ಮೂಡಬಿದಿರೆ: ಭಾರತೀಯ ದೃಷ್ಟಿಕೋನ ಹಾಗೂ ವಿಶ್ಲೇಷಣೆಯ ಕುರಿತ’ಚರಿತಪಂಚಕ’ ಪುಸ್ತಕ ಬಿಡುಗಡೆ ಕಾರ್ಯಕ್ರಮ

Picture of Savistara

Savistara

Bureau Report

ಪಂಚಪರಿವರ್ತನೆಯ ವಿಷಯಗಳಾದ ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನ ಶೈಲಿ, ನಾಗರಿಕ ಶಿಷ್ಟಾಚಾರ – ಕುರಿತು ಭಾರತೀಯ ದೃಷ್ಟಿಕೋನ ಹಾಗೂ ವಿಶ್ಲೇಷಣೆಯ ಕುರಿತ ‘ಚರಿತಪಂಚಕ‘ ಪುಸ್ತಕವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಶ್ರೀ ಸುಧೀರ್, ದಕ್ಷಿಣಮಧ್ಯ ಕ್ಷೇತ್ರದ ಸಂಘಚಾಲಕ ಡಾ। ಪಿ. ವಾಮನ್ ಶೆಣೈ, ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಶ್ರೀ ಜಿ ಎಸ್ ಉಮಾಪತಿ ಆಳ್ವಾಸ್ ಕಾಲೇಜಿನ ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಲೋಕಾರ್ಪಣೆ ಮಾಡಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀ ನಾರಾಯಣ ಶೇವಿರೆ ಅವರು ಬರೆದಿರುವ ಈ ಪುಸ್ತಕವನ್ನು ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿದೆ.

[t4b-ticker]
error: Content is protected !!