ಬಾಂಗ್ಲಾ ವಿರುದ್ಧ ಶ್ರೀಲಂಕಾಕ್ಕೆ 6 ವಿಕೆಟ್‌ಗಳ ಜಯ

Picture of Savistara

Savistara

Bureau Report

ಅಬುಧಾಬಿ : ಪಥುಮ್ ನಿಸಾಂಕ (50;34ಎ) ಮತ್ತು ಕಮಿಲ್ಮಿಶಾರ (ಔಟಾಗದೇ 46;32ಎ) ಅವರ ಬ್ಯಾಟಿಂಗ್‌ ಬಲದಿಂದ ಶ್ರೀಲಂಕಾ ತಂಡವು ಶನಿವಾರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಬಾಂಗ್ಲಾದೇಶ ತಂಡವನ್ನು ಮಣಿಸಿ, ಶುಭಾರಂಭ ಮಾಡಿತು.

ಅನುಭವಿ ಸ್ಪಿನ್ನರ್ ವನಿಂದು ಹಸರಂಗ (25ಕ್ಕೆ 2) ನೇತೃತ್ವದಲ್ಲಿ ಶ್ರೀಲಂಕಾದ ಬೌಲರ್‌ಗಳು, ಬಾಂಗ್ಲಾದೇಶ ತಂಡವನ್ನು 5 ವಿಕೆಟ್‌ಗೆ 139 ರನ್‌ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದರು. ಈ ಗುರಿಯನ್ನು ಬೆನ್ನಟ್ಟಿದ ಲಂಕಾ ತಂಡವು ಇನ್ನೂ 32 ಎಸೆತಗಳು ಬಾಕಿ ಇರುವಂತೆ 4 ವಿಕೆಟ್‌ಗೆ 140 ರನ್ ಗಳಿಸಿ ಸಂಭ್ರಮಿಸಿತು.ಆರಂಭಿಕ ಆಟಗಾರ ಕುಶಾಲ್ ಮೆಂಡಿಸ್ (3) ಬೇಗನೇ ಔಟಾದರು. ನಂತರದಲ್ಲಿ ಪಥುಮ್ ಮತ್ತು ಕಮಿಲ್ ಎರಡನೇ ವಿಕೆಟ್ ಜೊತೆಯಾಟದಲ್ಲಿ ಬಿರುಸಿನ 95 ರನ್ (52ಎ) ಸೇರಿಸಿ, ತಂಡವನ್ನು ಗೆಲುವಿನತ್ತ ಕೊಂಡೊಯ್ದರು.ಇದಕ್ಕೂ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಾಂಗ್ಲಾ ತಂಡ ರನ್ ಖಾತೆ ತೆರೆಯುವ ಮೊದಲೇ 2 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತ್ತು. ಒಂದು ಹಂತದಲ್ಲಿ ತಂಡವು 53 ರನ್ ಗಳಾಗುವಷ್ಟರಲ್ಲಿ ನಾಯಕ ಲಿಟನ್ ದಾಸ್ (28) ಅವರನ್ನೂ ಸೇರಿ (9.5 ಓವರ್) 5 ವಿಕೆಟ್ ಕಳೆದುಕೊಂಡು ಕುಸಿತ ಅನುಭವಿತ್ತು. ಆದರೆ ಜೇಕರ್ ಅಲಿ (ಅಜೇಯ 41, 34ಎ) ಮತ್ತು ಶಮೀಮ್ ಹುಸೇನ್ (ಅಜೇಯ 42, 34ಎ, 4×3, 6×1) ಮುರಿಯದ ಆರನೇ ವಿಕೆಟ್‌ಗೆ 86 ರನ್ ಸೇರಿಸಿ ತಂಡದ ನೆರವಿಗೆ ನಿಂತರು.

ಸಂಕ್ಷಿಪ್ತ ಸ್ಕೋರು:

ಬಾಂಗ್ಲಾದೇಶ: 20 ಓವರುಗಳಲ್ಲಿ 5ಕ್ಕೆ 139 (ಲಿಟನ್ ದಾಸ್ 28, ಜೇಕರ್ ಅಲಿ ಔಟಾಗದೇ 41, ಶಮೀಮ್ ಹುಸೇನ್ ಔಟಾಗದೇ 42; ವನಿಂದು ಹಸರಂಗ 25ಕ್ಕೆ2).ಶ್ರೀಲಂಕಾ: 14.4 ಓವರ್‌ಗಳಲ್ಲಿ 4 ವಿಕೆಟ್‌ಗೆ 140: ಪಥುಮ್ ನಿಸಾಂಕ 50, ಕಮಿಲ್ ಮಿಶಾರ ಔಟಾಗದೇ 46; ಮೆಹದಿ ಹಸನ್ 29ಕ್ಕೆ 2). ಫಲಿತಾಂಶ: ಶ್ರೀಲಂಕಾಕ್ಕೆ 6 ವಿಕೆಟ್‌ಗಳ ಜಯ. ಪಂದ್ಯದ ಆಟಗಾರ: ಕಮಿಲ್ ಮಿಶಾರ

News Updates

ಎಲೆ ಚುಕ್ಕೆ ಸೇರಿ ಅಡಿಕೆ ರೋಗ ಬಾಧೆಗೆ ಶಾಶ್ವತ ಪರಿಹಾರಕ್ಕಾಗಿ ನಿಯಮ 377ರಡಿ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.ಚೌಟ | CPCRI ನೇತೃತ್ವದಲ್ಲಿ ರೋಗ ನಿಯಂತ್ರಣ ವೆಚ್ಚ ಆಧಾರಿತ ವೈಜ್ಞಾನಿಕ ಅಧ್ಯಯನ, MIDH ನಿಯಮ ತಿದ್ದುಪಡಿಗೆ ಒತ್ತಾಯ

[t4b-ticker]
error: Content is protected !!