‘ಅವರು ಆರೆಸ್ಸೆಸ್‌ ಗೀತೆಯನ್ನು ಹಾಡಬಹುದು, ಅಂಬಾನಿ ಮಗನ ಮದುವೆಯಲ್ಲೂ ಪಾಲ್ಗೊಳ್ಳಬಹುದು’ : ಡಿಕೆಶಿ ವಿರುದ್ಧ ರಾಜಣ್ಣ ವಾಗ್ದಾಳಿ

Picture of Savistara

Savistara

Bureau Report

ತುಮಕೂರು : “ಅವರು ಆರೆಸ್ಸೆಸ್ ಗೀತೆಯನ್ನು ಹಾಡಬಹುದು, ಕುಂಭಮೇಳಕ್ಕೂ ಹೋಗಬಹುದು, ಅಂಬಾನಿ ಮಗನ ಮದುವೆಯಲ್ಲೂ ಪಾಲ್ಗೊಳ್ಳಬಹುದು, ಆದರೆ ನಾವು ಮಾಡಿದರೆ ಮಾತ್ರ ತಪ್ಪು. ಇದಕ್ಕೆ ಕಾಲವೇ ಉತ್ತರ ನೀಡಲಿದೆ” ಎಂದು ಮಾಜಿ ಸಹಕಾರ ಸಚಿವ ಹಾಗೂ ಮಧುಗಿರಿ ಶಾಸಕ ಕೆ.ಎನ್‌.ರಾಜಣ್ಣ ಅವರು ಡಿಸಿಎಂ ಡಿ.ಕೆ.ಶಿವಕುಮಾ‌ರ್ ವಿರುದ್ಧ ಕಿಡಿಕಾರಿದ್ದಾರೆ.ತುಮಕೂರು ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯ ವೇಳೆಗೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಸಮಸ್ಯೆಗಳು ಬಗೆಹರಿಯುತ್ತದೆಯೇ ಎಂದು ಎಐಸಿಸಿ ಅಧ್ಯಕ್ಷರು ಹೇಳಿದ ನಂತರವೂ ಕುಟುಂಬ ಸಮೇತ ಕುಂಭಮೇಳಕ್ಕೆ ಹೋಗಿ ಬರತ್ತಾರೆ. ಕೋಮುವಾದಿಗಳಿಗೆ ಬೆಂಬಲವಾಗಿರುವ ಮುಖೇಶ್ ಅಂಬಾನಿ ಮಗನ ಮದುವೆಗೆ ಹೋಗುವುದಿಲ್ಲ ಎಂದು ಸ್ವತಃ ರಾಹುಲ್ ಗಾಂಧಿ ಅವರು ಹೇಳಿದ ನಂತರವೂ ಅಂಬಾನಿ ಮಗನ ಮದುವೆ ಹೋಗುತ್ತಾರೆ. ಆರೆಸ್ಸೆಸ್ ಕಾಂಗ್ರೆಸ್‌ ಸಿದ್ಧಾಂತಕ್ಕೆ ತದ್ವಿರುದ್ದ ಎಂದು ಗೊತ್ತಿದ್ದರೂ ಸದನದಲ್ಲಿ ಆರೆಸ್ಸೆಸ್ ಗೀತೆ ಹಾಡುತ್ತಾರೆ. ಸದನಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿ ಶಾಸಕರ ಸಭೆ ನಡೆಸಬಹುದು, ನಾವು ನಡೆಸಿದರ ಅಪರಾಧ. ಈ ಎಲ್ಲಾ ವೈರುಧ್ಯಗಳಿಗೆ ಸೂಕ್ತ ಸಮಯದಲ್ಲಿ ಉತ್ತರ ನೀಡಲಿದ್ದೇನೆ ಎಂದು ಅಸಮಾಧಾನ ಹೊರಹಾಕಿದರು.

[t4b-ticker]
error: Content is protected !!