ವರ್ಷಾಂತ್ಯದೊಳಗೆ ರಾಷ್ಟ್ರೀಯಕ್ರೀ ಡಾ ಮಂಡಳಿ ರಚನೆ

Picture of Savistara

Savistara

Bureau Report

ನವದೆಹಲಿ: ಕುತೂಹಲದಿಂದ ಕಾಯಲಾಗುತ್ತಿರುವ ರಾಷ್ಟ್ರೀಯಕ್ರೀಡಾ ಮಂಡಳಿಯನ್ನು ಡಿಸೆಂಬರ್ ಅಂತ್ಯದೊಳಗೆ ರೂಪಿಸಲಾಗುತ್ತದೆ. ರಾಷ್ಟ್ರೀಯ ಫೆಡರೇಷನ್‌ಗಳಿಗೆ ಮಾನ್ಯತೆ ನೀಡುವ ಅಥವಾ ಅಮಾನತು ಮಾಡುವ, ಅವುಗಳ ಹಣಕಾಸು ವ್ಯವಹಾರಗಳ ಕಣ್ಣಾವಲಿಡುವ ಪರಮಾಧಿಕಾರವನ್ನು ಈ ಮಂಡಳಿ ಹೊಂದಿದೆ.

ಬರುವ ಜನವರಿಯಿಂದ ಕ್ರೀಡಾನೀತಿ ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ಬರಲಿದೆ ಎಂದು ಕ್ರೀಡಾ ಸಚಿವ ಮನ್ನುಖ್ ಮಾಂಡವೀಯ ಭರವಸೆ ನೀಡಿದ್ದರು. ಈಗ ಕ್ರೀಡಾ ಮಂಡಳಿಯ ರಚನೆ ಈ ಪ್ರಕ್ರಿಯೆಯಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ.’ರಾಷ್ಟ್ರೀಯ ಕ್ರೀಡಾ ಮಂಡಳಿಯನ್ನು ಮೂರು ತಿಂಗಳಲ್ಲಿ ರಚಿಸಲಾಗುತ್ತದೆ. ಪ್ರಕ್ರಿಯೆಗೆ ಈಗಾಗಲೇ ವೇಗ ನೀಡಲಾಗಿದೆ. ನಿಯಮಗಳನ್ನು ರೂಪಿಸುವ ಮತ್ತು ಕ್ರೀಡಾ ನೀತಿಯ ಜಾರಿ ಕೆಲಸವೂ ನಡೆಯುತ್ತಿದೆ’ ಎಂದು ಕ್ರೀಡಾ ಸಚಿವಾಲಯದ ಮೂಲವು ಶನಿವಾರ ಪಿಟಿಐಗೆ ತಿಳಿಸಿದೆ. ಆದರೆ ಇದಕ್ಕೆ ಸಂಬಂಧಿಸಿ ವಿವರಗಳನ್ನು ಬಹಿರಂಗಪಡಿಸಲಿಲ್ಲ.

News Updates

ಎಲೆ ಚುಕ್ಕೆ ಸೇರಿ ಅಡಿಕೆ ರೋಗ ಬಾಧೆಗೆ ಶಾಶ್ವತ ಪರಿಹಾರಕ್ಕಾಗಿ ನಿಯಮ 377ರಡಿ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.ಚೌಟ | CPCRI ನೇತೃತ್ವದಲ್ಲಿ ರೋಗ ನಿಯಂತ್ರಣ ವೆಚ್ಚ ಆಧಾರಿತ ವೈಜ್ಞಾನಿಕ ಅಧ್ಯಯನ, MIDH ನಿಯಮ ತಿದ್ದುಪಡಿಗೆ ಒತ್ತಾಯ

[t4b-ticker]
error: Content is protected !!