ಕಡಬ: ಕಡಬ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಗೆ ಮುಖಭಂಗವಾಗಿದೆ,13 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 8 ಕ್ಷೇತ್ರ ಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು ಬಿಜೆಪಿ 5 ಸ್ಥಾನಕ್ಕೆ ತೃಪ್ತಿಪಟ್ಟಿದೆ ಕಳೆದ ಲೋಕಸಭಾ ಚುನಾವಣೆಯಲ್ಲಿ 8 ವಾರ್ಡ್ ಗಳಲ್ಲಿ ಲೀಡ್ ಪಡೆದುಕೊಂಡಿದ್ದ ಬಿಜೆಪಿಗೆ ಈ ಬಾರಿ ಹಿನ್ನಡೆಯಾಗಿದೆ. ಕಡಬ ದಲ್ಲಿ ಪರಿವಾರ ಸಂಘಟನೆ ಪ್ರಬಲವಾಗಿದ್ದಾಗಲೂ ಬಿಜೆಪಿ ಗೆ ಈ ಸೋಲು ಶಾಕ್ ನೀಡಿದ್ದು ಸ್ಥಳೀಯ ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಡಬ ವ್ಯಾಪ್ತಿಯಲ್ಲಿ ಹೆಚ್ಚಿನ ಒಕ್ಕಲಿಗ ಮತದಾರರು ಬಿಜೆಪಿ ಪರವಾಗಿ ವೋಟ್ ಮಾಡುತ್ತ ಬಂದಿದ್ದಾರೆ ಕಳೆದ ಅನೇಕ ವರ್ಷಗಳಿಂದ ಸಮುದಾಯ ವ್ಯಕ್ತಿಗಳಿಗೆ ರಾಜಕೀಯ ಪ್ರಾತಿನಿಧ್ಯ ನಿರಾಕರಿಸುತ್ತ ಬಂದಿರುವುದು ಬಿಜೆಪಿ ನಾಯಕರ ಬಗ್ಗೆ ಸಮುದಾಯದ ಮತದಾರರ ಲ್ಲಿ ಅಸಮಾಧಾನವಿದೆ.ಗೆದ್ದೇ ಗೆಲ್ಲುತ್ತೇವೆ ಅತಿಯಾದ ಆತ್ಮವಿಶ್ವಾಸ ಟೀಮ್ ವರ್ಕ್ ಮಾಡದಿರುವುದು, ಮತದಾರರ ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಬಿಜೆಪಿ ಸೋಲಿಗೆ ಕಾರಣವಾಗಿದೆ ಅಲ್ಲದೆ ಸ್ಥಳೀಯವಾಗಿ ಎರಡನೇ ಹಂತದ ನಾಯಕರನ್ನು ಬೆಳೆಸದಿರುವುದು,ಹೊಸ ಮುಖಗಳನ್ನು ಪರಿಚಯಿಸುವಲ್ಲಿ ವಿಫಲತೆ ಕಾರ್ಯಕರ್ತ ವಲಯದಲ್ಲಿ ಬೇಸರಕ್ಕೆ ಕಾರಣವಾಗಿದೆ.ಸುಳ್ಯ ವಿಧಾನಸಭಾ ವ್ಯಾಪ್ತಿಯಲ್ಲಿ ಸುಳ್ಯ ನಂತರ ಎರಡನೇ ತಾಲೂಕು ಕೇಂದ್ರವಾಗಿರುವ ಕಡಬ ದಲ್ಲಿ ಬಿಜೆಪಿ ಯ ಸೋಲು ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ರಾಜಕೀಯ ಬೆಳವಣಿಗೆಗೆ ಪೂರಕವಾಗುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ ಗ್ಯಾರಂಟಿ,ಶಕ್ತಿ ಯೋಜನೆ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ಗೆ ಪ್ಲಸ್ ಗೆ ಪರಿಣಮಿಸಿದೆ.
ಕಡಬ ಪಟ್ಟಣ ಪಂಚಾಯತ್ ಚುನಾವಣೆ ಕಾಂಗ್ರೆಸ್ ಗೆ ಬಹುಮತ| ಬಿಜೆಪಿಗೆ ಮುಳುವಾದ ಅತಿಯಾದ ಆತ್ಮವಿಶ್ವಾಸ, ಜಾತಿ ಫ್ಯಾಕ್ಟರ್, ಎರಡನೇ ಹಂತ ನಾಯಕರ ಕಡೆಗಣನೆ
Savistara
Bureau Report
[t4b-ticker]














































