್ 11-ಕೋಡಿಂಬಾಳ:

ಸಾಮಾನ್ಯ ಮಹಿಳೆಗೆ ಮೀಸಲಾದಕೋಡಿಂಬಾಳ ಕ್ಷೇತ್ರದಲ್ಲಿ ಬಿಜೆಪಿಯಿಂದ ಅಕ್ಷತಾ ಬಾಲಕೃಷ್ಣ ಗೌಡ265 ಮತ ಪಡೆದು ವಿಜಯಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಜ್ಯೋತಿ ಡಿ.ಕೋಲ್ಪೆ 255 ಮತ ಪಡೆದಿದ್ದಾರೆ.

ವಾರ್ಡ್ 12-ಮಜ್ಜಾರು:

ಪರಿಶಿಷ್ಠ ಜಾತಿ ಅಭ್ಯರ್ಥಿಗೆ ಮೀಸಲಾದಮಜ್ಜಾರು ಕ್ಷೇತ್ರದಲ್ಲಿ ಬಿಜೆಪಿಯಿಂದ ಮೋಹನ 306 ಮತ ಪಡೆದು ವಿಜಯಿಯಾಗಿದ್ದಾರೆ, ಕಾಂಗ್ರೆಸ್‌ನಿಂದ ಉಮೇಶ್ ಮಡ್ಯಡ್ಕ ಸ್ಪರ್ಧಿಸಿ 238 ಮತ ಪಡೆದಿದ್ದಾರೆ. 2 ನೋಟಾ ಮತಗಳು ಬಿದ್ದಿವೆ.

ವಾರ್ಡ್ 13-ಪುಳಿಕುಕ್ಕು:

ಪರಿಶಿಷ್ಠ ಪಂಗಡಕ್ಕೆ ಮೀಸಲಾದ ಪುಳಿಕುಕ್ಕು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕೃಷ್ಣ ನಾಯ್ಕ 315 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ, ಬಿಜೆಪಿಯಿಂದ ಸದಾನಂದ ನಾಯ್ಕ ಅವರು ಸ್ಪರ್ಧಿಸಿ 264 ಮತ ಪಡೆದಿದ್ದಾರೆ.

News Updates

ಮಂಗಳೂರು : ಬೈಕಂಪಾಡಿ, ಕೂಳೂರು ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ₹11.63 ಕೋ ರೂ. ಅಧಿಕ ಅನುದಾನ ಮಂಜೂರು | ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ : ಸಂಸದ ಕ್ಯಾ.ಬ್ರಿಜೇಶ್ ಚೌಟ

[t4b-ticker]
error: Content is protected !!